ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನೀತಿಜೋಧ ಕೊಳ್ಳುತ್ತಿದ್ದು, ಹತ್ತು ದನ್ನು ಟೆಯ ಶಬ್ದವನ್ನು ಕೇಳಿದ ಮಾತ್ರದಿಂ ದಲೇ ಬೆದರಿಬಿದ್ದೆದ್ದು ಓಡಿ ಗಟ್ಟ ಬೆಟ್ಟಗಳನ್ನು ಸೇರಿ ಬಾಯ್ಯಾಡು ವವನು ರಾಜನಾದಾನೆ ? ತಾನು ಎಂತಹ ಸನ್ಮಾರ್ಗಗಾಮಿಯಾಗಿದ್ದರೂ, ಸರ್ತಿಸಂಪನ್ನನಾಗಿದ್ದರೂ, ಸದ್ಧರ್ಮದಿಂದಾರ್ಜಿಸಿದ ಸಂಪತ್ತನ್ನೇ ಪರಿಗ್ರಹಿಸುವವನಾಗಿದ್ದರೂ, ಎಷ್ಮೆ ಪ್ರಾಜ್ಞನಾಗಿದ್ದರೂ, ಅತ್ಯಂತ ದೊರ್ಬಲವುಳವನಾಗಿದ್ದರೂ, ಶತ್ರುಜನರ ವಿಷಯದಲ್ಲಿ ರಾಜನು ಉದಾ ನೀನನಾಗಿ ಕರುಣೆಯನೆಂದಿಗೂ ತೋರಿಸಬಾರದು, ವೇದಗಳಲ್ಲೆಲ್ಲ ಸ ಮವೇದನೆ ಉತ್ತಮವೆನಿಸಿಕೊಂಡಿ~ುವಂತೆ ಉಪಾಯಗಳೊಳಗೆಲ್ಲ ಸ ಮೋಪಾಯವೇ ಪ್ರಶಸ್ಯವಾದುದು; ರಾಜರಿಗೆ ಅನುಸರಣೀಯವಾದು ದು, ಮಿಕ್ಕ ದಾನಛೇದೊಪಾಯಗಳು ಸಾಮಾನ್ಯವಾದುವುಗಳು, ದಂ ತೋ ಸಾದವೆಂಬುದಂತೂ ಕನಿಷ್ಟತಮವಾದುದು. ಈ ತತ್ಯವನ್ನು ತಿಳಿಯದ ರಾಜರು ಉತ್ತಮರನಿಸಿಕೊಳ್ಳಲಾರರು. ಶತ್ರುಸಂಧಾನಮಾ ಡಾಗಳ, ಆನೆ ಕುದುರೆಗಳನ್ನಿರಿ ಸಾರಿಮಾಡುವಾಗಳೂ, ಯುದ್ಧ ಕಾಲದಲ್ಲ, ಸ್ತ್ರೀಯರೊಡನೆ ಕೂಡುವಾಗಳೂ, ಸ್ನಾನ ಶಯನಗಳಲ್ಲ ಛಜನ ಕಾಲದಲ್ಲಿ, ವಿವಾಹಾದಿ ಉತ್ಸವಸಮಯಗಳಲ್ಲೂ ರಾಜರಿಗೆ ಎಚ್ಚರಿಕೆಯು ಹೆತ್ತಾಗಿರಬೇಕು. ತನುಧನಮನೋರಾಜ್ಞಾದಿಸಸ್ತವ್ಯ ಸನವನ್ನು ತೆರೆದು, ಸುಳ್ಳು, ಹಾದರ, ಜಾತಿ ಸಾಂಕ‌, ಕಳವು, ಮೋ ಸಾ, ಪರಂಸೆಗಳನ್ನು ತನ್ನ ರಾಜ್ಯದಲ್ಲಿ ಕಾಲೂರದಂತೆ ಮಾಡಿ, ಪರಿಸಾ ಲಗೆ ಮಾಡುವ ರಾಜಸಿಗೆ ಇಹಪರಗಳೆರ್ಡಲ್ಲೂ ಕೊರತೆಯಿರುವುದಿಲ್ಲ. ಹಿರಿಯರಲ್ಲಿ ಗೌರವವನ್ನೂ, ಗುರುದೈವತೆಗಳಲ್ಲಿ ಭಯವನ್ನೂ, ಪುಣ್ಯಕ್ಷೇ ಪ್ರತೀರ್ಥಗಳಲ್ಲಿ ಭಕ್ತಿಯನ್ನೂ, ಶರಣಾಗತರಲ್ಲಿ ಗೋಪವನ್ನೆಣಿಸದೆ ರಕ್ಷೆ ಸುವುದನ್ನೂ, ಸೇವಕರಲ್ಲಿ ದಯೆಯನ್ನೂ, ಸಜ್ಜರ್ನಲ್ಲಿ ಆದರಣೆಯನ್ನೂ, ಸ್ನೇಹಿತರಲ್ಲಿ ವಿಳಾಸವನ್ನೂ ವಹಿಸಿರುವ ರಾಜನು ನೀತಿವಿಶಾರದನೆನಿಸಿ ಕೊಳ್ಳುವನು. ಐಶ್ರಮದಿಂದ ಮತ್ತನಾಗಿ ಪೂಜ್ಯರನ್ನು ಧಿಕ್ಕರಿಸಿ, ಸೇವಕರಿಗೆ ಕಾಲಕಾಲಕ್ಕೆ ಸಂಬಳ ಕೊಡದೆ, ಸ್ವಾಮಿ-ಅಮಾತ್ಯ-ಸು ಕೃತ್ತು-ಕೋಶ-ರಾಷ್ಟ್ರ-ದುರ್ಗ-ಬಲವೆಂಬ ಸಪ್ತಾಂಗದ ಸನ್ನಾಹದಲ್ಲಿ ಎಚ್ಚರಿಕೆಯಿಲ್ಲದೆ, ಆಪ್ತ ಬಂಧುಗಳನ್ನು ಲೆಕ್ಕಕ್ಕೆ ತರದೆ, ಧರ್ಮಪತ್ನಿಯ