ಪುಟ:ಜೀರ್ಣವಿಜಯನಗರಾದರ್ಶನಂ .djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕ ಗ್ರಂಥಮಾಲೆ ಒmmmmmmmmmmmmmmmmmmmmmmmmmmmmmwww ಗುತ್ತಿ, ಚಂದ್ರಗಿರಿ, ಪೆನಗೊಂಡೆ ಮೊದಲಾದ ಸ್ಥಳಗಳಲ್ಲಿ ಮಾಧಕ ವೃತ್ತಿಯಿಂದ ಜೀವಿಸುತ್ತಾ ವಿದ್ಯೆಯನ್ನು ಕಲಿತುಕೊಂಡು ಅಲ್ಲಿಯ ದುರ್ಗಾ ಧೀಶರನ್ನಾಶ್ರಯಿಸಿ ತನ್ನ ಮೇಧಾವಿಶೇಷದಿಂದ ಕ್ರಮೇಣ ದೊಡ್ಡ ಸಾಮ್ರಾಜ್ಯಕ್ಕೆ ಮಂತ್ರಿಯಾದನು. ಈ ಮಂತ್ರಿ ಶ್ರೇಷ್ಠನು ನರಸರಾಜ, ವೀರನರಸಿಂಗರಾಜ ಇವರ ಬಳಿಯಲ್ಲಿ ಮಂತ್ರಿಯಾಗಿದ್ದು ರಾಜ್ಯಭಾರವ ನ್ನೆಲ್ಲಾ ವಹಿಸಿಕೊಂಡು ರಾಜರ ಮತ್ತು ಪ್ರಜೆಗಳ ಗೌರವಕ್ಕೆ ಪಾತ್ರನಾ ದನು. ತರುವಾಯ ಕ್ರಮೇಣ ಕೃಷ್ಣರಾಯರ ಬಳಿಯಲ್ಲಿಯೂ ಮಂತ್ರಿ ಯಾಗಿ ರಾಯರಿಗೆ ಬಲಭುಜವಾಗಿದ್ದು ಕೊಂಡು ತನ್ನ ಮನೋಬಲದಿಂದ ರಾಯರಿಗೆ ಸೌಖ್ಯ ವಿಷಯಗಳನ್ನೂ ಅಧಿಕವಾಗಿ ಪ್ರಖ್ಯಾತಿಯನ್ನೂ ಉಂಟು ಮಾಡಿದನು. ರಾಯರ ಈ ಅಮಾತ್ಯ ಶೇಖರನನ್ನು “ ಅಪ್ಪಾಜಿ” ಎಂದು ಕರೆಯುತ್ತಿದ್ದರು, ಕೃಷ್ಣರಾಯರು ಮೊದಲು ೧೫೧೩ ನೇ ವರ್ಷದಲ್ಲಿ ದಕ್ಷಿಣದಿಕ್ಸಿ ಜಯ ಯಾತ್ರೆಗಾಗಿ ಹೊರಟು ಮೈಸೂರು ಮಂಡಲದಲ್ಲಿನ ಶಿವನಸಮುದ್ರ, ಉಮ್ಮತ್ತೂರು, ಶ್ರೀರಂಗಪಟ್ಟಣ ಇವುಗಳನ್ನು ಜಯಿಸಿ, ತರುವಾಯ ಗಂಗವಂಶದ ರಾಜರನ್ನು ಸೋಲಿಸಿ ಮೈಸೂರು ದೇಶವನ್ನೆಲ್ಲಾ ಸ್ವಾಧೀನ ಪಡಿಸಿಕೊಂಡನು. ಈ ದೇಶವನ್ನು ಜಯಿಸಿದ ಸಂಗತಿ ಪಾರಿಜಾತಾಪಹರಣ ದಲ್ಲಿನ ಈ ಶ್ಲೋಕದಿಂದ ತಿಳಿಯಬಹುದು. - ಶಾ| ಸಮ್ಮರ್ದಕ್ಷಮಧಿನಿಬಂಧನವಿಧಾ ಸಂಕ್ರಂದನಾಚಾರ್ ಶೂ ರಮ್ಮ ನ್ಯಾಚಲವಜ್ರಪಾತ ಜಗತೀ ರಕ್ಷಾಂಬುಜಾಕ್ಷಾಧಿರ | ಥ್ಯ ಮ್ಯಾರ್ಗಸ್ಥದಶಾಸ್ಯರಾಜ್ಯ ಸಮಸಹ್ಯ ಪೊದ್ಭರಾತೀವಭಾ - ಸುಮ್ಮತ್ತೂರಿಶಿವಂಸಮುದ್ರಪುರವಪೂನ್ನೂಲನಾಡಂಬರಾ || ಮತ್ತು ಕರ್ಣಾಟರಾಜ್ಯದ ಸಣ್ಣ ಸಣ್ಣ ನಾಡುಗಳನ್ನು ಜಯಸಿ ತನಗೆ ಪ್ರತಿನಿಧಿಯಾಗಿ ಆಳಲು ಜಕ್ಕರಾಯನನ್ನು ನಿಯಮಿಸಿಕೊಂಡನು. ಲ 0 || ಣ ಣ