ವಿಷಯಕ್ಕೆ ಹೋಗು

ಪುಟ:ಚೆಲುವು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

 ಬಳಿಕ ಗಂಡ ತಲೆ ಬಗ್ಗಿಸಿ ಕುಳಿತ
 ಸ್ಥಳಕೆ ಬಂದು ಅವನಡಿಗಳಿಗೆರಗಿ,
 ನಾನು ಕೇಳಿಬಂದಷ್ಟೂ ದಿವಸ
 ಮಾನದಿಂದ ಬಾಳಿಸಿದಿರಿ ನನ್ನ ;
 ನನ್ನ ಪುಣ್ಯ ಇಲ್ಲಿಗೆ ಕೊನೆಯಾಯ್ತು
 ಅನ್ನೆಯವಾಯಿತು ನನ್ನದು ಬಾಳು ;
 ಒಬ್ಬರನುಳಿದು ಹೋಗಲು ನನಗೆ
 ನಿಬ್ಬರವಾಗಿದೆ ಮನದಲಿ ದುಃಖ ;
 ಒಂಟಿಯಾಗಿ ಇರಬೇಡಿರಿ ಹರೆಯದಿ,
 ನಂಟರಲ್ಲಿ ತಕ್ಕವಳನು ತಂದು
 ಬಾಳಿರಿ;ಅಳಬೇಡಿರಿ; ನನ್ನಾಣೆ;
 ಕೇಳಿರಿ ಮಾತನು, ಹೋಗುವೆನೆಂದಳು.
ಮಲ್ಲಮ್ಮಾ ಮಲ್ಲಮ್ಮಾ
ಕಲ್ಲೋ ಹೂವೋ ಮಲ್ಲಮ್ಮಾ.

 ಕೇಳು ಅಣ್ಣ ಮಧ್ಯಾಹ್ನದ ವೇಳೆಗೆ
 ಮೇಲೆ ಸೂರ್ಯದೇವರು ಸುಡುತಿರಲು,
 ದೇಶವೆಲ್ಲ ಮಿಡಿಗೇಶಿಗೈದಿತೆನೆ
 ಸಾಸಿರ ಸಾಸಿರ ಜನ ನೆರೆದಿರಲು,
 ದೇಗುಲದೆದುರಲಿ ಮಾಡಿದ ಕೊಂಡದ
 ಬೇಗೆಗೆ ಜನ ಸರಿಯುತಲಿರೆ ದೂರ,
 ಕೊಂಡದ ಕಾವಿನ ಝಳದಲಿ ಅಡಿಯ

೫0