ಪುಟ:ಚೆಲುವು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಬಂಡೆ ಚಿಟ ಚಿಟನೆ ಸಿಡಿದಿರೆ ಒಮ್ಮೆ, ಮಲ್ಲಮ್ಮ ಹೊರಟು ಗುಡಿಗಳ ಹೊಕ್ಕು ಬಲ್ಲ ರೀತಿಯಲ್ಲಿ ದೇವರ ಪೂಜಿಸಿ ಶಂಕೆಯೆಂಬುದೇ ಇಲ್ಲದೆ ಒಂದು ಬೆಂಕಿಯ ಬಾವಿಯ ಬದಿಯಲಿ ನಿಂದಳು. ಮಲ್ಲಮ್ಮಾ ಮಲ್ಲನಾ ಇಲ್ಲವಾದೆಯೇ ಮಲ್ಲಮ್ಮಾ, ಸೋಂಕಿಗೆ ಹೇಸುವ ದೈವಭಕ್ತರ ಕಿಂಕರ ನಾನು ಎನುತಿಹನಗ್ನಿ ; ಬೆಂಕಿ ನಾನೆ ನಿಮ್ಮೆಲ್ಲರೊಳಿಹೆನು ಬಂಕೆಯ ಮಣ್ಣಿನ ಗೂಡಲಿ ಮರೆದು ; ಕೆಂಡ ಬಂದು ಕೆಂಡದಲಿ ಸೇರುವಳು ಕಂಡ ಮಾತು ಇದು ಅಂಜಿಕೆ ಬೇಡ ; ಸಂಕಟಪಡಿಸೆನು ಮಲ್ಲಮ್ಮನನು ಶಂಕೆಯ ಬಿಡಿರಿ ಎನುತಿಹ ರೀತಿ ಝಗಿ ಝಗಿ ಹೊಳೆವಾಳದ ತನ್ನೆ ಜಿಯ ಬಗೆದು ತೋರಿದನು ಬೆಂಕಿಯ ದೈವ; ತಳಮಳ ಹೊಳೆಯುತ ಮಲಮಲ ಮೊರೆಯುತ ಬೆಳಕಿನ ಹೂವಿನ ಮಾಲೆಯ ತೋರುತ. ಮಲ್ಲಮ್ಮಾ ಮಲ್ಲಮ್ಮಾ ಮಲ್ಲಿಗೆ ಮೊಲ್ಲೆ ಮಲ್ಲಮ್ಮಾ, ೫೧