ಪುಟ:ಚೆಲುವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಊರ ಜನರು ಬಂದು, ಎಂಥ ಶೂರ ಇವನು, ಎಂಥ ಧೀರ, ನೂರು ಜನರು ಇವಗೆ ಸಮನೆ, ಗಂಡು ಕಾಣೋ, ಇವಗೆ ಒಂದು ದಂಡು ಸಮನೆ, ಏನು ಇವನ ಗುಂಡಿಗೆ? ಎನೆ ಅದನು ಕೇಳಿ ಮನದೆ ಸ್ವಲ್ಪ ಸುಖವನಾಂತು, ಕನಿಕರದಲಿ ತಾಯಿತಂದೆ ತನುಜ ವನಿತೆಯರನ್ನು ನೋಡಿ ಸ್ವಲ್ಪ ಕುದಿದೆಯಾ? ಇನಿಸು ಕುದಿದು ಮತ್ತೆ ಮನದಿ, ಜನುಮ ಇಂದು ಸಫಲವಾಯ್ತು, ಕೊನೆಗೆ ಬರಿಯ ಚಿಂತೆಯೇಕೆ ? ಬದುಕ ಕೊಟ್ಟ ದೈವ ಬಂದು ಇದಿರು ನಿಂದು, ಇಂದು ನಿನ್ನ ಎದೆಯ ರಕುತ ಬೇಕು, ಎನಲು ಕೊಟ್ಟ ಸಾಲ ಕೊಡೆನು ಎನಲು ಹುಟ್ಟು ಹೇಡಿಯೇ ನಾನು ? ದಿಟ್ಟತನದಿ ಸುರಿದೆನದನು ಎಂದು ನೆನೆದೆಯಾ? ೧೫