ಪುಟ:ಚೆಲುವು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಪ್ರೀತಿಸಿ ನಕ್ಕಳೊ ಬೆಳಕಿನ ಬೆಳೆಯೊ ; ಸತ್ಯವಂತರೂ ಒಮ್ಮೆ ನೋಡಿದರೆ ಮತ್ತೆ ನೋಡುವರೋ ದೇವಿಯೊ ಎಂದು ; ಹೊಗಳೆನ ತಾಯಿ ಚೆಲುವನು, ನಿನ್ನ ಹಗೆಯನು, ಇನ್ನು ಹೊಗಳೆನೆ ಅಮಾ ಮಲ್ಲಮ್ಮಾ ಮಲ್ಲಮ್ಮಾ ಮೊಲ್ಲೆಯ ಹೂ ನೀ ಮಲ್ಲಮ್ಮಾ. ಅಣ್ಣ ನಮ್ಮ ಮಲ್ಲಮ್ಮನ ಗುಣವ ಇನ್ನು ಹೇಳುವೆನು ನಡತೆಯ ಚೆಲುವ; ತಂದೆ ತಾಯಿಗೆ ಬಂಧು ಬಳಗಕೆ ಮಂದಿಗೆ ಎಲ್ಲಾ ಮೆಚ್ಚಾಗಿರುವಳು ; ಕೈಹಿಡಿದಾತನ ಮನವನು ಒಲಿಸಿ ಮೋಹದ ಮಂಗಳಮೂರುತಿ ಎನಿಸಿ ಅಣ್ಣ ಗೆಳತಿಯರು ಎತ್ತಿ ಮುದ್ದಿಸಲು ಚಿಣ್ಣನೊಬ್ಬನನ್ನು ಹಡೆದಿಹಳವಳು ; ಒಳ್ಳೆಯ ಮಗಳು ಒಳ್ಳೆಯ ಗೆಳತಿ ಒಳ್ಳೆಯ ಸೊಸೆ ಬಹು ಒಳ್ಳೆಯ ಹೆಂಡತಿ ಚೆಲುವು ಹೆಚ್ಯ ಗುಣ ಹೆಚೋ ಎಂಬುದು ತಿಳೆಯದೂ ಅವಳನ್ನು ನೋಡಿದ ಜನಕೆ. ಮಲ್ಲಮ್ಮಾ ಮಲ್ಲಮ್ಮಾ ಇಲ್ಲವಾದೆಯಾ ಮಲ್ಲಮ್ಮಾ.