ಪುಟ:ಚೆನ್ನ ಬಸವೇಶವಿಜಯಂ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಚಿನ್ನ ಖಸವೇಕವಿಜಯಂ( ಕಾಂಡ) [ಅಧ್ಯಾಯ ಸಕ್ಕೆ ಹೋಗುವನು. ಉಪ್ಪಲಿಕರಣ್ಣಪ್ಪನೆಂಬುವವನು ವಿಷ್ಣುಭಕ್ತನಾಗಿ ರಲು, ಶಿವನು ಕಾಲಿನಲ್ಲಿ ವೈವಮುದ್ರೆಗಳನ್ನು ಹೊಂದಿ ವೇಷಾಂತರ ದಿಂದ ಅವನಲ್ಲಿಗೆ ಬಂದು ಶಿವಭಕ್ತನಾಗೆಂದು ಹೇಳಲು, ವೈಷ್ಣವರೆಲ್ಲ ವಾದಮಾಡಲಾಗಿ, ಕಡುಬೇಸಗೆಯಲ್ಲಿ ಮಳೆಯನ್ನು ಕರೆದು ಕೆರೆಗಳನ್ನೆಲ್ಲ ತುಂಬಿಸಿ, ವೈಷ್ಣವರನ್ನು ಬೆರಗುಗೊಳಿಸಿ, ಸೋಲಿಸಿ, ಶಿವಭಕ್ತರನ್ನು ಮಾಡುವನು. ಸುಗ್ಗಲೂರಿನಲ್ಲಿ ಕಾಟನಾಯಕನೆಂಬ ವಿಷ್ಣುಭಕ್ತನು ಬೇ ಟೆಗೆ ಹೋಗಿ ಒಂದು ಮೊಲವನು ಬೆನ್ನಟ್ಟಿ ಹೋಗಲು ಅದು ಕೆರೆಯಲ್ಲಿ ಬಿದ್ದು ಮುಳುಗಿಕೊಳ್ಳುವುದು, ತಾನೂ ಅದರೊಡನೇ ಬಿದ್ದು ಹಿಡಿಯು ವಲ್ಲಿ ಅದು ಲಿಂಗವಾಗಿರುವುದು, ಅದನ್ನು ತಾನು ಭಕ್ತಿಯಿಂದ ಧರಿಸಿ ಕೊಂಡು ಮಹಾಲಿಂಗದೇವಯ್ಯನೆಂದು ಹೆಸರು ಕರಿಸಿಕೊಂಡು ಕಡೆಗೆ ಆ ಲಿಂಗದಲ್ಲಿ ಐಕ್ಯನಾಗುವನು, ಅಸಗೋಡಮಲ್ಲಪ್ಪಯ್ಯನು ತನ್ನ ಹೊರಿಗೆ ಮುದ್ರೆಯನ್ನೊತಿ ಬಸವನನ್ನಾಗಿ ಬಿಟ್ಟರಲು, ಅದು ಕೆಲಕಾ ಲದ ಮೇಲೆ ಸಾಯಲು, ತಾನು, ತನ್ನ ಹೆಂಡತಿ, ಮಗ, ಮಗನ ಹೆಂಡತಿ ಸಹ ಅದರ ಜತೆಗೆ ಸಮಾಧಿಯಲ್ಲಿ ಕುಳಿತು ಬಸವನ ಪ್ರಾಣವನ್ನು ಬರ ಮಾಡುವನು. ಇವರೇ ಮೊದಲಾದ ಶಿವಶರಣರು ಅಲ್ಲಲ್ಲಿ ಹೀಗೆ ನಾನಾ ಮಹಿಮೆಗಳನ್ನು ತೋರಿಸಿ ಕೈಲಾಸವನ್ನು ಸೇರುವರು ಮುಂದೆ ಹೊ ಸಮಲೆಯಲ್ಲಿ ಕಂಸಲನೆಂಬ ರಾಜಸಿರುವನು. ಅವನ ಕುಮಾರನಾದ ರಾ ಮನಾಥನು ತನಗಾಗಿ ಕುಮ್ಮಟವೆಂಬ ದುರ್ಗವನ್ನು ಕಟ್ಟಿಸಿಕೊಂಡು ವಾಸಮಾಡುತ್ತ ಸುತ್ತಣ ರಾಜರನ್ನೆಲ್ಲಿ ಗೆದ್ದು ಅಧಿರಾಜನಾಗಿ ಹೊಗಳಿಸಿ ಕೊಳ್ಳುತ್ತಿರುವನು ದಿಲ್ಲಿಯ ಖಾನರು ಇವನ ಏಳೆಯನ್ನು ಕೇಳಿ ಲಕ್ಷದ ತೊಂಭತ್ತಾರುಸಾವಿರ ರಾವುತರನ್ನು ಕೂಡಿಕೊಂಡು ಆ ಕುಮ್ಮಟಕ್ಕೆ ಮುತ್ತಿಗೆಯನ್ನು ಹಾಕುವರು. ಆಗ ತಂದೆಮಕ್ಕಳುಗಳು ಅವರಮೇಲೆ ಕಾದು ಅಲ್ಲೇ ಮಡಿಯುವರು. ಅಲ್ಲಿಗೆ ಕುಮ್ಮಟವು ಹಾಳಾಗುವುದು. ಎಂದು ಸಿದ್ದರಾಮೇಶನು ನುಡಿದನೆಂಬಿಲ್ಲಿಗೆ ಒಂಭತ್ತನೆ ಅಧ್ಯಾಯವು ಸಂಪೂರ್ಣವು. Akhಠಿ,