ಪುಟ:ಚೆನ್ನ ಬಸವೇಶವಿಜಯಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

or ಬಸವೇಶayಣಲಿಂಗಭದ್ರಕವು ಧವಾಗಿ ಕೊಂಡಾಡಿ, ರತ್ನ ಖಚಿತವಾದ ಮಂಟಪದಲ್ಲಿ ಗದ್ದುಗೆಯಮೇಲೆ ಆತನನ್ನು ಕುಳ್ಳಿರಿಸಿ, ತಾನೂ ಕುಳಿತುಕೊಂಡು, ಎಡಬಲ ಪಕ್ಕಗಳಲ್ಲಿ ಉಳಿದ ಶರಣ ಸಮೂಹವನ್ನೆಲ್ಲ ಕುಳ್ಳಿರಿಸಿ, ಪದ್ಮಲತತ್ಯ ವನ್ನು ತಿಳಿಯ ಬೇಕೆಂಬ ತಮ್ಮ ಆಶಯವನ್ನು ತಿಳಿಯಪಡಿಸಿದನು. ಮತ್ತೂ ಬಸವೇ ಶನು ಚೆನ್ನಬಸವೇಶನ ಮುಖವನ್ನು ನೋಡಿ, ನಗುತ್ತ, ಶಿವಾರ್ಚನೆಯಾ ಯಿತೆ? ಎಂದು ಕೇಳಿದನು. ಆಗ ಚೆನ್ನಬಸವೇಶನು ನಕ್ಕು, ವಿನಯ ದಿಂದ-ದೀಪವಿಲ್ಲದ ಮೇಲೆ ಕಣ್ಣು ಕಾಣುವುದುಂಟೆ ? ಗುರುಮುಖ ದಿಂದ ದೀಕ್ಷೆಯನ್ನು ಹೊಂದದ ಬಕ ಶಿವಾರ್ಚನೆಯೆಂಬ ಹೆಸರುಂಟೆ ? ಅದುಕಾರಣ, ಸಜ್ಜೆಯನ್ನು ಬಿಚ್ಚಿ, ಈಶ್ವರನ ಪೂಜೆಯನ್ನು ಮಾಡಲು ನನಗಪ್ಪಣೆಯನ್ನು ಮಾಡು, ಎಂದನು. ಅದಕ್ಕೆ ಬಸವೇಶನು- ಹರ ಹಗಾ ! ಲೋಕದಲ್ಲಿ ಗುರುವು ಶಿಷ್ಯನಿಗೆ ಉಪದೇಶಮಾಡುವುದುಂಟು ಆ ಗುರುವಿಗೆ ತಿಪ್ಪನು ಉಪದೇಶಿಸುವುದು ಎಲ್ಲಾದರೂ ಉಂಟೆ ? ನೀನು ಸಾಮಾನ್ಯ ಮನುಷ್ಯನೇ? ತರಹಸ್ಯವನ್ನು ಬೋಧಿಸಿ, ನಮ್ಮ ನ್ನು ರಕ್ಷಿಸುವುದಕ್ಕಾಗಿ ಬಂದಿರುವ ಸಾಕ್ಷಾತ್ ಸಂಗಮೇಶ್ವರನೇ ನೀನು. ನಿನಗೆ ದೀಕ್ಷೆಯನ್ನು ಮಾಡುವುದಕ್ಕೆ ನಾವು ಹೆದರುವೆವು, ಎಂದನು, ಚೆನ್ನಬಸವೇಶವಾದ_ಒಸವಣ್ಣನೆ ! ಇದಕ್ಕೆ ಹೆದರಬೇಕೆ ! ಹಿಂದೆ ನೀನು ಕೊಟ್ಟ ಲಿಂಗವನ್ನು ತೆಗೆದುಕೊಂಡು ಅದೃಶ್ಯನಾದ ಅನಿಮಿಷಯ ನಂತೆ ಮಾಡತಕ್ಕ ಸಾಮರ್ಥ್ಯವು ನನಗಿಲ್ಲ. ಈ ಲಿಂಗಲಕ್ಷಣವನ್ನಾದರೂ ನನಗೆ ತಿಳಿಸಿಕೊಡು ಎಂದು ಹೇಳಿ, ಸಜ್ಜಿಕೆಯನ್ನು ಬಿಚ್ಚಿ, ಲಿಂಗವನ್ನು ಬಸವೇಶನ ಕೈಯಲ್ಲಿಡಲಾಗಿ, “ನನಗೆ ಲಿಂಗಲಕ್ಷಣವನ್ನು ಎಳ್ಳಷ್ಟಾದರೂ ವಿಚಾರಿಸುವುದಸಾಧ್ಯ ” ಎಂದು ಹೇಳಿ ಬಸವೇಶನು ಮರಳಿ ಆ ಲಿಂಗ ವನ್ನು ಚೆನ್ನಬಸವೇಶನ ಹಸ್ತಕ್ಕೆ ಕೊಟ್ಟನು. ಅದನ್ನೇ ಗುರುದೀಕ್ಷೆ ಯೆಂದು ಚೆನ್ನಬಸವೇಶನು ನುಡಿದನು. ಬಳಿಕ ಬಸವೇಶನ-ಪೂರ ವೃತ್ತಾಂತವನ್ನು ನನಗೆ ಹೇಳಿ ಎಚ್ಚರಿಸಿ ಮುಂದೆ ಭವವು ತೊಡಗದಂತೆ ನನ್ನನ್ನು ಕರುಣದಿಂದ ಕಾಪಾಡುವ ತಂದೆಯು ನೀನಿರಲಾಗಿ ನನಗೆ ಕಷ್ಟ ವೇನುಂಟು ? ಅನಿಮಿಷಬ್ಬನಿಗೆ ನಾನು ಕೊಡಲು ಅದೃಶ್ಯವಾದ ಆ ಮಹಾ ಲಿಂಗವು ನನಗೆ ಸಾಧ್ಯವಾಗುವುದು ಹೇಗೆ ? ಸಂಗಮೇಶ್ವರನು ನನ್ನನ್ನು