ಪುಟ:ಜೀರ್ಣವಿಜಯನಗರಾದರ್ಶನಂ .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo MommmmmmmmmmmmmmmmmmmmmmmM M ಇದಕ್ಕೆ ಪ್ರತ್ಯರ್ಥಿಯಾದ ಭಾಮಿನೀ ರಾಜ್ಯಕ್ಕಿಂತ ಮಹೋನ್ನತಸ್ಥಿತಿಗೆ ಬಂತು. ಈ ಬುಕ್ಕ ಭೂಪಾಲನು ವಿಜಯನಗರದಲ್ಲಿ ಅನೇಕ ದಿವ್ಯಮಂದಿರ ಗಳನ್ನೂ, ತಲಾಶಾಲೆಗಳನ್ನೂ, ವಿಪಣಿಮಾರ್ಗವನ್ನೂ, ದೇವಾಲಯಗಳನ್ನೂ ಕಟ್ಟಿನಿ ರಮಣೀಯವಾಗಿಯ, ವಿಸ್ತಾರವಾಗಿಯೂ ಇರುವಂತೆ ಮಾಡಿ ದನು, ಈ ಮಹಾಮಹನ ಮಂತ್ರಿಶೇಖರನಾದ ಬುಜ್ಜೆ ರಾಜನು ತನ್ನೊಡೆ ಯನ ಗೌರವಾರ್ಥವಾಗಿ ಬುಕ್ಕಸಾಗರ, ಅನಂತಸಾಗರ ಎಂಬ ಎರಡು ದೊಡ್ಡ ಕೆರೆಗಳನ್ನು ಕಟ್ಟಿಸಿದನು. ಹರಿಹರರಾಯನ ತಮ್ಮನಾದ ಕಂಪ ಭೂಪಾಲನು ರಾಜನಾಗದೆ ಬುಕ್ಕರಾಯನೇ ಅರಸನಾದುದಕ್ಕೆ ಆತನಕೌಲ್ಯವೇ ಕಾರಣವೆಂದು ತೋರುವುದು. ಅದಲ್ಲದೆ ಹರಿಹರರಾಯನ ಜೀವಿತ ದಲ್ಲಿಯೇ ಬುಕ್ಕಭೂಪತಿಗೆ ಯುವರಾಜ್ಯ ಪಟ್ಟಾಭಿಷೇಕಮಾಡಿದಂತೆ ವಾಚ ಕರು ಮೊದಲೇ ಓದಿರುವರಷ್ಟೆ : ಬುಕ್ಕ ಭೂಪಾಲನ ತರುವಾಯ ಆತನ ಮಗನಾದ ಎರಡನೆಯ ಹರಿಹರರಾ ಮನೇ ರಾಜನಾದನು ಈತನು 1377 ರಲ್ಲಿ ಪಟ್ಟಾಭಿಷಿಕ್ತ ನಾದನು. ಮೈಸೂರು, ಧಾರಾಡ, ಕಾಂಚೇ, ಚಂಗಲ್ಪಟ್ಟು, ತಿರುಚನಾಪಲ್ಲಿ ಮೊದಲಾದ ದೇಶಗಳಲ್ಲಿ ಈತನ ರಾಜದ ಕಾಲ ದಲ್ಲಿನ ಶಾಸನಗಳು ಕಾಣಬರುತ್ತಿರುವುದರಿಂದ ಈತನ ರಾಜ್ಯವು ವಿಸ್ತಾರ ವಾಗಿ ಇದ್ದಂತೆ, ಪೂರ ದನರಪತಿಗಳು ಧರಿಸುತ್ತಿದ್ದ “ ಮಂಡಲೇಶ್ವರ, ಒಡೆಯ ” ಎಂಬ ಮಾಂಡಲಿಕರಾಜರಿಗೆ ತಕ್ಕ ಬಿರುದುಗಳನ್ನು ಬಿಟ್ಟು, “ ಮಹಾರಾಜಾಧಿರಾಜ ರಾಜಪರಮೇಶ್ವರ' ಎಂಬ ಬಿರುದನ್ನು ವಹಿಸಿದ್ದು ದರಿಂದಲೂ, ಈ ಮಹನೀಯನಿಗೆ ಚಕ್ರವರ್ತಿತವು ಬಂದಂತೆಯೂ ವಿಶದ ವಾಗುವುದು, ಈತನು 1404 ರ ವರೆಗೆ ರಾಜ್ಯವನ್ನಾಳಿದನು. ವಿಜಯನಗರನಿರ್ಮಾಣಕ್ಕೆ ಕಾರಣಭೂತರಾಗಿ ಹರಿಹರ, ಬುಕ್ಕ, ದ್ವಿತೀಯ ಹರಿಹರರಿಗೆ ಹಿತಬೋಧಕರಾಗಿ ವಿಜಯನಗರದ ಸಾಮ್ರಾಜ್ಯ ವನ್ನು ಪಾಭವವೈಭವಗಳುಳ್ಳಂತೆ ಮಾಡಿದ ಮಹನೀಯರಾದ ವಿದ್ಯಾರಣ್ಯರ - ೧