ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ನೆಯ ಪ್ರಕರಣ ಹಳೆಯ ಜ್ಞಾನಸಂಪತ್ತು ಆಕಾಶ ದೊಳಗಿನ ಭವ್ಯವಾದ ಮತ್ತು ಮನೋವೇಧಕವಾದ ಚಮತ್ಕಾರಗಳನ್ನು ಕಂಡು, ಮನುಷ್ಯನಿಗೆ ಅದ್ಭುತವಾದ ಆನಂದ ವುಂಟಾಗುತ್ತದೆಂದು ನಾವು ಹಿಂದೆ ಹೇಳಿದೆವಷ್ಟೆ. ಈ ಆನಂದವನ್ನು ಸವಿಯಲು ಮತ್ತು ಬೆಳೆಸಲು ಪುರಾತನಕಾಲದ ಜನರು ಹೇಗೆ ಪ್ರಯತ್ನಿ ಸಿದರೆಂಬುದನ್ನು ಇಲ್ಲಿ ಹೇಳುತ್ತೇವೆ. ಪುರಾತನಕಾಲವೆಂದರೆ ೧೬ನೆಯ ಶತಮಾನದವರೆಗಿನ ಕಾಲವೆಂದೂ ಅರ್ವಾಚೀನ ಕಾಲವೆಂದರೆ ಅದರ ಇತ್ತೀಚೆಯ ಕಾಲವೆಂದೂ ನಾವು ವಿಭಾಗಮಾಡಬಹುದು. ಏಕೆಂದರೆ, ೧೬ನೆಯ ಶತಮಾನದಲ್ಲಿ ಯುರೋಪ ಖಂಡದಲ್ಲಿ ಕೋಪರ್ನಿಕಸ್‌ನೆಂಬ ಪ್ರಸಿದ್ದ ಜ್ಯೋತಿಷಿಯು ಮುಂದೆ ಬಂದಾಗಿ ನಿಂದ ಈ ಶಾಸ್ತ್ರದಲ್ಲಿ ಅತ್ಯಂತ ಕ್ರಾಂತಿಯುಂಟಾಗಿದೆ. ಮುಂದೆ ದುರ್ಬಿನು ಮುಂತಾದ ಯಂತ್ರಗಳ ಮೂಲಕ ಕಲ್ಪನಾತೀತವಾದ ಪ್ರಗತಿಯಾಗಿದೆ. ಇನ್ನು ೧೬ನೆಯ ಶತಮಾನದವರೆಗೆ ನಮ್ಮ ದೇಶದಲ್ಲಿ ಈ ಸಂಬಂಧದ ಜ್ಞಾನವು ಎಷ್ಟರಮಟ್ಟಿಗೆ ಬೆಳೆದಿತ್ತೆಂಬುದನ್ನು ಮೊದಲು ಸ್ವಲ್ಪದರಲ್ಲಿ ಹೇಳುತ್ತೇವೆ (೧೪ನೆಯ ಪ್ರಕರಣದಲ್ಲಿ ವಿಸ್ತರಿಸಿರುವೆವು), ಹಿಂದು ಸ್ಥಾನವು ಅತ್ಯಂತ ಪುರಾತನ ರಾಷ್ಟ್ರವು ; ಒಂದು ಕಾಲಕ್ಕೆ ಅತ್ಯಂತ ಸುಧಾರಿಸಿದ ರಾಷ್ಟ್ರವು, ಎಂದ ಬಳಿಕ ಈ ರಾಷ್ಟ್ರದಲ್ಲಿ ಜನರು ಆಕಾಶ ದೊಳಗಿನ ಈ ಚಮತ್ಕಾರ ವಸ್ತುಗಳ ವಿಷಯವಾಗಿ ವಿಚಾರ ಮಾಡದೆ ಹೇಗಿದ್ದಾರು? ಆದರೆ ನಮ್ಮ ರಾಷ್ಟ್ರವು ಅತ್ಯಂತ ಪುರಾತನ ರಾಷ್ಟ್ರ) ವಾಗಿರುವುದರಿಂದಲೇ ಅದರ ವಿಷಯಕ್ಕೆ ನಮಗೆ ಅಜ್ಞಾನವಿರುತ್ತದೆ. ಅತ್ಯಂತ ಪ್ರಾಚೀನಕಾಲದ ಇತಿಹಾಸವು ನಮಗೆ ಉಪಲಬ್ದವಿರುವುದಿಲ್ಲ. ವೇದ ಮತ್ತು ಪುರಾಣಗಳ ಕಾಲಕ್ಕೆ ಈ ಬಗೆಯ ಅಚ್ಚಾತಕಾಲವೆಂದು ಕರೆಯಬಹುದು. ಆಗಿನ ಕಾಲದಲ್ಲಿ ಜ್ಯೋತಿಶಾಸ್ತ್ರವು ಎಷ್ಟರಮಟ್ಟಿಗೆ ಪ್ರಗತಿಯನ್ನು ಹೊಂದಿತ್ತೆಂಬುದನ್ನು ತಿಳಿಯಲು, ನಮ್ಮ ಹತ್ತರ ಪ್ರತ್ಯಕ್ಷ ಪ್ರಮಾಣಗಳಿರುವುದಿಲ್ಲ. ಆದರೆ ಆ ಕಾಲದ ಗ್ರಂಥಗಳನ್ನೊದಿದರೆ ಆಗ