ಪುಟ:ಚೆಲುವು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ನೋಡಲಿ ಬಿಡಲಿ ಮುನಿಯದೆ ಇಂತೆ ಬಾಳಿರಿ ಬೆಳೆಯಿರಿ ಬಹು ಬಹು ಕಾಲ ; ಎಂದಿಗು ಅರಿಯದೆ ಇರಿ ಜನ ನಿಮ್ಮನ್ನು ನೋಡರು ಎಂಬ ಅತೃಪ್ತಿಯ ಸೋಲ. ಬಾರಿ ಬಲ್ಲೆನು ವಿಶ್ವ ವಿಧಾತನು ನಿಮಗೀಯದ ಐಸಿರಿ ಒಂದಿಲ್ಲ; ಗಾತ್ರವು ಹರಕೆಯ ನುಡಿಸಿತು ಮನ್ನಿಸಿ; ಇದರಿಂದ ನಿಮಗೆ ಕುಂದಿನಿಸಿಲ್ಲ. ಕಾಣುವ ಸೃಷ್ಟಿಯ ಕಾಣದೆ ಸುತ್ತಿಹ ಆನಂದಾಬ್ಬಿಯ ಅಮೃತದ ತುಂತುರು ನೆಲ ಮೊಗ ನಭದಲಿ ಹೂ ನಗೆ ತಾರೆಯ ರೂಪಾಂತಿಹವು, ಅನಂತ ನಿರಂತರ. ಆ ಅಬ್ಬಿಯೊಳಾಳ್ವಾತ್ಮದ ಪುಣ್ಯ ಎಂದಿಗೆ ಬಹುದೋ ಬಾರದೊ ಕಾಣೆನು ; ಬೆಳೆಯಲಿ ನಿಮ್ಮನ್ನು ನೋಡುತ ನಲಿವೀ ಕಣ್ಣ ಪುಣ್ಯ, ಇದನೆಂದಿಗು ಮಾಣೆನು.