ಪುಟ:ಚೆಲುವು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಇನಿತು ಪುಣ್ಯ ನಿನ್ನ ದಾಯ್ತು; ಜನುಮ ಇ೦ತು ಸಫಲವಾಯ್ತು; ನೆನವು ನಾಡ ದೀಪವಾಯ್ತು; ನಿನ್ನ ಕೃತಿಗೆ ಮೆರುಗಕೊಟ್ಟು, ನಿನ್ನ ಹೊಗಳಿ ಹಾಡ ಕಟ್ಟಿ, ನಿನ್ನ ವರನು ಸಂತವಿಟ್ಟು, ಬಹಳ ಕಾಲ ಸೀಮೆ ನಿನ್ನ ಮಹಿಮೆಯನ್ನು ನುಡಿಯುತಿತ್ತು; ಗಹನವಾದ ನಡೆಯು ನೆನೆದು ಪೂಜೆ ಮಾಡಿತು. ಅಂದು ನಿನ್ನ ಸೇವೆ ಕೊಂಡು ಬಂಧುವೆಂದು ಪೂಜೆಗೆ ಚೆಂದದೂರು ಮುದುಗಿ, ಈಗ ಇಲ್ಲಿ ನಿನ್ನ ಹೆಸರು ಕತೆಯ ಬಲ್ಲ ಜನತೆಯಿಲ್ಲ; ನೆನವ ಕಲ್ಲು ಮುರಿದು ಕೆಡೆದಿರುವುದು ; ಒಡಲು ಅಂದು ಅಳಿದ ತೆರದೆ ಮಡಿದಿರುವುದು ಕೀರ್ತಿ ಇಂದು ಕೆಡಕಿ ಕಾಲ ನಿನ್ನ ಗುಡಿಯ ಉರುಳಿಸಿರುವನು. ೧೮