ಪುಟ:ಚೆಲುವು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಿಕ್ಕ ಮಲ್ಲಮ್ಮ ಅಣ್ಣ ಒಂದು ಕತೆ ಹೇಳುವೆ ಕೇಳು ಕನ್ನಡ ನಾಡಿನ ಪೂರ್ವದ ಕತೆಯ ; ಚಿನ್ನದ ನಾಡೀ ಕನ್ನಡ ನಾಡು, ಮನ್ನಣೆಯೆಂಬರ ಮನೆ ನೆಲೆಬೀಡು ; ಚಿನ್ನ ದೊಳಪರಂಜಿಯೊ ಮಿಡಿಗೇಶಿ ನನ್ನವರೆಲ್ಲಾ ಬಾಳಿದ ದೇಶ; ವೆಂಕಟರಮಣ ಸಿರಿಮಲ್ಲೇಶ ಅಂಕದಲಿಟ್ಟು ಸಲಹಿದ ಸೀಮೆ; ಇಲ್ಲಿ ಪೂರ್ವದಲ್ಲಿ ಇದ್ದಳೊ ಅಣ್ಣ ಮಲ್ಲಮ್ಮನೆಂಬ ಹೆಸರಿನ ಹೆಣ್ಣು ; ಅಕ್ಕರೆಗಾಗಿ ಅವಳನ್ನು ಎಲ್ಲಾ ಚಿಕ್ಕ ಮಲ್ಲಮ್ಮ ಎನ್ನುವರಯ್ಯಾ ಮಲ್ಲಮ್ಮಾ ಮಲ್ಲಮ್ಮಾ ಎಲ್ಲಿ ಹೋದೆಯೇ ಮಲ್ಲಮ್ಮಾ, ಅಣ್ಣ ನಮ್ಮ ಮಲ್ಲಮ್ಮನ ಚೆಲುವ ಬಣ್ಣಿಸಬಲ್ಲ ಮಾತುಗಳಿಲ್ಲ; ಚಿನ್ನದ ಪುತ್ಥಳಿ ಗಂಧದ ಗೊಂಬೆ ರನ್ನದ ಕನ್ನಡಿ ಇನ್ನೇನೆಂಬೆ, ಚೆಲ್ಲಗಂಗಳು ಹುಲ್ಲೆಯ ನಡಿಗೆ ಮಲ್ಲಿಗೆಯಂಥಾ ಸುದ್ದದ ಮನಸು ; ಮಾತನಾಡಿದ ಮುತ್ತಿನ ಮಳೆಯೊ