ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಈ ಯಂತ್ರದಿಂದ ಇಷ್ಟೆ ತಿಳಿದಿದ್ದರೂ ಇದರ ಮಹತ್ವವು ಕಡಿಮೆ ಯಾಗುತ್ತಿದ್ದಿಲ್ಲ. ನಕ್ಷತ್ರಗಳಿಂದ ನಮಗೆ ಬರುವುದು ಪ್ರಕಾಶ ಮಾತ್ರ. ಈ ಪ್ರಕಾಶವು ಆ ನಕ್ಷತ್ರದ ಸ್ವರೂಪವನ್ನು ತಿಳಿಸುವುದೊಂದು ವೃತ್ತ ಪತ್ರವೆ ಆಗಿರುವುದೆಂದು ಹೇಳಿದರೆ ಯಾರು ನಂಬುವರು ? ಈ ವೃತ್ತಪತ್ರವು ಸಾಂಕೇತಿಕ ಭಾಷೆಯಲ್ಲಿರುವುದು. ತಂತಿಯ ಸುದ್ದಿಗಳು ಕಡಕಡ ನುಡಿಯುತ್ತಿರುವ ಯಂತ್ರದೊಳಗಿಂದ ಬರುವಂತೆ ನಕ್ಷತ್ರಗಳ ಸುದ್ದಿಗಳು ಈ ಪ್ರಕಾಶ ಕಿರಣಗಳೊಳಗಿಂದ ಬರುವವು. ಆ ನಕ್ಷತ್ರಗಳ ನಿಜಸ್ವರೂಪ ವೇನು? ಅವುಗಳಲ್ಲಿ ಯಾವ ದ್ರವಗಳಿರುವವ? ಅವು ಯಾವ ರೂಪದಲ್ಲಿರು ನವು ? ಅವುಗಳ ಗತಿಯೆಷ್ಟು ? ಅವು ಯಾವ ದಿಕ್ಕಿನಲ್ಲಿ ಚಲಿಸುತ್ತಿರುವವು? ಒಂದಾಗಿ ಕಾಣುವ ನಕ್ಷತ್ರವು ಒಂದೇ ಇರುವುದೊ ? ಅಥವಾ ಒಂದರ ಸುತ್ತೊಂದು ತಿರುಗುವ ಜೋಡು ನಕ್ಷತ್ರಗಳಿರುವವೋ ? ಇವೆಲ್ಲ ಸಂಗತಿ ಗಳನ್ನು ಆ ಕಿರಣಗಳು ಹೇಳುವವ, ಮತ್ತು ಕಿರಣಗಳಿಂದ ಬರುವ ಇವೆಲ್ಲ ಸುದ್ದಿಗಳನ್ನು ಈ ಯಂತ್ರವು ಸಾಂಕೇತಿಕ ಭಾಷೆಯಿಂದ ವ್ಯಾವಹಾರಿಕ ಭಾಷೆಯಲ್ಲಿ ನಿರೂಸುವುದು. ಛಾಯಾ ಯ೦ತ್ರ (Photographic Camela)ವು ಇತ್ತೀಚೆಗೆ ಜ್ಯೋತಿಶಾಸ್ತ್ರಕ್ಕೆ ಬಹಳ ಸಹಾಯಕಾರಿಯಾಗಿದೆ. ಬಾಹ್ಯ ಪದಾರ್ಥಗಳ ಗೊಂಬೆಗಳು ನಮ್ಮ ಕಣ್ಣಿನ ಒಳಭಾಗದಲ್ಲಿ ಮೂಡಿರುವುದರಿಂದ ನಮಗೆ ಅವುಗಳ ಜ್ಞಾನವಾಗುತ್ತದೆ. ಈ ಗೊಂಬೆಗಳು ಕ್ಷಣಾರ್ಧದಲ್ಲಿ ಮಡು ವವು. ಮುಂದೆ ಎಷ್ಟು ಹೊತ್ತು ನೋಡುತ್ತ ನಿಂತರೂ ಹೆಚ್ಚಿನದೇನೂ ಕಾಣಿಸುವುದಿಲ್ಲ. ಆದರೆ ಛಾಯಾಯಂತ್ರದ ಮಾತು ಹೀಗಲ್ಲ. ಅದರಲ್ಲಿ ಒಂದು ಪ್ರಕಾರದ ಕಾಗದವಿದ್ದು ಅದರಮೇಲೆ ಹೊರಗಿನ ಪದಾರ್ಥಗಳ ಗೊಂಬೆಗಳು ಮೂಡುತ್ತವೆ. ಹೆಚ್ಚು ಹೆಚ್ಚು ಹೊತ್ತು ಇಟ್ಟಂತೆ ಈ ಗೊಂಬೆಗಳು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತವೆ. ಆದುದರಿಂದ ದೂರದರ್ಶಕ ಯಂತ್ರಗಳೊಳಗಿಂದ ನಾವು ನೋಡುವುದಕ್ಕೆ ಬದಲು ಅಲ್ಲಿ ಒಂದು ಛಾಯಾ ಯಂತ್ರವನ್ನು ಇಟ್ಟರೆ, ಆಕಾಶದ ಆ ಭಾಗದ ಪ್ರತಿಕೃತಿಯು ಮೂಡು ವುದು. ಹೆಚ್ಚು ವೇಳೆ ಇಟ್ಟಂತೆ ಹೆಚ್ಚು ಸ್ಪಷ್ಟವಾಗಿ ಮೂಡುವುದು, ನಮ್ಮ ಕಣ್ಣಿಗೆ ಕಾಣದ ಎಷ್ಟೋ ನಕ್ಷತ್ರಗಳೂ ಕಾಣಿಸಿಕೊಳ್ಳುವವು.