ಪುಟ:ಚೆನ್ನ ಬಸವೇಶವಿಜಯಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಳ ಚೆನ್ನ ಬಸವೇಶವಿಜಯಂ [అధ్యాయ ಅದನ್ನು ಕಂಡು ಇದಲ್ಲವೆ ಪ್ರಾಣಲಿಂಗಾಂಗಿಲಕ್ಷಣ ? ಎಂದು ಚಿಕ್ಕಲಿಂಗ ಣ್ಣನು ನುಡಿದನು. ಅದನ್ನು ಅವನ ಗುರುವು ಕೇಳಿಕೊಂಡು ಸುಮ್ಮನಿದ್ದು ಆ ರಾತ್ರಿ ಚಿಕ್ಕಲಿಂಗಣ್ಣನು ಮಲಗಿಕೊಂಡಿದ್ದಾಗ ಅವನ ಕೊರಲ ಲಿಂಗ ವನ ಕಳಚಿಕೊಂಡು ಬೆಳಗಾದಕೂಡಲೇ ಹೂವನ್ನೆತ್ತಿ ತರುವುದಕ್ಕಾಗಿ ಹೋದನು. ಇತ್ತ ಚಿಕ್ಕಲಿಂಗಣ್ಣನು ಪ್ರಾಣವಿಲ್ಲದೆ ಮಲಗಿಕೊಂಡಿದ್ದನು. ಎಲ್ಲರೂ ಅವನ ಸುತ್ತ ಅಳುತ್ತಿದ್ದರು. ಅಮ್ಮರಲ್ಲಿ ಗುರುವು ಬಂದು ಅವನ ಲಿಂಗವನ್ನು ಅವನ ಕೊರಳಿಗೆ ಕಟ್ಟಬಿಟ್ಟನು. ಒಡನೆಯೇ ಅವನ ಪ್ರಾಣ ವು ಬಂದಿತು. ಸಣ್ಣನೆಂಬ ಮತ್ತೊಬ್ಬ ಜಂಗಮನು ತನ್ನ ಸೂಳೆಯೊ ಡನೆ ರತಿಕ್ಳಿಯಲ್ಲಿರುವಾಗ್ಗೆ ಕರಡಿಗೆಯು ಮಗ್ಗುಲಿಗೆ ಒತ್ತುವುದೆಂಬು ದಾಗಿ ಅದನ್ನು ತೆಗೆದು ಮಂಚದಮೇಲಿರಿಸಿಬಿಟ್ಟಿದ್ದನು. ಅದನ್ನು ನಾವು ಕೇಳಿ ಕಳುವಿನಿಂದ ಮೆಲ್ಲಗೆ ತರಿಸಿಬಿಟ್ಟೆವು. ಆಗ ಆ ಜಂಗಮನ ಪ್ರಾಣ ವೆ? ಹೋಯಿತು, ಅವನ್ನು ನೋಡಿದಕೂಡಲೇ ಸೂಳೆಯ ಪ್ರಾಣವೂ ಹೊಯಿತು. ಬಳಿಕ ನಾವು ಸತ್ಯಣ್ಣನ ಕೊರಲಿಗೆ ಅವನ ಲಿಂಗವನ್ನು ಕಟ್ಟಿಸಲು ಅವನ ಪ್ರಾಣವು ಬಂದಿತು, ಸೂಳೆಯ ಪ್ರಾಣಗೂಡಿಕೊಂ ಡಳು. ಇವನಂತೆಯೆ ಮಾರಣ್ಣನೆಂಬುವನೊಬ್ಬನು ತನ್ನ ಪತ್ನಿಯೊಡನೆ ಮಲಗಿಕೊಂಡಿರುವಾಗ ಒತ್ತುವುದೆಂದು ಸಜ್ಜಿಕೆಯನ್ನು ಈರರ ಕಳೆ ದು ಮಂಚದಮೇಲೆ ಮಡಗಿದ್ದು, ಬೆಳಗಾದಕೂಡಲೇ ಎದ್ದು ಒಬ್ಬರಲಿಂ ಗವನ್ನೊಬ್ಬರು ತೆಗೆದುಕೊಂಡು ಪಲ್ಲಟವಾಗಿ ಧರಿಸಿಕೊಂಡರು. ಕೂಡಲೇ ಇಬ್ಬರ ಪ್ರಾಣವೂ ಹೋಯಿತು, ಅವರ ಮನೆಗೆ ನೀರನ್ನು ಹೊತ್ತು ತರುತ್ತಿದ್ದ ದಾನಿಯ) ಬಂದು ಇವರೀರರೂ ಮಲಗಿರುವುದನ್ನು ಕಂಡ ಕೂಡಲೇ ಅವಳ ಸಾಣವೂ ಹೊಯಿತು. ಈ ಸುದ್ದಿಯು ನಮಗೆ ಬರ ಲು, ಸತ್ಯಣ್ಣನನಕರಸಿ ಇದೇನು ವಿಶೇಷವೆಂದು ಕೇಳಲಾಗಿ, ಅವರು ಗಳು ಪಲ್ಲಟದಿಂದ ಲಿಂಗಧಾರಣವನ್ನು ಮಾಡಿಕೊಂಡಿರುವ ಕಾರಣದಿಂದ ಹೀಗಾಯ್ದೆಂದು ತಿಳುಹಿದನು. ಕೂಡಲೇ ಅವರವರ ಲಿಂಗವನ್ನವರವರ ಕೊರಲಿಗೆ ಕಟ್ಟಿಸಲು, ಪ್ರಾಣವು ಬಂದಿತು, ಒಡನೆಯೆ ಗೌಡಿಯೂ ಪ್ರಾಣಸಮೇತಳಾದಳು. ಎಲೈ ಬಸವಣ್ಣನೆ ! ಮೇಲೆ ಹೇಳಿರುವ ಲಿಂಗ ಣ ಚಿಕ, ಲಿಂಗಣ್ಣ ಸತ್ಯಂಇ ವಾರರುಗಳ ಮಾರಣ ನ ಹೆಂಡತಿಯ ೪ ೯