ಪುಟ:ಚೆಲುವು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು

ತಿರೆಯಲಿ ಮನುಜರು ನೋಡುವ ನೋಡದ

ಎಲ್ಲೆಡೆ ಅರಳಿದೆ ಯಾವುದೋ ಚಂದ;

ಬರಿ ನಗೆಯಾಟದಿ ಸಂತಸವಾಂತು

ಅದು ಯಾವುದೋ ನಲವಿನ ಚಕ್ಕಂದ

ಮರೆಯಲಿ ಅಡಗಿಹ ಹೂಗಳೆ ನೀವು ಕಣ್ಮುಚ್ಚಾಲೆಯನಾಡುತಲಿಹಿರೊ ? ಎದುರಿಗಿದ್ದು ಕಾಣದ ಕಿರಿಚುಕ್ಕಿಯೆ ಇಂದ್ರಜಾಲವನ್ನು ಮಾಡುತಲಿಹೆಯೊ? ನಿಮಾನಂದದಿ ಆಡುತ ಕೂಗುತ ನೀವಿರೆ ನೋಡದೆ ನಡೆವೆವು ನಾವು; ನೋಡರು ಎಂದು ಮುನಿಯುತ ಮರೆದಿರೊ ಉಳಿವುದೇನು? ಕೊಳೆ ಕಸಗಳ ರೇವು. ನೀವಿರೆ ನೆಲ ಚೆಲುವಿನ ಆಟದ ಕೋಲ; ಮರೆದಿರೊ ಚೆಲುವಿಗೆ ಅದೆ ಹಿರಿಮಸಣ. ನಗುತಿರೆ ನೀವು ನಗುತಿಹೆವಾವು; ಮರೆದರೆ ಮಸಗದೆ ಲೋಕದ ವ್ಯಸನ?