ಪುಟ:ಚೆಲುವು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಪ್ರಿಯ ಪ್ರಿಯೆಯರ ಒಸಗೆಯ ಚೆಂಡಾಟವೊ ? ಮುಗಿಲು ಮುಗಿಲಿನೊಲವ ಪಯಣಕೆ ಪಥವರ ಮಿಂಚಿನ ಹೊಳೆಯೋ ? ರಿ ಗ ಮ ಪ ದ ನಿ ಎಂಬ ಗಾಯಕರಿಬ್ಬರ ಸ್ವರವಿನ್ಯಾಸದ ಮೇಲಾಟವೊ ? ಎನಿಸ ನ್ಯಾಯದ ಹಕ್ಕಿ ಇದೆರಡರ ಮೊಳಗು ಗಾಳಿಯ ತೀವಿಹುದು. ಲೋಹದ ತಂತಿಗೆ ತೊಗಲಿನ ನಾರಿಗೆ ಈ ಸ್ವನ ಬಹುದುಂಟೆ ? ಮೋಹವು ಮಿಡಿಯಲು ಜೀವವು ನುಡಿಯುವ ಭಾಸ್ವರ ನಿನದವಿದು. ಅವಳಿಜವಳಿಯಲ್ಲಿ ಒಮ್ಮೆ ಹುಟ್ಟುವುವು ಎಂಬರು ಹಕ್ಕಿ ಇದ; ಬುವಿಯಲಿ ಬಾಳುವನಿತು ದಿನ ಬೆಳೆವವು ಸಂಬಂಧವ ಬಿಡದೆ ;