ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಚನ್ನ ಬಸವೇಶವಿಜಯಂ [ಅಧ್ಯಾಯ ಹೋದರು. ಅಸ್ಟ್ರಲ್ಲಿ ಹಡಪದಪ್ಪಣ್ಣನು ನೋಡಿ ಥಟ್ಟನೆ ಒಳಗೆ ಹೋಗಿ ಗಣಸಮೂಹದೊಡನೆ ಶಿವಪೂಜೆಯನ್ನು ಮಾಡುತ್ತ ಕುಳಿತಿರುವ ಬಸವರ ಸನ ಬಳಿಯಲ್ಲಿ ನಿಂತು, ಅಪೂರರಾದ ಜಂಗಮರಿಬ್ಬರು ಬಂದು ತಲೆಬಾಗಿ ಲಲ್ಲಿ ನಿಂತಿರುವರೆಂದು ಬಿನ್ನೈಸಿದನು. ಒಳಗೆ ಬರಮಾಡೆಂದು ಬೆಸಸಲು, ಹಿಂದಿರುಗಿ ಬಂದು, ಸ ಮಿಾ ಒಳಗೆ ಚಿತ್ತೈಸಬೇಕು; ನಿಮ್ಮ ಮಗ ನಾದ ಬಸವೆಶನು ಅತಿ ವಿಶ್ವಾಸದಿಂದ ತಮ್ಮ ಪಾದವನ್ನೇ ನಂಬಿಕೊಂಡಿ ರುವನು; ಆತನನ್ನು ಪರಿಪಾಲಿಸಬೇಕು; ಎಂದು ಶ್ರುತಪಡಿಸಿದನು. ಆಗ ಪ್ರಭುವು, ಅರಮನೆಯನ್ನು ನಾವು ಪ್ರವೇಶಿಸುವುದಿಲ್ಲವೆಂದು ನುಡಿದನು, ಅಪ್ಪಣ್ಣನು ಈ ಸಂಗತಿಯನ್ನು ಬಸವೇಶನಲ್ಲಿ ಅರಿಕೆ ಮಾಡಿದನು, ಅಪ್ಪ ರಲ್ಲಿ ಚೆನ್ನಬಸವೇಶನಿಗೆ ಅರಿವುಂಟಾಗಲು, ಥಟ್ಟನೆದ್ದು, ಬಸವೇಶ್ವರನ ಬಳಿಗೆ ಬಂದು-ಎಲೆ ಹುಚ್ಚಾ ! ಅಲ್ಲಮಪ್ರಭುವೂ ಸಿದ್ದರಾಮೇಶ ರನೂ ನಿನ್ನ ಮನೆಯ ಬಾಗಿಲಲ್ಲಿ ಬಂದು ನಿಂತಿರುವಾಗ ನೀನು ಹೀಗೆ ಮತ್ತನಾಗಿ ಒಳಗೆ ಕುಳಿತಿರಬಹುದೆ ? ಎಂದನು. ಆಗ ಒಸವಣ್ಣನು ಧೈಗೆಟ್ಟು, ಕಗ್ಗನೆ ಕಸಿದುಹೋಗಿ, ಕಂಗೆಟ್ಟು, ತೊಳಲಿ, ಒಳಲಿ, ಇ ನೈನುಗತಿ ! ಯೆಂದು ಚೆನ್ನಬಸವೇಶನ ಅಡಿದಾವರೆಗೆ ಬಿದ್ದು ಮರುಗಿ ದನು. ಆಗ ಚೆನ್ನಬಸವೇಶನು_ಅಯ್ಯಾ ! ಹೆದರಬೇತ; ನಿನ್ನ ಭಕ್ತಿ ಗಾಗಿಯೇ ಪ್ರೀತಿಸಿ ಪ್ರಭುವು ದಯಮಾಡಿರುವನು; ಆದಕಾರಣ, ಅವನು ಒಳಗೆ ಬರದೆ ಹೋಗುವುದಿಲ್ಲ; ಅವನನ್ನು ನಾನು ಕರೆದುಕೊಂಡು ಬರು ತೇನೆ ಎಂದು ಹೇಳಿ, ಭರವಸೆಗೊಟ್ಟು, ಸಮಾಧಾನಪಡಿಸಿ, ನಾನಾಗಣಂ ಗಳನ್ನೆಲ್ಲ ಕರೆದುಕೊಂಡು ಪ್ರಭುವಿನ ಒಳಗೆ ಹೋಗಿ, ಭಕ್ತಿಸಂಧಾನದಿಂ ದಾತನನ್ನು ಒಲಿಸಿ, ಬಸವರಸನ ಮನೆಗೆ ಕರೆದುಕೊಂಡು ಬಂದನು. ಬಳಿಕ ಬಸವರಸನು ಸಿದ್ಧ ಮಾಡಿದ್ದ ಉವೃತಪೀಠದಲ್ಲಿ ಪ್ರಭುವನ್ನು ಕು ೪ರಿಸಿ, ಅರ್ಘಮಾದ್ಯಾದಿಗಳಿಂದರ್ಚಿಸಿ, ಸಂತೋಷಪಡಿಸಿ ಕೊಂಡಾಡಿ ದನು. ಆಗ ಪ್ರಭುವು ಮುಂದೆ ನಿಂತಿರುವ ಸಕಲ ಗಣಗಳನ್ನೂ ನೋಡಿ ಶಿವಾನುಭವಪ್ರಸಂಗದಿಂದ ಅವರ ಮನಸ್ಸಿನ ಸಂಶಯವನ್ನೆಲ್ಲ ತೊಲಗಿಸಿ 'ಸಂತೋಷಗೊಳಿಸಿದನು. ಎಂಬಿಲ್ಲಿಗೆ ಒಂಭತ್ತನೆ ಅಧ್ಯಾಯವು ಸಂಪೂ ರ್ಣವು. ಒಂದನೆಯ ಕಾಂಡವು ಮುಗಿದುದು.