ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಚಮತ್ಕಾರಗಳ ಕಡೆಗೆ ನೋಡಬೇಕು. ಜಗತ್ತಿನಲ್ಲಿ ನಾನೇ ಇಂದ್ರನು, ನಾನೇ ಚಂದ್ರನು ಎಂಬುದಾಗಿ ಹೆಮ್ಮೆ ಪಡುವವರ ಗರ್ವವು ಆಕಾಶವನ್ನು ನೋಡಿದ ಕೂಡಲೆ ಜರನೆ ಇಳಿಯುವುದು, ಮತ್ತೊಂದು ವಿಶೇಷ ವೇನೆಂದರೆ ತೊಟ್ಟಿಲಿನೊಳಗಿನ ಕೂಸಿಗೆ ಚಟ್ಟಿನೊಳಗಿನ ಕಾಜಿನ ಗುಂಡುಗಳು ಕೈಗೆ ಸಿಕ್ಕದಿದ್ದರೂ ಒಂದು ತರಹದ ಆನಂದವಾಗುವಂತೆ, ಮನುಷ್ಯನು ನಭೋಮಂಡಲದಲ್ಲಿರುವ ಈ ಚಮತ್ಕಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಬುದ್ದಿಗೆ ಅವು ನಿಲುಕಿದರೂ ಆನಂದ, ನಿಲುಕ ದಿದ್ದರೂ ಆನಂದ. ಸಾರಾಂಶ, ಈ ವಿಷಯದಲ್ಲಿ ಮನುಷ್ಯನಿಗೆ ಎದ್ದರೂ ಆನಂದ, ಬಿದ್ದರೂ ಆನಂದ; ಆನಂದವೇ ಆನಂದ, ಅದ್ಭುತವಾದ ಆನಂದ!!!