ವಿಷಯಕ್ಕೆ ಹೋಗು

ಪುಟ:ಚೆಲುವು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

 ಹಗಲು ಇರುಳಲಿ ಗಳಿಗೆ ಚಣದಲಿ
 ಜಗವು ಸಂತತ ಚಲಿಸುತಿರ್ಪುದು ;
 ಬಗೆಯೊಳೆನ್ನಲಿ ಅಂತೆ ಸಂತತ
 ಒಗೆಯುತಿರ್ಪುದು ದೃಷ್ಟಿ ಭೇದವು.


 ಓಡುತಿರ್ಪ ತೇರಿಂದ ನೋಡುತ
 ಓಡುತಿರ್ಪ ಮುಗಿಲೊಡ್ಡ ನಭವನು
 ನೋಡಿದಾವುದನು ನಿಚ್ಚವೆಂಬೆನು ?
 ನೋಡದಾವುದನ್ನು ಇಲ್ಲವೆಂಬೆನು ?


 ಬಾಲ ನಿದ್ರಿಸುತಲಿರಲು ತಾಯ್ ಅವನ
 ಕೇಳಿಕೆಯನು ನೋಡೆಂದು ತಂದಳು ;
 ಎದ್ದು ನೋಡುತಿಹನಿನಿತ ಮಧ್ಯದಲಿ;
 ನಿದ್ದೆಯಾಳದಲಿ ಮರಳಿ ಇಳಿವನು.


 ಆಟ ಎಂತು ಮೊದಲಾಯಿತೆಂಬುದನು,
 ನೋಟ ಎಂತು ಕೊನೆಯಪ್ಪುದೆಂಬುದನು,
 ಎಳೆಯನರಿವನೇ ತಾನೆ ಊಹಿಸಿ?
 ತಿಳಿವೆನೆಂತು ನಾ ನಿನ್ನ ಲೀಲೆಯ ?

೬೩