ಪುಟ:ಚೆನ್ನ ಬಸವೇಶವಿಜಯಂ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಂ(wed) [ಅಧ್ಯಾಯ ನಿರ್ಗುಣ, ನಿರಂಜನ, ನಿರ್ದಂದ್ರು, ಅವ್ಯಕ್ಕೆ, ಅವ್ಯಯ, ಪರಾತ್ಪರ, ಅದ್ದಿ ತೀಯಬ್ರಹ್ಮ, ವೆಂಬ ಪದಕ್ಕೆ ವಾಡ್ಗವಾದ ಪರವಸ್ತುವೇ ಈ ಲಿಂಗವು. ಇಂತಹ ಲಿಂಗವನ್ನು ಶಿರಸ್ಸಿನಲ್ಲಾಗಲಿ, ಬಾಯಲ್ಲಾಗಲಿ, ಕೊರಲಿನಲ್ಲಾ ಗಲಿ, ಕೌಂಕುಳಿನಲ್ಲಾಗಲಿ, ಎದೆಯಮೇಲಾಗಲಿ ಧರಿಸಬಹುದು, ಆದರೆ ಹೊಕ್ಕುಳಿನಿಂದ ಕೆಳಗಣ ಅಧಶ್ಚರೀರದಲ್ಲಿ ಮಾತ್ರ ಧರಿಸಕೂಡದು, ಅದು ಪಾತಕವು, ಬಳಿಕ ಘಟವಿರುವವರೆಗೂ ಭೋಜನ, ಶಯನ, ಮಲಮ ತ್ರವಿಸರ್ಜನ, ಸಂಗ, ರಾಜಭಯ, ಮೊದಲಾದ ಯಾವ ಸಂದರ್ಭದ ← ದೇಹದಿಂದ ಈ ಲಿಂಗವನ್ನು ಅಗಲಿಸಕೂಡದು. ಈ ಲಿಂಗಕ್ಕೆ ಜಂಗ ಮವೇ ಮುಖವು, ಜಂಗಮನ ಮುಖದಿಂದ ಈ ಲಿಂಗಕ್ಕೆ ತೃಪ್ತಿಯುಂ ಟಾಗುವುದು. ಆ ಜಂಗಮರ ಲಕ್ಷಣವನ್ನು ಕೇಳು- ಆದಿಮಧ್ಯಾಂತಶೂ ನೈನಾಗಿ, ನಿತ್ಯನೂ, ಪರಿಪೂರ್ಣನೂ, ನಿರಾಮಯನೂ, ಸಗುಣಸಿರ್ಗುಣ ನೂ, ಹರಿಬ್ರಹ್ಮ ಶಿವಾದಿಪೂಜ್ಞನೂ ಆಗಿರುವವನೇ ಜಂಗವನು. ಎಂದು ಚೆನ್ನಬಸವೇಶನು ಹೇಳಿವನೆಂಬಿಲ್ಲಿಗೆ ಆರನೆ ಅಧ್ಯಾಯವು ಸಂಪೂ‌ವು. -*** *~ ೭ ನೆ ಅಧ್ಯಾಯವು. ಭ # ರು ದಾ ದಿ ವಾ ಹಾ ತ್ಮ ವು - ಗುರುವರನೆ, ಇನ್ನು ಲಿಂಗಾರ್ಚನಕ್ರಮವನ್ನೂ ಭಸ್ಮರುದ್ರಾಕ್ಷ ಸಾದೋದಕಪ್ರಸಾದಗಳ ಮಾಹಾತ್ಮವನ್ನೂ ನಿರೂಪಿಸಬೇಕೆಂದು ಸಿದ್ದ ರಾಮೇಶನು ಪ್ರಾರ್ಥಿಸಲು, ಚೆನ್ನಬಸವೇಶನು ಹೇಳಲಾರಂಭಿಸಿದನು. ಶಿವ ಪೂಜೆಗೆ ನಕ್ಷತ್ರಗಳೆಲ್ಲ ಆಕಾಶದಲ್ಲಿ ಸಂಪೂರ್ಣವಾಗಿರುವ ಕಾಲವು ಉತ್ತಮವಾದುದು, ಅವುಗಳು ಕಾಂತಿವಿಹೀನವಾಗುತ್ತಿರುವ ಕಾಲವು ಮ ಧ್ಯಮವು, ಸೂರೋದಯಕಾಲದ ಪೂಜೆಯು ಅಧಮವು, ಉತ್ತಮಕಾ ಲದಲ್ಲಿ ಶಿವಸ್ಮರಣೆ ಮಾಡುತ್ತ ನಿದ್ರೆಯಿಂದೆದ್ದು, ಮಲಮೂತ್ರಗಳನ್ನು ವಿಸರ್ಜಿಸಿ, ಮೃತ್ತಿಕಾಶೌಚವನ್ನು ಮಾಡಿ, ಹಸ್ತಮಾದಗಳನ್ನು ತೊಳೆ ದು, ಒಳಕ, ಹಾಲಿರುವ, ಮೊಗ್ಗಾಗುವ, ಮುಳ್ಳಿರುವ, ಮೂರು ಜಾತಿ