ಪುಟ:ಚೆನ್ನ ಬಸವೇಶವಿಜಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕ್ರದಿ ಬ್ರಹ್ಮ ಸಂತತಿ ರಲ್ಲಿ ವಿಪ್ರಜಿತುವಿಗೆ ಸಿಕ್ಕಿಕೆಯೆಂಬ ಪತ್ನಿಯಲ್ಲಿ ನರಕ, ಸ್ಪರ್ಭಾನು, ವಾ ತಾವಿ ಇಲ್ಪಲ ಮೊದಲಾದ ಮಕ್ಕಳು ಹುಟ್ಟಿದರು. ಹಿರಣ್ಯಾಕ್ಷನ ಹೊ ಟೆಯಲ್ಲಿ ಅಂಧಕಾಸುರನು ಹುಟ್ಟಿದನು, ಅವನಿಗೆ ಉಪದಾನವಿಯೆಂಬವ ಳಲ್ಲಿ ಸಂತಾಪನ, ಶಕುನಿ, ಜರ್ಝರ, ಮಹಾನಾಭ ಮುಂತಾದವರು ಮ ಕೈಳಾಗಿ ಹುಟ್ಟಿದರು. ಬಳಿಕ ಕಶ್ಯಪನಿಗೆ ದನು ಎಂಬ ಪತ್ನಿಯಲ್ಲಿ ತಾರ ಕ, ವಿಧಾತ, ಶಂಖತಿರ, ಗಗನವರ್ಧ, ಶಕುನಿ, ಸುರಾಂತಕ, ಮರೀ ಬೆ, ದುಂದುಭಿ, ವಜನಾಭ, ಶರಭ, ಶಂಬರ, ಶಬಲ, ವಿಪ್ರಜೆತು ಮೊ ದಲಾದ ನೂರು ಮಂದಿ ಮಕ್ಕಳು ಉದಿಸಿದರು, ಕಶ್ಯಪನಿಗೆ ತಾಮ್ಮೆಯೆಂ ಒ ಪತ್ನಿಯಲ್ಲಿ ಒಂದು ಗೊರಸುಳ್ಳ ಕತ್ತೆ ಕುದುರೆ ಮೊದಲಾದುವುಗಳೂ ಪಕ್ಷಗಳೂ ಜನಿಸಿದುವು. ಕಶ್ಯಪನಿಗೆ ವಿನತೆಯಲ್ಲಿ ಅರುಣ ಗರುಡರೂ ಸದಾಮಿನಿಯೆಂಬ ಮಗಳೂ ಹುಟ್ಟಿದರು. ಅರುಣನಿಗೆ ಶೋಣಿತೆಯೆಂ ಬ ಪತ್ನಿಯಲ್ಲಿ ಸಂಗಾತಿ ಜಟಾಯುವೆಂಬುವರು ಹುಟ್ಟಿದರು, ಕಶ್ಯಪ ಸಿಗೆ ಸುರಸೆಯಲ್ಲಿ ಅನೇಕ ತಿರಸ್ಸುಗಳೂ ರಕ್ಕೆಗಳೂ ಉಳ್ಳ ಉರಗಗಳು ಒಂದುಸಾವಿರ ಹುಟ್ಟದುವು, ಕಶ್ಯಪನಿಗೆ ಕದ್ರುವಿನಲ್ಲಿ ಆದಿಶೇಷ, ವಾ ಸುಕಿ, ಕರ್ಕೊಟಕ, ಶಂಖಪಾಲ, ಐರಾವತ, ಕಂಬಳ, ಅಶ್ವತರ, ಪುಪ್ಪದಂಸ್ಕೃತಿ, ನಹುಷ, ವಾಮನ ಮೊದಲಾದ ಸಾವಿರ ನಾಗೇಂದ್ರರು ಜನಿಸಿದರು ಬಳಿಕ ಕಶ್ಯಪನಿಗೆ ಸುರಭಿಯೆಂಬವಳಲ್ಲಿ ಅಮೃತವೂ, ಕಾಮಧೇನುವೂ, ಹಸು ಎಮ್ಮೆಗಳೂ, ಅಪ್ಪರಸ್ತ್ರೀಯರೂ, ಕ್ರೋಧೆ ಯಲ್ಲಿ ರಕ್ಷೆಗಣವೂ ಗಜ ನಿಮ್ಮ ವ್ಯಾಘಾದಿಗಳೂ, ಮುನಿಯೆಂಬು ವಳಲ್ಲಿ ಮುನಿಗಣವೂ, ನವರತ್ನವೂ, ಅರಿಯಲ್ಲಿ ಕಿನ್ನರಗಂಧರ್ವರೂ, ತುಂಬುರರೂ, ಇಳೆಯೆಂಬುವಳಲ್ಲಿ ಗಿರಿ ತುರು ಲತೆ ಮೊದಲಾದುವುಗಳೂ, ನಿಕ್ಕಿ ಕೆಯೆಂಬುವಳಲ್ಲಿ ರಾಹು ಮೊದಲಾದ ನಲವತ್ತು ಮಂದಿಗಳ ಮ ಕೃಳಾಗಿ ಜನಿಸಿದರು, ಹೀಗೆ ಮರೀಜಿ ಬ್ರಹ್ಮನಿಂದ ಕಶ್ಯಪನ ಸಂತತಿಯು ಜಗತ್ತಿನಲ್ಲಿ ವೃದ್ಧಿಗೊಂಡಿರುವುದು. ಬಳಿಕ ಅತ್ರಿ ಸಂತತಿಯು ಹೇಗೆಂದರೆ- ಅತ್ರಿ ಬ್ರಹ್ಮಸಿಗೆ ಹತ್ತು ಮಂದಿ ಪತ್ನಿಯರು, ಅವರಲ್ಲಿ ಅನಸೂಯೆಯೆಂಬುವಳಿಗೆ ಚಂದ್ರನೂ, ದ ತಾತ್ರೇಯನೂ, ದೂರ್ವಾಸನೂ ಮಕ್ಕಳಾಗಿ ಹುಟ್ಟಿದರು.