ಪುಟ:ಜೀರ್ಣವಿಜಯನಗರಾದರ್ಶನಂ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ರಿ ಜೀರ್ಣವಿಜಯನಗರದರ್ಶo ಒmmmmmmmmmmmmmmmm 6 ಇದರ ಸುತ್ತಲೂ ಒಳಭಾಗದಲ್ಲಿ ಪ್ರತಿಬಂದು ಕಡೆಗೂ ಐದೈದರಂತೆ ಕಮಾ ನುಗಳುಳ್ಳ ಕೈಸಾಲೆಗಳುಳ್ಳದಾಗಿ, ಮಧ್ಯಭಾಗದಲ್ಲಿ ಸುಮಾರು ಏಳು ಅಡಿ ಗಳ ಆಳವೂ, ಸ್ವಲ್ಪ ಹೆಚ್ಚು ಕಡಿಮೆ 30 ಅಡಿಗಳ ಉದ್ದವೂ, ಅಷ್ಟೇಅಗ ಲವೂ ಉಳ್ಳದಾಗಿ ಸುತ್ತಲೂ ತಳಭಾಗದಲ್ಲಿಯ ಗಜ್ಜೆ ಹಾಕಲ್ಪಟ್ಟಿರುವ ಚಚ್‌ಕವಾದ ಹಳ್ಳವೊಂದಿರುವುದು, ಈ ಹಳ್ಳದೊಳಕ್ಕೆ ಇಳಿಯುವುದಕ್ಕೆ ಉತ್ತರದಿಕ್ಕಿನಲ್ಲಿ ಮೆಟ್ಟಲುಗಳಿರುವುವು. ತಿಟ್ಟಿನಮೇಲೆ ತುಂಗಭದ್ರಾ ನದಿ ಯಿಂದ ನೀರನ್ನು ತೆಗೆದುಕೊಂಡುಬರುವ ** ದೂರಿ' ಎಂಬ ಕಾಲುವೆಯು ಈ ಭವನಕ್ಕೆ ಪೂರ್ವ ದಿಕ್ಕಿನಲ್ಲಿದೆ. ಆ ಕಾಲುವೆ ಅಲ್ಲಲ್ಲಿ ಶಿಥಿಲವಾಗಿದೆ. ಅ ಮಂದಿರಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ದ್ವಾರಗಳಿರುವುವು. ಈ ಸ್ನಾನಗೃಹದ ಹತ್ತಿರ ತ್ರಿಭುಜಾಕಾರವಾಗಿ ಎರಡು ಮಾರ್ಗ ಗಳು ಬೆರೆಯುತ್ತವೆ. ಅವುಗಳಲ್ಲಿ ಒಂದು ಮೊದಲು ಸ್ವಲ್ಪ ಮಟ್ಟಿಗೆ ಪಶ್ಚಿಮಕ್ಕೂ, ತರುವಾಯ ಉತ್ತರಕ್ಕೂ ತಿರುಗಿ ಹಂಪೆಯೊಳಗಣ ಮುಖ್ಯ ದೇವಾಲಯವಾದ ಶ್ರೀವಿರೂಪಾಕ್ಷ ದೇವಾಲಯಕ್ಕೆ ಹೋಗುವುದು, ಎರಡ ನೆಯದು ಪಶ್ಚಿಮೋತ್ತರವಾಗಿ ಹೊರಡುವುದು. ಎರಡನೆಯ ಮಾರ್ಗದಮಲಕ ಸುಮಾರು ಎರಡು ಫರ್ಲಾಂಗುಗಳ ದೂರ ಹೋದರೆ ದಾರಿಗೆ ಎಡಪಾರ್ಶ್ವದಲ್ಲಿ ಸುಮಾರು ಎಂಟು ಅಡಿಗಳ ಆಳವೂ ಅರ್ಧ ಫರ್ಲಾಂಗಿನ ಉದ್ಧವೂ ಮೂವತ್ತು ಗಜಗಳ ಅಗಲವೂ ಉಳ್ಳದ್ದಾಗಿ, ಆಯಾಕಾರವಾಗಿ ಮೊದಲು ನೋಡಲ್ಪಟ್ಟ ಸ್ನಾನಗೃಹದ ಹಳ್ಳದಂತೆಯೇ ಗಚ್ಛೆಮಾಡಲ್ಪಟ್ಟ ಹಳ್ಳ ಬಂದಿರುವುದು, ತುಂಗಭದ್ರಾ ನದಿ ಯಿಂದ ನೀರನ್ನು ತೆಗೆದುಕೊಂಡು ಬರುವ “ ಮೋರಿ ” ಎಂಬ ಕಾಲುವೆಯು ಈ ಹಳ್ಳಕ್ಕೆ ಅನತಿದೂರದಲ್ಲಿ ಯೇ ಭೂಮಟ್ಟಕ್ಕೆ ಸುಮಾರು ಹತ್ತಡಿಗಳ ಎತ್ತರದಮೇಲೆ ಸ್ವಲ್ಪ ಸಮವಾಗಿ ಹೋಗುತ್ತಿರುವುದು. ಈ ಹಳ್ಳಕ್ಕೆ ಇದು ಉತ್ತರದಿಕ್ಕಿನಲ್ಲಿರುವುದು, ಆ ಕಾಲುವೆಯಿಂದ ಈ ಹಳ್ಳಕ್ಕೆ m