ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ೧ ನೆ ಪ್ರಕರಣ ಅದ್ಭುತವಾದ ಆನಂದ ವಿಶ್ವವೆಂಬುದೊಂದು ಚಿಕ್ಕ ತೊಟ್ಟಿಲು. ಆ ತೊಟ್ಟಿಲಿನಲ್ಲಿ ಮನುಷ್ಯವೆಂಬ ಎಳೆಗೂಸು ಹೆಬ್ಬಟ್ಟು ಚೀಪುತ್ತ ಮಲಗಿದೆ. ಮೇಲಕ್ಕೆ ದೂರದಲ್ಲಿ, ಆ ತೊಟ್ಟಿಲಿಗೆ ಆಕಾಶವೆಂಬುದೊಂದು ಗುಬ್ಬಿಯ ಚಟ್ಟು ಕಟ್ಟಿದೆ. ಆ ಚಟ್ಟಿನಲ್ಲಿ ಸೂರ್ಯ ಚಂದ್ರವೆಂಬ ಎರಡು ಕಾಜಿನ ಗಂಡುಗಳು ತೂಗ ಬಿಟ್ಟಿವೆ. ಗ್ರಹಗಳು ನಕ್ಷತ್ರಗಳೇ ಮುಂತಾದ ತರತರಹದ ಗುಬ್ಬಿಗಳು ಜೋತಾಡುತ್ತಿವೆ. ತೊಟ್ಟಿಲಿನಲ್ಲಿಯ ಕೂಸು ಸಂಸಾರ ದುಃಖದಿಂದ ಬಳಲಿ ಅಳುವಾಗ ಈ ಚಟ್ಟಿನ ಕಡೆಗೆ ನೋಡಿದರೆ ಅದಕ್ಕೆ ಆನಂದವಾಗುತ್ತದೆ; ಅಳುವುದನ್ನು ಬಿಡುತ್ತದೆ. ತೊಟ್ಟಿಲು ತೂಗಾಡಹತ್ತಿತೆಂದರೆ ಆ ಗುಂಡು ಗಳು ಅಗಳಾಡುವುದನ್ನು ನೋಡಿ ಅದಕ್ಕೆ ಅದ್ಭುತವೆನಿಸುತ್ತದೆ. ಅವು ಗಳನ್ನು ತೆಗೆದುಕೊಳ್ಳಲು ಕೈಚಾಚುತ್ತದೆ. ಕೈಗೆ ನಿಲುಕದಿರುವುದನ್ನು ಕಂಡು ಅಳುತ್ತದೆ. ಆದರೂ ಮನಸ್ಸಿನಲ್ಲಿ ಏನೋ ಒಂದು ತರಹದ ಆನಂದ. ಆ ಆನಂದಕ್ಕೆ ಕುತೂಹಲವೇ ಕಾರಣ. ಮನುಷ್ಯನು ಎಷ್ಟೇ ದುಃಖದಲ್ಲಿದ್ದರೂ ಗಗನ ಮಂಡಲವು ಆತನಿಗೆ ಕ್ಷಣಹೊತ್ತಾದರೂ ಆನಂದವನ್ನುಂಟುಮಾಡದೆ ಬಿಡುವುದಿಲ್ಲ. ಆಕಾಶದ ಕಡೆಗೆ ನೋಡಿ ಪಶುಪಕ್ಷಿಗಳು ಕೂಡ ಆನಂದಬಡುತ್ತವೆ. ಅರುಣೋದಯ