44... ಚನ್ನಬಸವೇಶವಿಜಯಂ (ಈ೦ರ ೨) (ಅಧ್ಯಾಯ ಆಂಗೀರಸಬ್ರಹ್ಮನಿಗೆ ಸ್ಮತಿಯೆಂಬುವಳಲ್ಲಿ ಗುರು, ಸಂವರ್ತ, ಯೋಗ ಸಿದ್ಧಿಗಳೆಂಬ ಮಕ್ಕಳು ಹುಟ್ಟಿದರು. ಪುಲಸ್ಯಬ್ರಹ್ಮ ನಿಗೆ ಪ್ರೀತಿ ಅಥವಾ ಇಲಬಿಲೆಯೆಂಬ ಪತ್ನಿಯಲ್ಲಿ ವಿಕವಸ್ಸುಯೆಂಬುವನು ಹುಟ್ಟಿದನು. ವಿಶ್ರವಸ್ಸುಗೆ ದೇವರರ್ಣೆಯೆಂ ಬುವಳಲ್ಲಿ ಕುಬೇರನೂ, ಕಿನ್ನರರೂ, ಕೈಕಸೆಯೆಂಬ ಪತ್ನಿ (ರಾಕ್ಷಸ ಕನೈ) ಯಲ್ಲಿ ರಾವಣ, ಕುಂಭಕರ್ಣ, ವಿಭೀಷಣರೆಂಬ ಮೂವರು ಗಂ ಡುಮಕ್ಕಳೂ, ಪುಷ್ಟೋತ್ಕಟೆಯೆಂಬ ಪತ್ನಿ (ರಾಕ್ಷಸಕನೈ) ಯಲ್ಲಿ ವಿಶ್ವ ವಸ್ಸುಗೆ ಖರ, ದೂಷಣ, ತ್ರಿಶಿರರೆಂಬ ಮೂವರು ಗಂಡುಮಕ್ಕಳೂ, ಶೂ ರ್ಪನಖಿಯೆಂಬ ಒಬ್ಬ ಹೆಣ್ಣು ಮಗಳೂ ಜನಿಸಿದರು. ಪುಲಹಬ್ರಹ್ಮನಿಗೆ ಕಿನ್ನರ ಕಿಂಪುರುಷರೂ ಹುಲಿ ಕರಡಿ ಕವಿ ಆನೆ ಮೊದಲಾದ ಮೃಗಗಳೂ ಜನಿಸಿದುವು.
- ಕ್ರತು ಬ್ರಹ್ಮನಿಗೆ ಸನ್ನುತಿಯೆಂಬ ಪತ್ನಿಯಲ್ಲಿ ಸಹಚರಿ ಪತಂ ಗರು ಜನಿಸಿದರು.
ಬೃಗು ಬ್ರಹ್ಮನಿಗೆ ಪುಲೋಮಿಯೆಂಬುವಳಲ್ಲಿ ಉಶನ, ಕವಿ, ಚೈವ ನರೆಂಬುವರು ಮಕ್ಕಳು, ಅವರಲ್ಲಿ ಕವಿಗೆ ಶುಕ್ರನೆಂಬ ಮಗನಾದನು. ತೃವನನೆಂಬುವನಿಗೆ ಕರ್ಣಿಕೆಯೆಂಬವಳಲ್ಲಿ ಒಬ್ಬ ಮಗನು ಹುಟ್ಟಿದನು. ಅವನಿಗೆ ರುಚಿಕನು ಮಗನಾದನು. ಆ ರುಚಿಕನಿಗೆ ಜವ ದಗ್ನಿಯೂ, ಅವನಿಂದ ಪರಶುರಾಮನೂ, ಜನಿಸಿದರು, ಈ ಪರಶುರಾಮನಿಗೆ ವಿಶ್ರಾಂ ಮಿತ್ರನು ಆಳಿಯನು. ವಸಿಷ್ಠ ಬ್ರಹ್ಮನಿಗೆ ಅರುಂಧತಿಯೆಂಬ ಪತ್ನಿಯಲ್ಲಿ ನೂರುಮಂದಿ ಮಕ್ಕಳು ಎಲ್ಲರೂ ವಿಶ್ವಾಮಿತ್ರನ ಶಾಪದಿಂದ ಹತರಾಗಿ ಶಕ್ತಿಯೆ? ಬೊಬ್ಬನು ಮಾತ್ರ ಉಳಿದನು, ಆತನಿಂದ ಸರಾಶರನು ಜನಿಸಿದನು.' ಅವನಿಂದ ಯೋಜನಗಂಧಿಯೆಂಬವಳಲ್ಲಿ ವ್ಯಾಸನೂ, ಅವನಿಂದ ಶುಕ ಮುನಿಯೂ ಜನಿಸಿದರು. ಅತ್ತ ಕರ್ದಮನು ಪರಿಗ್ರಹಿಸಿದ ದೇವಹೂತಿಯಲ್ಲಿ ಕಪಿಲ, ಕರ್ಣಿ ಕೆಯೆಂಬ ಮಕ್ಕಳು ಹುಟ್ಟಿದರು, ಅವರಲ್ಲಿ ಕರ್ಣಿಕೆಯನ್ನು ದೇವಹೂ - * ಕೃತುವಿಗೆ ಸಂತಾನವಿಲ್ಲವೆಂದು ಕೂರ್ಮ ಲೈಂಗೃಪುರಾಣಗಳಲ್ಲಿ ಹೇಳಲ್ಪಟ್ಟಿದೆ.