ಚನ್ನಬಸವೇಶವಿಜಯಂ. ಅಧ್ಯಾತ ಕರೆದುಕೊಳ್ಳುವುದಾವಾಗ ? ಇದನ್ನು ತಿಳುಹಿ, ನನ್ನನ್ನು ಉದ್ಧರಿಸಬೇ ಕೆಂದು ಹೇಳಿ, ನಮಸ್ಕರಿಸಿದನು. ಚೆನ್ನ ಬಸವೇಶನು ಅದಕ್ಕೆ ಪ್ರತಿನನು ಸ್ವಾರವನ್ನು ಮಾಡಿ, ಅಯ್ಯಾ ! ಎಳೆಯ ಹೂಗಾಯನ್ನು ಕೊಯ್ದು ಹ ಣ್ಣನ್ನು ಮಾಡಲಾದೀತೆ ? ನೀನು ಬಂದ ಉದ್ದೇಶದಲ್ಲಿ ತಿಲಮಾತ್ರದಷ್ಟು ಕೆಲಸವೂ ಭೂಲೋಕದಲ್ಲಿ ಸಾಗಿಲ್ಲ. ನೀನು ಈಗ ಇಸ್ಮಲಿಂಗವನ್ನು ಪೂ ಜಿಸುವಹಾಗೆಯೆ ಹೃದಯದಲ್ಲಿ ಪ್ರಾಣಲಿಂಗವನ್ನು ಆರಾಧಿಸಿ, ಪಟ್ಟಲ ತತ್ವಾರ್ಥವನ್ನು ವಿಚಾರ ಮಾಡಿ ಲಿಂಗಾರ್ಪಣ ಸದ್ಭಾವಗಳನ್ನು ಅರಿದರೆ, ನಿನ್ನ ಮನೋರಥವು ಸಫಲವಾದೀತೇ ಹೊರತು ಬರಿಯ ಮಾತಿನಿಂದ ಸಾಧ್ಯವಿಲ್ಲವೆಂದನು. ಅದಕ್ಕೆ ಬಸವೇಶನು ಒಳ್ಳೆಯ ಮಾತನ್ನಪ್ಪಣೆ ಕೊಡಿಸಿದೆ. ನಾನು ಇಷ್ಟು ದಿನವೂ ಹೊರಗಣ ಆಡಂಬರದ ಪೂಜೆಯನ್ನೇ ಮಾಡಿ ಮಾಡಿ ವ್ಯರ್ಥವಾಗಿ ಕಾಲಕಳೆದೆನು. ಮುಂದಾದರೂ ನನಗೆ ನಾ ಲಿಂಗವ ನೆಲೆಯು ಅರಿಯುವಂತೆಯೂ, ಪ್ರಟ್ಟ ಲಭೇದವು ತಿಳಿಯುವಂ ತೆ, ಬೋಧಿಸಬೇಕೆಂದು ಪ್ರಾರ್ಥಿಸಿದನು. ಆಗ ಸಕಲ ಶಿವಗಣಣವೂ ತಿಳಿಯುವಂತೆ ಚೆನ್ನಬಸವೇಶನು ಬೋಧಿಸಿದ ಪಟ್ಟಿಲರಹಸ್ಯವನ್ನು ಒಸ ವೇಶನು ಆಲಿಸಿ, ಎಲೆ ಸದ್ದು ರುವೆ ನೀನು ಸಾಣಲಿಂಗದ ನೆಲೆಯನ್ನು ಬೋಧಿಸಿ, ನನಗೆ ಭವಬಾಧೆಯನ್ನು ತಪ್ಪಿಸಿದೆ, ನಿನ್ನಿಂದ ನನಗೆ ಸಂಗನ ಬಸವೆಶನೆಂಬ ಹೆಸರು ಈಗ ಉಂಟಾಯಿತು, ಆನಿಮಿಫಯನ ವೃತ್ತಾಂ ತವೆನೆಂಬುದನ್ನು ನನಗೆ ಬೋಧಿಸಬೇಕೆಂದು ಪ್ರಾರ್ಥಿಸಿದನು. ಆಗಳಾ ಚೆನ್ನ ಒಸವೆಶ .-- ಎಲೈ ಬಸವಣ್ಣನೆ, ನೀನು ಶಿವನಪ್ಪಣೆಯಮೆರೆ ಭಲೋಕದಲ್ಲಿ ವೀರಶೈವಾಚಾರವನ್ನು ಪ್ರತಿಪ್ಪಿಸುವುದಕ್ಕಾಗಿ ಸಿಳು ನೂರೆಪ್ಪತ್ತಮರಗಣಗಳೊಡನೆ ಈ ಲೋಕದಲ್ಲವತರಿಸಿರುವೆ ನಿನ್ನ ಮಹಿ ಮೆಯನ್ನು ಹೇಳುವುದಕ್ಕೆ ನನಗಸಾಧ್ಯ; ಪೂರದಲ್ಲಿ ನೀನು ಅಸಿಮಿಸಯ್ಯ ನಿಗೆ ಲಿಂಗವನ್ನು ಕೊಟ್ಟ ಬಳಿಕ ಅವನು ಅದೇ ಲಿಂಗದಲ್ಲಿ ಬರೆದು ಸನಾ ಧಿಸ್ಥಿತನಾಗಿದ್ದನು. ಅವನ ಬಳಿಗೆ ಅಲ್ಲಮಪ್ರಭುವೆಂಬ ಜಂಗಮನು ಹೋಗಿ, ಅವನಂಗೈಯಲ್ಲಿದ್ದ ಲಿಂಗವನ್ನು ತೆಗೆದುಕೊಂಡು ನಿಜಾನಂದದಿಂದ ಓಲಾಡುತ್ತ, ಈಗ ನಿನ್ನ ಭಕ್ತಿಯನ್ನು ಪರೀಕ್ಷಿಸುವುದಕ್ಕಾಗಿ ಒರುವನು; ನೀನು ಜಂಗಮವಾಣಿಯಾಗಿದ್ದರೇನೆಯೇ ಇಂತಹ ಜಂಗಮರು ನಿನ್ನ ' ದ.
ಪುಟ:ಚೆನ್ನ ಬಸವೇಶವಿಜಯಂ.djvu/೪೫
ಗೋಚರ