ಚನ್ನಬಸವೇಶವಿಜಯಂ (ಕಾಂಡ ೨) [ಅಧ್ಯಾಯ ತಿರುಗುವಿಕೆಯ ರಭಸದಿಂದುಂಟಾದ ವಾಯುವಿನ ಪಹತಿಯಿಂದ ಅಳಿದು ಎಲ್ಲವೂ ಅವನಲ್ಲಿ ಐಕ್ಯವಾಯಿತು, ಹೀಗೆ ಆ ಪರಶಿವನು ಕಲ್ಪಾಂತದಲ್ಲಿ ತಾಂಡವಾಡಂಬರವನ್ನು ತೋರಿಸಿದುದರಿಂದ ಲೋಕವೆಲ್ಲವೂ ವಿಲಯವಾ ಗಲು, ಬಳಿಕ ಆ ಮಹೇಶನು ಸ್ಮಶಾನರುದ್ರನಾಗಿ ಏಕಪಾದಲೀಲೆಯ ನ್ನು ಧರಿಸಿ ಸಂತೋಷದಿಂದ ವಿಹರಿಸಿದನು. ಎಂದು ಚೆನ್ನಬಸವೇಶನು ಸಿ ದ್ದರಾಮೇಶ್ವರನಿಗೆ ಹೇಳಿದನೆಂಬಿಲ್ಲಿಗೆ ಬಂದನೆ ಅಧ್ಯಾಯವು ಮುಗಿದುದು. -#*#*- ೨ ನೆ ಅಧ್ಯಯವು. ಮ ಹಾ ಸೃಷ್ಟಿಕ ಮು. sex) ಬಳಿಕ ಸಿದ್ದರಾಮೇಶನು ಜಗತ್ತು ಉದಿಸಿದ ರೀತಿಯು ಹೇಗೆಂದು ಪುನಃ ಬೆಸಗೊಳ್ಳಲು, ಚೆನ್ನಬಸವೇಶನು ಹೇಳತೊಡಗಿದನೆಂತೆಂದರೆ-ಆ ನ ಹೇಶ್ವರನಪ್ಪಣೆಯಿಂದ ಮೂಲಪ್ರಕೃತಿಯು ವಿಕಾರವನ್ನು ಹೊಂದಲು ಅ ದರಿಂದ ಮಹತ್ತುದಿಸಿತು. ಆ ಮಹತ್ತಿನಿಂದ ಅಹಂಕಾರವೂ ಅದರಿಂದ ಸತರಜಸ್ತಮಸ್ಸೆಂಬ ತ್ರಿವಿಧಗುಣಗಳೂ ನೈಕಾರಿಕವೂ ಉದಿಸಿದುವು. ಈ ಗುಣಗಳಲ್ಲಿ ತಮೋಗುಣವನ್ನನುಕರಿಸಿ ಮಹೇಶರನ ಹಣೆಯಿಂದ ರುದ್ರನು ಹುಟ್ಟಿದನು, ಆ ಮಹೇಶ್ವರನ ಎಡಭುಜದಿಂದ ಸಾಕಗುಣ ವನ್ನನುಕರಿಸಿ ವಿಷ್ಣುವು ಹುಟ್ಟಿದನು, ಬಲಭುಜದಿಂದ ರಜೋಗುಣವನ್ನ ನುಸರಿಸಿ ಬ್ರಹ್ಮನು ಹುಟ್ಟಿದನು. ವೈಕಾರಿಕೆಯಿಂದ ಶಬ್ದ ಸ್ಪರ್ಶರೂಪರಸ ಗಂಧವೆಂಬ M ಗುಣಗಳೂ, ಅವುಗಳಿಂದ ಆಕಾಶ ವಾಯು ಅಗ್ನಿ ಜಲ ಭೂಮಿ ಯೆಂಬ ೫ ಭೂತಗಳೂ ಸಹ ಹುಟ್ಟಿದವು. ಶಿವಾಜ್ಞೆಯಿಂದ ಆ ವಾಯುವು ಚಲಿಸಿತು. ಆಕಾಶವು ತೆರವುಗೊಂಡಿತು. ಅಗ್ನಿಯು ವಾಯುಸಂಗದಿಂದ ಜಲವನ್ನು ಕೂಡಲು, ಆ ಜಲವು ಕುದಿಕುದಿದು ಭೂ ಮಿಯೊಡನೆ ಸೇರಲು, ಆ ಭೂಮಿಯ ಜಲವೂ ಸಹ ತಪ್ತವಾಗಿ ಹಿರಣ್ಣ ಯವಾದ ತೇಜಸ್ಸಿನಿಂದ ಒಂದು ಅಂಡವಾಗಿ (ಗೋಳವು) ಪರಿಣಮಿಸಿತು.
ಪುಟ:ಚೆನ್ನ ಬಸವೇಶವಿಜಯಂ.djvu/೭೧
ಗೋಚರ