________________
ಜ್ಯೋತಿಶ್ಯಾಸ್ತ್ರ ಜ್ಯೋತಿಶ್ಯಾಸ್ತ್ರದ ಜ್ಞಾನವು ಎಷ್ಟರಮಟ್ಟಿಗೆ ಆಗಿತ್ತೆಂಬುದನ್ನು ಊಹಿಸ ಬಹುರು. ವೇದದ ಋಚಗಳಲ್ಲಿ ಆಕಾಶ, ಚಂದ್ರ, ಸೂರ್ಯ, ಉಷಾ, ಸೂರ್ಯರಶ್ಮಿ, ನಕ್ಷತ್ರ, ಋತು, ಮಾಸ, ದಿವಸ, ರಾತ್ರಿ, ವಾಯು, ಮೇಘ-ಇವೇ ಮುಂತಾದವುಗಳ ವರ್ಣನೆಗಳು ಬಂದಿವೆ. ವಿಶ್ವದ ಮಧ್ಯ ಭಾಗದಲ್ಲಿ ಪೃಥ್ವಿಯು ಇದ್ದು, ಅದರ ಸುತ್ತಲು ಸೂರ್ಯ ಚಂದ್ರ ಮುಂತಾ ದವರು ತಿರುಗುತ್ತಾರೆಂದು ಹೇಳಿದೆ. ಅವರ ಕ್ರಮವು ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಮತ್ತು ತಾರಾಮಂಡಲ-ಹೀಗೆ ಇರುತ್ತದೆ. ಸೂರ್ಯ ಚಂದ್ರರು ಇಷ್ಟೇ ದೂರದಲ್ಲಿದ್ದಾರೆಂದು ಹೇಳಿರ ದಿದ್ದರೂ ಅವರು ಮೋಡಗಳು ಹುಟ್ಟುವ ಸ್ಪಳಕ್ಕಿಂತ ಆಚೆಗೆ ಇರುತ್ತಾರೆಂದು ಸ್ಪಷ್ಟವಾಗಿ ಹೇಳಿದೆ. ಮಹಾಭಾರತದಲ್ಲಿ ಇಪ್ಪತ್ತೇಳು ನಕ್ಷತ್ರಗಳ ಉಲ್ಲೇಖವು ಎರಡು ಕಡೆಯಲ್ಲಿ ಬಂದಿದೆ. ಧೂಮಕೇತು ಉಲ್ಕಾಪಾತಗಳ ಉಲ್ಲೇಖವಿದೆ. ಇದು ವೇದ ಮತ್ತು ಪುರಾಣಗಳ ಕಾಲದ ಸ್ಥಿತಿಯಾಯಿತು. ಮುಂದೆ ನಾವು ಐತಿಹಾಸಿಕ ಕಾಲಕ್ಕೆ ಇಳಿದರೆ, ನಮ್ಮ ಜನರಲ್ಲಿ ಜ್ಯೋತಿ ಶಾಸ್ತ್ರದ ವಿಷಯವಾಗಿ ಅನೇಕ ಗ್ರಂಥಗಳು ಹುಟ್ಟಿರುವವೆಂದು ಕಂಡುಬರು ವುದು. ಸೂರ್ಯ ಸಿದ್ಧಾಂತ, ಆರ್ಯಸಿದ್ಧಾಂತ, ಬ್ರಹ್ಮಸಿದ್ಧಾಂತ ಎಂಬ ಬೇರೆ ಬೇರೆ ಸಿದ್ದಾಂತ ಪದ್ದತಿಗಳು ಪ್ರಚಾರದಲ್ಲಿ ಬಂದವು. ಆರ್ಯಭಟ್ಟ, ಬ್ರಹ್ಮಗುಪ್ತ, ವರಾಹಮಿಹಿರ, ಭಾಸ್ಕರಾಚಾರ್ಯ, ಗಣೇಶದೈವಜ್ಞಮೊದಲಾದ ಜ್ಯೋತಿಷಿಗಳು ಈ ದೇಶದಲ್ಲಿ ಹುಟ್ಟಿದರು. ಪೃಥ್ವಿಯು ಗೋಲ ವಿರುತ್ತದೆ; ಸೃದ್ಧಿಯು ವಿಶ್ವದ ಕೇಂದ್ರವು ; ನಕ್ಷತ್ರಗಳು ಬಹಳ ದೂರದಲ್ಲಿರು ಇವೆ; ಸೂರ್ಯ ಚಂದ್ರರು ಸೃಥ್ವಿಯ ಸುತ್ತಲೂ ತಿರುಗುತ್ತಾರೆ; ಮಂಗಳ, ಬುಧ ಮುಂತಾದ ಐದು ಗ್ರಹಗಳು ಪೃಥ್ವಿಯ ಸುತ್ತಲೂ ತಿರುಗುತ್ತವೆ ಎಂಬಿವೇ ಅವರ ಮುಖ್ಯ ಸಿದ್ದಾಂತಗಳು. ಸೂರ್ಯ ಮತ್ತು ಚಂದ್ರ ಇವರ ಗ್ರಹಣಗಳ ನಿಜವಾದ ಕಾರಣವು ನಮ್ಮ ಜನರಿಗೆ ಗೊತ್ತಿತ್ತು. ಗ್ರಹಗಳ ಪ್ರದಕ್ಷಿಣೆಯ ಕಾಲವು ಗೊತ್ತಿತ್ತು. ಗ್ರಹಗಳು ಭೂಮಿಯ ಸುತ್ತಲು ತಿರುಗುವಾಗ ಹೆಚ್ಚು ಕಡಿಮೆ ವೇಗದಿಂದ ತಿರುಗುತ್ತವೆಂಬ ಮಾತು ಅವರಿಗೆ ತಿಳಿದಿತ್ತು. ಪೃಥ್ವಿಯು ತನ್ನ ಸುತ್ತಲೂ ತಾನು ತಿರುಗುತ್ತದೆಂಬುದನ್ನು ಅವರು ಕಂಡುಹಿಡಿದಿದ್ದರು. ನಮ್ಮ ಜನರು ಕೆಲವು ಯಂತ್ರಗಳನ್ನು