ಪುಟ:ಜೀರ್ಣವಿಜಯನಗರಾದರ್ಶನಂ .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ಣಾಟಕ ಗ್ರಂಥಮಾಲೆ


ನಾದ ಬುಕ್ಕರಾಯನಿಗೆ ಮಂತ್ರಿ ಪದವಿಯನ್ನಿತ್ತು, ಉಳಿದ ನಾಲ್ವರನ್ನೂ ದೊಡ್ಡ ಅಧಿಕಾರಿಗಳನ್ನಾಗಿ ನಿಯಮಿಸಿ ಕಳುಹಿಸಿಕೊಟ್ಟನು. ಹರಿಹರನು ರಾಜನಾಗಿಯೂ ಬುಕ್ಕರಾಯನು ಮಂತ್ರಿಯಾಗಿಯೂ ಇದ್ದರು. ಅವರು ಒಂದಾನೊಂದುದಿನ ಚತುರಂಗಬಲಸಮೇತರಾಗಿ ಮೃಗಯಾವಿನೋದಕ್ಕೋ ಸ್ಕರ ತುಂಗಭದ್ರಾ ನದಿಯ ದಕ್ಷಿಣತೀರಕ್ಕೆ ಹೊರಟು, ಅಲ್ಲಿನ ಕಾಡುಗಳಲ್ಲಿ ಬೇಟೆಯಾಡುತ್ತಿರುವಾಗ ಮೊಲಗಳೇ ತಮ್ಮ ಬೇಟೆನಾಯಿಗಳನ್ನು ಅಟ್ಟಿ ಕೊಂಡು ಬಂದುವಂತೆ ! ಈ ವಾರ್ತೆಯನ್ನು ತಮ್ಮ ಕುಲಗುರುಗಳಾದ ವಿದ್ಯಾರಣ್ಯರಿಗೆ ವಿಜ್ಞಾಪಿಸಲು, ಅವರು ಅಲ್ಲಿ ಬಂದುಪಟ್ಟಣವನ್ನು ನಿನ್ನಿಸಿ ದರೆ ಅದು ಜಯಪ್ರದವಾಗುವುದೆಂದು ಹೇಳಿ ಅಲ್ಲಿ ಬಂದು ನಗರವನ್ನು ನಿರಾಣಗೊಳಿಸಿದರು. ಆ ಪ್ರದೇಶವು ನೈಸರ್ಗಿಕ ಪಾಕಾರಪಂಗಣವಾಗಿ ಸುತ್ತಿಕೊಂಡಿರುವ ಬೆಟ್ಟಗಳುಳ್ಳದಾಗಿ ಕಾತ್ರವದುರ್ಭೇದ್ಯವಾಗಿರುವುದು. ಕ್ರಿ. ಶ 1336 ಕೆ ಸರಿಯಾದ ಶಾಲಿವಾಹನಶಕೆ 1258 ನೇ ಧಾತು ಸಂವ ತೃರ ವೈಶಾಖ ಶುದ್ಧ ಪಂಚಮಿಯದಿನ ಈ ನಗರವು ನಿರಿಸಲ್ಪಟ್ಟಿತು, ಹರಿಹರರಾಯನು 1339 ರಿಂದ 1350 ರ ವರೆಗೆ ಈ ವಿಜಯನಗರವನ್ನು ಪಾಲಿಸಿದನು. ಈತನು ತನ್ನ ತಮ್ಮನ ಸಹಾಯದಿಂದ ತನ್ನ ರಾಜ್ಯವನ್ನು ಬಹಳವಾಗಿ ವಿಸ್ತರಿಸಿದನು, ಈತನ ರಾಜ್ಯಭಾರದ ಕಾಲದಲ್ಲಿಯೇ ವಿಜಯ ನಗರ ಸಾಮಾಜ್ಯಕ್ಕೆ ಅಂಕುಶಪ್ರಾಯವಾದ ಭಾಮಿನೀರಾಜ್ಯವು ಸ್ಥಾಪಿಸ ಲ್ಪಟ್ಟಿತು. ಈ ಭಾಮಿನೀರಾಜರಿಗೂ ವಿಜಯನಗರದರಾಜರಿಗೂ ಎಡೆಬಿಡದ ಯುದ್ಧವು ಜರುಗುತ್ತಲೇ ಇತ್ತು

ಹರಿಹರರಾಯನಿಗೆ ಸಂತಾನವಿಲ್ಲದ್ದರಿಂದ ಆತನ ಮರಣಾನಂತರ ಅವನ ಮಂತ್ರಿಯ ಯುವರಾಜನೂ ಸಹೋದರನೂ ಆದ ಬುಕ್ಕರಾಯನೇ ದೊರೆತನಕ್ಕೆ ಬಂದನು. ಈತನ ಆಳ್ವಿಕೆಯಲ್ಲಿಯೇ ತುಂಗಭದ್ರಾ ನದಿಗೆ ದಕ್ಷಿಣದಲ್ಲಿರುವ ರಾಜ್ಯವೂ, ಓಢ್ರ, ಕಳಿಂಗ, ದೇಶಗಳೂ ಜಯಿಸಲ್ಪಟ್ಟು