ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧುನಿಕ ವೇಧಯಂತ್ರಗಳು ಇದಲ್ಲದೆ ಈ ಪ್ರತಿಕೃತಿಗಳು ಶಾಶ್ವತವಾಗಿ ಉಳಿಯುವವು. ಇವುಗಳನ್ನು ಬೇಕಾದವರು ನೋಡಬಹುದು. ಬೇಕಾದಷ್ಟು ದಿವಸ ಇಡಬಹುದು. ಬೇಕಾದಲ್ಲಿಗೆ ಕಳುಹಿಸಬಹುದು. ಗಾಯಕರ ಇಂಪಾದ ಸ್ವರವು ಗಾನ ಯಂತ್ರ (ಫೋನೋಗ್ರಾಫ)ದಲ್ಲಿ ತುಂಬಡಲ್ಪಡುವಂತೆ ಆ ಕಾಲದ ಆಕಾಶದ ನಕಾಶವು ಇಂತಹ ಪ್ರತಿಕೃತಿಗಳಲ್ಲಿ ತುಂಬಡಲ್ಪಡುವುದು. - ಆಧುನಿಕ ವೇಧಶಾಲೆಗಳಲ್ಲಿ ಇನ್ನೂ ಎಷ್ಟೋ ಯಂತ್ರಗಳಿರುವವು. ಸೂರ್ಯನಿಂದ ನಮಗೆ ಬರುವ ಉಷ್ಣತೆಯನ್ನಳೆಯುವ ಯಂತ್ರಗಳಿರುವವು. ಚಂದ್ರನಿಂದಲೂ ನಮಗೆ ಉಷ್ಣತೆಯ ಒರುತ್ತಿರಬಹುದೊ ? ಚಂದ್ರನು ಹಿಮಕಿರಣನಲ್ಲವೆ ? ಅಹುದು ಅವನಿಂದಲೂ ಬಹಳ ಸ್ವಲ್ಪ ಪ್ರಮಾಣದಲ್ಲಿ ಉಷ್ಣತೆಯು ಬರುವುದು. ಅಷ್ಟೇ ಏಕೆ, ಪ್ರತಿಯೊಂದು ನಕ್ಷತ್ರದಿಂದಲೂ ನಮಗೆ ಅತ್ಯಲ್ಪವಾದ ಉಷ್ಣತೆಯು ಬರುವುದು. ಆಧುನಿಕ ಯಂತ್ರಗಳು ಅದನ್ನು ಅಳೆಯಬಲ್ಲವು. ೨೦೦ ಮೊಳ ಅಂತರದಮೇಲೆ ಒಂದು ಮೇಣ ಬತ್ತಿಯು ಉರಿಯುತ್ತಿದ್ದರೆ ಅದರಿಂದ ನಮಗೆ ಬರುವ ಉಷ್ಣತೆಯನ್ನು ಕೂಡ ಈ ಯಂತ್ರಗಳು ಅಳೆಯಬಲ್ಲವು.