ಪುಟ:ಚೆನ್ನ ಬಸವೇಶವಿಜಯಂ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲಜ್ಞಾನವು 4 ದೊರೆಗೆ ತಿಳಿಸುವಲ್ಲಿ, ಅವನು ಅತ್ಯಾಶ್ಚರಗೊಂಡು-ಹರಿದೇವನೆ! ಇನ್ನು ಮುಂದೆ ನೀನು ಆ ವಿರೂಪಾಕ್ಷರೇವಾಲಯದಲ್ಲಿ ಲೆಕ್ಕವನ್ನು ಬರೆದು ಕೊಂಡಿರಬಹುದೆಂದು ಹೇಳಿ ಕಳುಹಿಕೊಡುವನು, ಅದರಂತೆ ಹರಿದೇ. ವನು ಹಂಪೆಗೆ ಬಂದು, ಶಿವಗಣದರಗಳೆಯೆಂಬ ಗ್ರಂಥವನ್ನೂ, ಗಿರಿಜಾ ಕಲ್ಯಾಣವನ್ನೂ ರಚಿಸಿ, ವಿರೂಪಾಕ್ಷಲಿಂಗದಲ್ಲಿ ಕನಾಗುವನು, ಆ ಹ ರೀಶ್ವರನ ಸೋದರಳಿಯನಾದ ಉಭಯಕವಿಶರಭಭೇರುಂಡ ಮೊದಲಾದ ನಾನಾಬಿರುದುಗಳುಳ್ಳ ರಾಘುವಾಂಕನು ಓರುಗಲ್ಲೆಂಬ ಪಟ್ಟಣಕ್ಕೆ ಹೋ। ಗಿ, ಪರವಾದಿಗಳನ್ನೆಲ್ಲ ವಾದದಲ್ಲಿ ಗೆದ್ದು , ವೀರೇಶನಿಂದ ಪದಕವನ್ನು ಪಡೆದು, ವೇಲಾಪುರಿಗೆ (ಬೇಲೂರು) ಹಿಂತಿರುಗಿ ಬಂದು, ಅಲ್ಲಿ ದೇಹ ವನ್ನು ಬಿಟ್ಟು, ಸಮಾಧಿಸ್ಥಿತನಾಗುವನು. ಅಲ್ಲೇ ಪದ್ಯರಸನೆಂಬ ವೀರ ಶೈವನಾದ ಬ್ರಾಹ್ಮಣೋತ್ತಮನು ರಾಜನಲ್ಲಿ ಮ೦ತ್ರಿ ಯಾಗಿ ರು ವ ನು. ಅಲ್ಲಿಗೆ ತ್ರಿಭುವನತಾತಾಚಾರನೆಂಬ ಶ್ರೀವೈಷ್ಟವನು ಬಂದು, ವಾದ ಮಾಡಲು, ಪದ್ಮರಸನು ತೃಣಪುರುಷನನ್ನು ಮಧ್ಯದಲ್ಲಿಟ್ಟು, ತನ್ಮುಖವಾಗಿ ವೈಷ್ಟವನನ್ನು ಗೆದ್ದು, ಶರಣಾಗತನಾದ ಆತನಿಗೆ ವೀರಶೈವದೀಕ್ಷೆಯನ್ನಿ ತು, ಶಿಷ್ಯನನ್ನು ಮಾಡಿಕೊಳ್ಳುವನು. ಬಿಟ್ಟ ಬಲ್ಲಾಳನು ಆ ಪದ್ಮರ ಸನನ್ನು ಕರೆಯಿಸಿ, ತನ್ನಲ್ಲಿಟ್ಟು ಕೊಂಡು, ಒಂದು ಕೆರೆಯನ್ನು ಕಟ್ಟಿಸ ಬೇಕೆಂದು ಅವನ ವಶಕ್ಕೆ ಅಪರಿಮಿತವಾದ ಧನವನ್ನು ಕೊಟ್ಟು ಕಳುಹಿ ಸುವನು, ಆ ಹಣವನ್ನೆಲ್ಲ ಪರಸನು ಜಂಗಮಾರ್ಚನೆಗೆ ವೆಚ್ಚ ಮಾಡಿಬಿ ಡುವನು. ಕಡೆಗೆ ಶಿವಾನುಗ್ರಹದಿಂದ ದೊರೆಗೆ ದೊಡ್ಡ ಕೆರೆಯನ್ನು ರಚಿ ಸಿಕೊಡುವನು. ದೊರೆಯು ಆ ಕೆರೆಯ ಕೆಳಗಣ ಭೂಮಿಯನ್ನು w ಮಂದಿ ಬ್ರಾಹ್ಮಣರಿಗೆ ದಾನಮಡಿ, ನಿಮಗೆ ಯಾವ ಬಯಲಾಗಬೇಕೆಂದು ಪದ್ಮರಸನನ್ನು ಕೇಳಲು, ನಮಗೆ ಈ ಮಾಬಯಲೇ ಸಾಕೆಂದುಹೇಳಿ, ಬಯಲಿನಲ್ಲಿ ಬೆರೆದು ಬಯಲಾಗುವನು, ಪಾಲ್ಕುರಿಕೆ ಸೋಮಾರಾಧನು ಕ್ರಮವಾಗಿ 28 ಶೀಲಗಳನ್ನಾಚರಿಸಿ, ಕಳ್ಳೆಯಕ್ಕೆ ಬಂದು, ಅಲ್ಲಿ ಸಮಾಧಿ ಗೊಳ್ಳುವನು. ಮೋಪೂರಿನ ಭೈರವರಾಜನು ಕರೈಶಾಲಿಯಾಗಿ ಮಲ್ಲಿಸ ಟ್ಟಣಕ್ಕೆ ಬಂದು, ಅಲ್ಲಿ ದೊರೆಯನ್ನು ಕಂಡು, ಅಲ್ಲಿನವರೆಲ್ಲರನ್ನೂ ಗೆದ್ದು, ಬೇಟೆಯ ಪವಾಡದಿಂದ ಅಲ್ಲಿ ವೀರಶೈವದೀಕ್ಷೆಯನ್ನು ಪಡೆದು, ಸಾಸ