ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಸೃಥ್ವಿಯು ಗೋಲವಿರುತ್ತದೆ. (೨) ಸೃದ್ಧಿಯು ವಿಶ್ವದ ಕೇಂದ್ರವು. (೩) ವಿಶ್ವವು ಗೋಲವಿರುತ್ತದೆ. (೪) ಸೃದ್ಧಿಯ ಸುತ್ತಳತೆಯು ೧೮೦ ಸಾವಿರ ಸ್ಟಾಡಿಯಾ (೨,೦೦೦ ಮೈಲು) ಇರುತ್ತದೆ. (೫) ನಕ್ಷತ್ರಗಳು ಬಹಳ ದೂರವಿರುತ್ತವೆ. (೬) ಸೂರ್ಯನು ಪೃಥ್ವಿಯ ಸುತ್ತಲು ತಿರುಗುತ್ತಾನೆ. (೬) ಚಂದ್ರನು ಪೃಥ್ವಿಯ ಸುತ್ತಲು ತಿರುಗುತ್ತಾನೆ. (೮) ಗ್ರಹಗಳು ಸೃಥ್ವಿಯ ಸುತ್ತಲು ತಿರುಗುತ್ತವೆ. ಟೋಲೆಮಿಯ ಈ ಸಿದ್ದಾಂತಗಳಲ್ಲಿ ಮುಂದೆ ಸುಮಾರು ೧೪೦೦ ವರುಷಗಳವರೆಗೆ ಏನೂ ಪ್ರಗತಿಯಾಗಲಿಲ್ಲ. ಯುರೋಪಖಂಡದ ಆ ಕಾಲಕ್ಕೆ ಕಗ್ಗತ್ತಲೆಯ ಕಾಲವೆಂದು ಕರೆಯ ಬಹುದು. ನಮ್ಮಲ್ಲಿಯಂತೆ ಪ್ರಸಿದ್ದ ಜ್ಯೋತಿಷಿಗಳೂ ಹುಟ್ಟಲಿಲ್ಲ; ಗ್ರಂಧಗಳೂ ಆಗಲಿಲ್ಲ. ಟೋಲೆಮಿಯ ಸಿದ್ಧಾಂತಗಳನ್ನು ಕ್ರಿಶ್ಚನ್ ಧರ್ಮ ಗುರುಗಳು ಅಂಗೀಕರಿಸಿದರು. ಮತ್ತು ಅವನ್ನೆ ೧೪೦೦ ವರುಷಗಳ ವರೆಗೆ ಯುರೋಪಖಂಡದಲ್ಲಿಯ ಸಾಮಾನ್ಯ ಜನರು ಕಣ್ಣು ಮುಚ್ಚಿ ಕೊಂಡು ನಂಬುತ್ತಬಂದರು. ಮೇಲೆ ವಿವರಿಸಿದುದರ ಮೇಲಿಂದ ಕ೦ಡು ಬರು ವು ದೇನೆ೦ದರೆ, ಯುರೋಪಖಂಡದಲ್ಲಿ ಈ ಶಾಸ್ತ್ರವು ಕೋಪರ್ನಿಕಸನವರೆಗೆ ಏನೂ ಪ್ರಗತಿ ಯನ್ನು ಹೊಂದಲಿಲ್ಲ. ನಮ್ಮ ದೇಶದಲ್ಲಿ ಅನೇಕ ಜ್ಯೋತಿಷಿಗಳು ಹುಟ್ಟಿ ಅನೇಕ ಗ್ರಂಥಗಳನ್ನು ಬರೆದರು. ಅಲ್ಪಸ್ವಲ್ಪ ಜನರು ಹೊಸ ಹೊಸ ಶೋಧಗಳನ್ನೂ ಮಾಡಿದರು. ಆದರೂ ಸಾಮಾನ್ಯ ಜನರಲ್ಲಿ ಯುರೋಪ ಖಂಡದಲ್ಲಿಯಂತೆಯೇ ಇಲ್ಲಿಯಾದರೂ ಈ ಶಾಸ್ತ್ರದ ವಿಷಯವಾಗಿ ಬಹಳ ಜ್ಞಾನವು ಇರಲಿಲ್ಲವೆಂಬುದನ್ನು ನಾವು ಒಪ್ಪಲೇ ಬೇಕಾಗುವುದು.