ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದವುಗಳ ಸಂಪಾದಕರಿಗೂ ಇಂತಹ ಗ್ರಂಥಗಳ ಸಂಪಾದಕರಿಗೂ ಬಹು ಭೇದವಿದೆ. ಇಂತಹ ಗ್ರಂಥಗಳ ಸಂಪಾದಕರಿಗೆ ಕರ್ನಾಟಕದ ಜನ ಸಾಮಾನ್ಯದ ಅಭಿರುಚಿ, ಪ್ರಗತಿ, ಪರಿಸ್ಥಿತಿ ಮುಂತಾದವುಗಳನ್ನು ನೋಡಿಕೊಂಡು ಪುಸ್ತಕಗಳಿಗೆ ಬೇರೆ ಬೇರೆ ರೂಪಗಳನ್ನು ಕೊಡಬೇಕಾಗು ತದೆ. ಆದುದರಿಂದ, ಕರ್ನಾಟಕದ ಜನತೆಯು ಸಂಪಾದಕರಿಗೆ ಮೇಲಿಂದ ಮೇಲೆ ಸಲಹೆಗಳನ್ನು ಕೊಟ್ಟು ಪ್ರೋತ್ಸಾಹಿಸದಿದ್ದರೆ, ಅವರಿಂದ ಈ ಮಹಾಕಾರ್ಯವು ಸಮಾಧಾನಕರವಾಗಿ ಜರುಗುವುದು ಶಕ್ಯವಿಲ್ಲ. ಕರ್ನಾಟಕದ ಜನತೆಯು ಹಾಗೆ ನೆರವಾಗುವುದೆಂದು ಬಲವಾದ ನಂಬಿಕೆ ಯುಂಟು. ಕೊನೆಗೆ, ಈ ಗಹನ ವಿಷಯವನ್ನು ಉತ್ಕೃಷ್ಟವಾಗಿ ಅಭ್ಯಾಸ ಮಾಡಿದ ಪ್ರೊಫೆಸರ್ ತಿರುಮಲರಾವ ಪಾಟೀಲ, ಎಂ.ಎ ಇವರು ನಮ್ಮ ಪ್ರಾರ್ಥನೆಯನ್ನು ಮನ್ನಿಸಿ, ಅತ್ಯಂತ ಪರಿಶ್ರಮಪಟ್ಟು, ಸ್ವಲ್ಪಾವಧಿಯಲ್ಲಿ ಈ ಗ್ರಂಧವನ್ನು ಬರೆದುಕೊಟ್ಟಿದುದಕ್ಕಾಗಿ ನಾವು ಅವರಿಗೆ ವಂದನೆಗಳನ್ನು ಸಮರ್ಪಿಸುತ್ತೇವೆ. ಅದೇ ಮೇರೆಗೆ, ಬೆಂಗಳೂರು ಪ್ರೆಸ್ಸಿನವರು ಇದನ್ನು ಅಲ್ಪಕಾಲದಲ್ಲಿಯೇ ಅತ್ಯಂತ ಸುಂದರವಾಗಿ ಮುದ್ರಿಸಿಕೊಟ್ಟುದುದಕ್ಕಾಗಿ ನಾವು ಅವರ ಉಪಕಾರವನ್ನು ಸ್ಮರಿಸುತ್ತೇವೆ. ನವಜೀವನ ಸ೦ಘ, ) ಸಾಧನಕೇರಿ, ಧಾರವಾಡ, ೧-೨೫೪೧. ಆಲೂರ ವೆಂಕಟರಾಯ, ಸಂಪಾದಕ.