ಪುಟ:ಚೆಲುವು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಕೆನ್ನೂರ ಕಲ್ಲ ಬಳಿ ಸೇರಿ ಹುಲ್ಲನು ಕೊಯ್ಯ; ಕೊಯ್ಯುತ್ತ ಅಂತೆ ಮುದ್ದಿಸುವ ನಲಿವ; ಶಿಸ್ತಾಗಿ ನಾ ನಿನ್ನ ಪಡೆಯುವೆನೆ ಆವೇಳೆ / ಹೊಯ್ಯ ನಮ್ಮೊಲವ ಒಂದೇ ಪಾತ್ರಕೆ. `ಹೊಟ್ಟೆಯುರಿಯುವ ಮಂದಿ ಏನಹೇಳಿದರು ಸರಿ ಮರೆಮಾಜದಿರುವ ನಮ್ಮೊಲವ ನಾವು ; ದಿಟ್ಟ ತನದಲಿ ನಮ್ಮ ದಾರಿ ನಡೆಯುವ ನಾವು ; ಮರಿಯಾದೆಗೆಂದು ನಾವಗಲಿದ್ದರೂ, ದೂರ ದೂರದೊಳಿರುತ ನಡೆದರೂ, ಜನ ನಮ್ಮ ಹಂಗಿಪುದು; ಇನ್ನು ಜೊತೆ ಬಿಡುವುದೇಕೆ? ಧೀರರಾಗಿರುವ ಬಾ ಗೆಳತಿ ; ಸಾವಡಿಸಿದರು ಹಿಂಗದೊಲುಮೆಯಲ್ಲಿ ನೋಡು ಮೆಚ್ಚು, ೨೮