ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ವಾದೊಡನೆಯೆ ಪಕ್ಷಿಗಳು ಕಿಕಿ ಧ್ವನಿಗೈಯುತ್ತವೆ. ದನಕರುಗಳು ಉಲ್ಲಾಸದಿಂದ ಬಾಲವನ್ನೆತ್ತಿ ಹಾರಾಡುತ್ತವೆ. ಚಂದ್ರಬಿಂಬವನ್ನು ನೋಡಿ ದೊಡನೆಯೆ ಜಿಂಕೆಗಳು ಜಿಗಿಯುತ್ತವೆ. ನಾಯಿಗಳು ಇದೇನದ್ಭುತವೆಂದು ಬೊಗಳುತ್ತವೆ. ಹೀಗೆ ಹಗಲೂ ರಾತ್ರಿಯ ಮುಗಿಲು ಜಗತ್ತಿನೊಳಗಿನ ಪ್ರಾಣಿಗಳ ಮನಸ್ಸನ್ನು ಆಕರ್ಷಿಸುತ್ತದೆ. ಆದಕಾರಣ ಆಕಾಶದ ದರ್ಶನ ದಿಂದ ಮನುಷ್ಯನಿಗೂ ಆನಂದಾಶ್ಚರ್ದಗಳುಂಟಾದರೆ ಸೋಜಿಗವೇನು ? ಆದರೆ ಪಶುಗಳು ಪಡುವ ಆನಂದಕ್ಕೂ ಮನುಷ್ಯನು ಪಡುವ ಆನಂದಕ್ಕೂ ಭೇದವಿರಬೇಡವೇ ? ಆಕಾಶದೊಳಗಿನ ಆ ಆಶ್ಚರ್ಯಕರವಾದ ಪದಾರ್ಥಗಳನ್ನು ನೋಡಿ ಪಶುಪಕ್ಷಿಗಳು ಕೇವಲ ಆನಂದವನ್ನು ಪಡೆಯುತ್ತ ವಲ್ಲದೆ, ಅವುಗಳನ್ನು ತಿಳಿದುಕೊಳ್ಳುವುದಕ್ಕೆ ಕುತೂಹಲಪಡುವುದಿಲ್ಲ. ಆದರೆ ಮನುಷ್ಯನ ರೀತಿ ಬೇರೆ. ಆತನಿಗೆ ಅವುಗಳ ದರ್ಶನದಿಂದಾಗುವ ಸುಖವು ಸಾಲದು ; ಅಷ್ಟರಿಂದ ಆತನು ತೃಪ್ತನಾಗಲಾರನು-ಆಗಬಾರದು. ತೊಟ್ಟಿಲಿನಲ್ಲಿರುವ ಕೂಸು ಆ ಚಟ್ಟಿನೊಳಗಿರುವ ಗುಂಡುಗಳನ್ನು ತೆಗೆದು ಕೊಳ್ಳುವುದಕ್ಕೆ ಪ್ರಯತ್ನಿಸುವಂತೆ, ಮನುಷ್ಯನು ಈ ಸೂರ್ಯಚಂದ್ರಾದಿ ಗಳನ್ನು ಕುರಿತು ತಿಳಿದುಕೊಳ್ಳುವುದಕ್ಕೆ ಸೃದ್ಧಿಯ ಬುನಾದಿಕಾಲದಿಂದಲೂ ಪ್ರಯತ್ನಿಸುತ್ತ ಬಂದಿರುವನು. ಆತನಲ್ಲಿರುವ ಕುತೂಹಲ ಬುದ್ದಿಯೇ ಜ್ಞಾನದ ಬೆಳವಣಿಗೆಯ ಬೀಜವು, ಚಂದ್ರ ಸೂರ್ಯರು ಹೇಗೆ ಮತ್ತು ಏಕೆ ತಿರುಗುತ್ತಾರೆ? ಸೂರ್ಯನ ತೇಜವು ಇಷ್ಟು ಪ್ರಖರವೇಕೆ ? ಚಂದ್ರನ ಕಾಂತಿಯು ಇಷ್ಟು ಶೀತಲವೇಕೆ ? ಗ್ರಹಣಗಳೆಂದರೇನು ? ನಕ್ಷತ್ರಗಳು ಏಕೆ ಹೊಳೆಯುತ್ತವೆ? ಇವೆಲ್ಲ ವಸ್ತುಗಳು ಎಲ್ಲಿಂದ ಬಂದವ್ರ -ಎಲ್ಲಿಗೆ ಹೋಗುವವು? ಈ ವಿಶ್ವದ ಮುಂದಿನ ಗತಿಯೇನು ? ಇವೆಲ್ಲ ಸಂಗತಿಗಳ ವಿಷಯವಾಗಿ ಮನುಷ್ಯನು ವಿಚಾರಮಾಡಿ ಆಯಾ ಕಾಲಕ್ಕೆ ತಕ್ಕಂತೆ ಉತ್ತರ ಗಳನ್ನು ಕೊಡುತ್ತಲೇ ಬಂದಿರುವನು. ಇಂದಿನ ಉತ್ತರವು ನಾಳೆಗೆ ಸ್ಥಿರ ಉಳಿದಿರುವುದಿಲ್ಲ. ಮೇಲಿಂದ ಮೇಲೆ ಅವು ಬದಲಾಗುತ್ತಲೇ ಬಂದಿವೆ; ಈಗಲೂ ಬದಲಾಗುತ್ತಿವೆ; ಮುಂದೆಯೂ ಬದಲಾಗುತ್ತಲೇ ಹೋಗುವವು. ಇಷ್ಟಾದರೂ ಕೊನೆಗೆ ಆ ವಸ್ತುಗಳ ಸಂಪೂರ್ಣ ಜ್ಞಾನವು ನಮಗೆ ಆಗ ಅಕ್ಕೂ ಇಲ್ಲ. ಆದರೂ ಚಿಕ್ಕ ಮಕ್ಕಳು ಪಾಟಿಯ ಮೇಲೆ ಬರೆದೂ