ಪುಟ:ಚೆನ್ನ ಬಸವೇಶವಿಜಯಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೋಕವರ್ಣನವು ದು ಲೋಕವೂ ಒಂದೊಂದು ಬಣ್ಣವುಳುದಾಗಿರುವುದು, ಅಲ್ಲಿನ ಜನರು ಒಂದೊಂದು ಲಿಂಗವನ್ನು ಪೂಜಿಸುವರು. ಹೇಗೆಂದರೆ-ಪಾತಾಳಲೋ ಕವು ಸುವ್ಯಸ್ಥಛಾಯೆಯುಳ್ಳುದು, ಅದಕ್ಕೆ ಶೇಷ, ಬಲಿ, ಮುಚಕುಂದ ರೆಂಬುವರು ಅಧಿಪತಿಗಳಾಗಿರುವರು. ಅಲ್ಲಿನವರು ಶಿವಲಿಂಗವನ್ನು ಪೂಜೆ ಸುವರು. ರಸಾತಲವು ಬೆಳ್ಳಿಯ ಬಣ್ಣವುಳುದು, ಅಲ್ಲಿಗೆ ವಾಸುಕಿ, ಸು ಪರ್ಣರು ಅಧಿಪತಿಗಳು, ಅಲ್ಲಿನವರು ಶಂಭುಲಿಂಗವನ್ನಾರಾಧಿಸುವರು. ಮಹಾತಳವು ತಾಮ್ರವರ್ಣವುಳುದಾಗಿ, ಹಿರಣ್ಯಾಕ್ಷ ನರಕಾಸುರರು ಅ ದಕ್ಕೆ ಅಧಿಸತಿಗಳಾಗಿರುವರು. ಅಲ್ಲಿನವರು ಶಂಕರಲಿಂಗವನ್ನು ಪೂಜೆ ಸುವರು. ತಳಾತಳಲೋಕವು ಕಂಚಿನಬಣ್ಣದುದು ಅಲ್ಲಿಗೆ ಮಯ ಕಾಲನೇಮಿ ಕರ್ಕೊ ಟಕಗಳು ಅಧಿಪತಿಗಳು, ನೀಲಕಂಠಲಿಂಗವನ್ನು ಅಲ್ಲಿನವರು ಪೂಜಿಸುವರು. ಸತಳವು ಹವಳದ ಬಣ್ಣವುಳುದು, ಅಲ್ಲಿಗೆ ತಾರಕ ಪ್ರಾದರು ಅಧಿಪತಿಗಳು, ಅಲ್ಲಿನವರು ಉಮಾಪತಿಲಿಂಗವನ್ನು ಅರ್ಚಿಸುವರು ವಿಳವು ನಿಲವರ್ಣವುಳ್ಳದು. ಅದಕ್ಕೆ ಶಂಖಪಾಲ ಮೊದಲಾದ ಸರ್ಕಾಧಿಪತಿಗಳು ಒಡೆಯರು. ಅಲ್ಲಿನವರು ಸರೆ:ಶ್ವರಲಿಂ ವನಾರಾಧಿಸುವರು. ಅತಳವು ನೀಲವರ್ಣವುಳ್ಳುದು, ಅಲ್ಲಿಗೆ ನವು ಆ ಅಧಿಪತಿ ಅಲ್ಲಿನ ಜನರು ಮಹಾದೇವಲಿಂಗವನ್ನಾರಾಧಿಸುವರು. ಈ ಸಾತಾಳಲೋಕಗಳ ಮೇಲೆ ಭಲೋಕವು ಭಗಣಿಗಳ ಮೇಲಿನ ಮುಚ್ಚಳದಂತೆ ಇರುವುದು ಅವರ ಮಧ್ಯದಲ್ಲಿ ಸುವಣ್ಣದ ಮಹಾಲಿಂಗ ದಂತೆ ಮೇರುಪರತವು ಶೋಭಿಸುತ್ತಿ ರುವುದು, ಈ ಭೂಮಂಡಲದ ಸವಾಪಟ್ಟವನ್ನು ಸ್ವಾಯಂಭುವಮನುವು ಪ್ರಿಯವ್ರತನೆಂಬ ಮಗ ನಿಗೆ ಕಟ್ಟದನು. ಆತನು ಸಕಲ ಭೂಭಾರವನ್ನು ತಾನೇ ವಹಿಸಿ ರಾಜ್ಯ ನಾಳತ್ತ, “ ನನ್ನ ರಾಜ್ಯದಲ್ಲಿ ಸೂರ್ನು ಸಂಚರಿಸಲವಶ್ಯಕವಿಲ್ಲ, ನನ್ನ ಲೋಕಕ್ಕೆ ನನ್ನ ದೇಹಕಾಂತಿಯೆ ಸಾಕು ” ಎಂದು ನುಡಿಯಲು, ಸೂ ರನು ರಥಾರೂಢನಾಗಿ ಮೆರುಪರತವನ್ನು ಏಳುಬಾರಿ ಸುತ್ತಿ ಬರಲು, ಅವನ ರಥದ ಒಂದೇ ಗಾಲಿಯ ಏಳು ಸುತ್ತಿನಲ್ಲೂ ಏಳು ಸಮುದ್ರಗಳೂ ಅದರ ಪರಸ್ಪರ ಮಧ್ಯಭಾಗಗಳು ಸಪ್ತದೀಪಗಳೂ ಆದುವು. ಮೊಗ ಲನೆ ಜಂಬೂದ್ವೀಪವು ೧ ಲಕ್ಷ ಯೋಜನದಳತೆಯುಳ್ಳುದು, ಅದನ್ನು