ಪುಟ:ಚೆಲುವು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೆಳವನ ಹಕ್ಕಿ ತೋಪಿನ ಮರದಲಿ ಮೊಳಗಲು ತೊಡಗಿವೆ ಬೆಳವನ ಹಕ್ಕಿ ಸಖಿ. ಓಪನ ಓಪಳ ಕೂಗಿದು ಜಗದಲಿ ಹಳೆ ಕಾಲದ ಕೂಗು. ಕೂಯೆನ್ನು ವುದಿದು ಕೂಯೆನ್ನು ವುದದು ಅರೆ ಅರೆ ಚಣ ಬಿಟ್ಟು; ಆಯವರಿತು ಬರಬರುತ ಅಂತರವ ಮರೆಯಿಸಿ ಮೊರೆಯುವುವು. ಕೂ ಕೂ ಕೂ ಕೂ ಕೂ ಎನ್ನುತಲಿಹ ಸ್ವರವಿದು ಇನಿತರೊಳೆ ನೂಕುತ ನುಗ್ಗುತ ಕು ಕು ಕು ಕು ಎನ್ನುತ ಹರಿವುದು ಎಡೆಡದೆ. ಹೃದಯವ ತುಂಬಿದ ಪ್ರೇಮವು ಕಂಠವ ಹಿಗ್ಗಿಸಿ ಹೊರಹರಿದು ಎದುರಾಳಿಯ ಮುಳುಗಿಸುವೆನು ಎನ್ನುತ ನುಗ್ಗಿ ನುಗ್ಗಿ ಬಹುದು,