ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಈ ಗ್ರಂಧದ ಮೇಲೆ ನನ್ನ ದೇನೋ ಹೆಸರಿದ್ದರೂ ಇದಕ್ಕೊಬ್ಬ ದತ್ತಕ ತಂದೆಗಳಿರುವರು. ನವಜೀವನ ಸಂಘದ ಸಂಚಾಲಕರೂ ನವಜೀವನ ಗ್ರಂಧಭಾಂಡಾರದ ಸಂಪಾದಕರೂ ಆದ ಶ್ರೀ ಆಲೂರ ವೆಂಕಟರಾಯರೇ ಇವರೆಂದು ಬೇರೆ ಹೇಳಲಿಕ್ಕೆ ಬೇಡ, ಈ ಪುಸ್ತಕದ ೪ನೆಯ ಅಧ್ಯಾಯದಲ್ಲಿ ಜ್ಯೋತಿರ್ದೆವಿಯ ಮುಂದೆ ಆಕೆಯ ಭಕ್ತರು ಮಾಡಿದ ತಪಶ್ಚರ್ಯವು ವರ್ಣಿಸಲ್ಪಟ್ಟಿರುವುದು. ಶ್ರೀ ಆಲೂರ ವೆಂಕಟರಾಯರು ಕರ್ನಾಟಕ ಶಾರದೆಯನ್ನು ಕುರಿತು ಮಾಡಿದ ಕಡುತರ ತಪಶ್ಚರ್ಯದ್ದೇ ಈ ಪುಸ್ತಕವು ದೃಶ್ಯಫಲವಾಗಿದೆ. ವಿಷಯವೇನೋ ನನ್ನ ದು; ಗಹನವಾದುದು ; ಸಕೃ ದರ್ಶನಕ್ಕೆ ನೀರಸವಾದುದು. ಆದರೆ, ಇದಕ್ಕೆ ಶ್ರೀ ಆಲೂರ ವೆಂಕಟ ರಾಯರ ಲೇಖನಿಯ ನೆರವು ದೊರೆತಿರುವುದು. ಇಂಧ ನೆರವಿನಿಂದ ಏನಾಗಲಿಕ್ಕಿಲ್ಲ? ಈ ವಿಷಯದಲ್ಲಿ, ಆಂಗ್ಲ ಭಾಷೆಯಲ್ಲಿ ಅನೇಕ ಗ್ರಂಧಗಳಿರುವುವು. ಈ ಗ್ರಂಧಕ್ಕೆ ಆಧಾರಭೂತವಾಗಿರುವ ಗ್ರಂಥಗಳ ಪಟ್ಟಿಯನ್ನು ಈ ಗ್ರಂಥದ ಕೊನೆಗೆ ಜೋಡಿಸಿರುವೆನು. ಶ್ರೀ ಆಲೂರ ವೆಂಕಟರಾಯರು ಈ ಗ್ರಂಧದ ದತ್ತಕ ತಂದೆಗಳಾದಂತೆ; ನಾನು ಓದಿ ಈ ವಿಷಯವನ್ನರಿತುಕೊಂಡ ಪುಸ್ತಕಗಳ ಲೇಖಕರೆಲ್ಲ ಈ ಪುಸ್ತಕದ ಪೂರ್ವಜ(Ancestors)ರಂತಿರುವರು. ಈ ವಿಷಯವನ್ನು ಏನೂ ಅರಿಯದವರಿಗೆ ಕೂಡ ವಿಷಯಜ್ಞಾನ ವುಂಟಾಗಬೇಕೆಂದು ತಿಳಿದು ಈ ಗ್ರಂಧವು ಆದಷ್ಟು ಸುಲಭವಾಗಿ ಬರೆ ಯಲ್ಪಟ್ಟಿದೆ. ಜ್ಯೋತಿಶ್ಯಾಸ್ತ್ರದ ಜ್ಞಾನವನ್ನು ವಿಶೇಷವಾಗಿ ಮಾಡಿಕೊಡು ವುದಕ್ಕಿಂತ ಜಿಜ್ಞಾಸೆಯನ್ನು ಹುಟ್ಟಿಸುವುದೇ ಮುಖ್ಯ ಧೈಯವಾಗಿದೆ. * ಆಕಾಶರಾಜ ಪಟ್ಟಣ ಅಧವಾ ಖಗೋಲ” ಎಂಬದೊಂದು ಪ್ರಕರಣದಲ್ಲಿ