ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ನೆಯ ಪ್ರಕರಣ ಪ್ರಾಚೀನ ಇತಿಹಾಸ ಈ ಪ್ರಕರಣದಲ್ಲಿ ನಾವು ನಮ್ಮ ದೇಶದ ಜ್ಯೋತಿಶ್ಯಾಸ್ತ್ರದ ಇತಿಹಾಸ

  • ವನ್ನು ಸ್ವಲ್ಪದರಲ್ಲಿ ಹೇಳುವೆವು. ಇತ್ತೀಚಿನ ೩೦೦-೪೦೦ ವರುಷ ಗಳಲ್ಲಾದ ಶೋಧಗಳು ಇನ್ನೂ ಭಾರತೀಯರ ವಶವಾಗಿತ್ತೆಂದು ಹೇಳ ಬಹುದು. ಈಗೀಗ ಹೊಸ ಶೋಧಗಳ ವಿಷಯವಾಗಿ ಕುತೂಹಲವು ಮಾತ್ರ ಹುಟ್ಟುತ್ತಿದೆ. ಆ ತರಹದ ಕುತೂಹಲವನ್ನು ಹುಟ್ಟಿಸುವುದೆ ಈ ಗ್ರಂಧದ ಉದ್ದೇಶ.

ನಮಗೆ ಉಪಲಬ್ದವಿರುವ ಜ್ಯೋತಿಷ ಗ್ರಂಥಗಳಲ್ಲಿ ಅತಿ ಪ್ರಾಚೀನ ಗ್ರಂಧವೆಂದರೆ, ವೇದಾಂಗ ಜ್ಯೋತಿಷವು. ಅದರಲ್ಲಿ ಸೂರ್ಯ ಚಂದ್ರರ ಸ್ಥಿತಿಯ ಗಣಿತದ ವಿಚಾರ ಮಾತ್ರವೆ ಒಂದಿದೆ. ಅನಂತರದ ಗ್ರಂಧವೆಂದರೆ ಅಥರ್ವವೇದಾಂಗ ಜ್ಯೋತಿಷವು. ಇದರಲ್ಲಿ ಸಂಹಿತೆ ಮತ್ತು ಜಾತಕದ ವಿಷಯವೂ ಸ್ವಲ್ಪ ಬಂದಿದೆ. ಆಮೇಲಿನ ಗ್ರಂಧಗಳೆಂದರೆ ಗರ್ಗ ಮತ್ತು ಪರಾಶರ ಮುಂತಾದವರ ಸಂಹಿತೆಗಳು. ಈ ಗ್ರಂಥಗಳಲ್ಲಿ ಮುಖ್ಯ ಮರು ಭಾಗಗಳಿರುತ್ತವೆ:-(೧) ಭುವನ ಸಂÅಅಧವಾ ಭುವನಕೋಶ-ಇದರಲ್ಲಿ ಈ ಬ್ರಹ್ಮಾಂಡದೊಳಗೆ ಸೃದ್ಧಿ, ಚಂದ್ರ, ಸೂರ್ಯ ಮುಂತಾದವರ ಸ್ಥಿತಿಯು ಹೇಗಿರುತ್ತದೆ? ಅವುಗಳಿಗೆ ಗತಿಯು ಹೇಗೆ ಪ್ರಾಪ್ತವಾಗುತ್ತದೆ? ಇವೆ ಮುಂತಾದವುಗಳ ವಿಚಾರವು ಇರುತ್ತದೆ. (೨) ಸಂಹಿತೆ-ಇದರಲ್ಲಿ ಗ್ರಹಣಗಳು, ಗ್ರಹ ಯುದ್ಧಗಳು, ಇವುಗಳಿಂದ ಜಗತ್ತಿಗಾಗುವ ಶುಭಾ ಶುಭಗಳು ಬರುತ್ತವೆ. (೩) ಚಾತಕ-ಇದರಲ್ಲಿ ವ್ಯಕ್ತಿ ವಿಷಯಕ ಸಖ ದುಃಖಗಳ ವಿಚಾರವಿರುತ್ತದೆ. ಗಣಿತಸ್ಕಂದದಲ್ಲಿ ಎಂದರೆ ಮೊದಲನೆಯ ಭಾಗದಲ್ಲಿ (ಅ) ಸಿದ್ದಾಂತ, (ಆ) ತಂತ್ರ, (ಇ) ಕರಣ ಎಂಬ ಭಾಗಗಳಿರುತ್ತವೆ. ಕಲ್ಪದ ಪ್ರಾರಂಭದಿಂದ ಮಾಡಲ್ಪಟ್ಟ ಗ್ರಹಗಣಿತಕ್ಕೆ ಸಿದ್ದಾಂತವನ್ನು ತಾರೆ; ಮಹಾಯುಗದ ಪ್ರಾರಂಭದಿಂದ ಮಾಡಲ್ಪಟ್ಟ ಗ್ರಹಗಣಿತಕ್ಕೆ ತಂತ್ರವೆನ್ನುತ್ತಾರೆ; ಯಾವುದೊಂದು ಶಕದ ಪ್ರಾರಂಭದಿಂದ ಮಾಡಲ್ಪಟ್ಟಿ ಗ್ರಹಗಣಿತಕ್ಕೆ ಕರಣವೆನ್ನುತ್ತಾರೆ.