________________
೩ ನೆಯ ಪ್ರಕರಣ ಇಂದಿನ ಸ್ಥಿತಿ ನಾವು ಹೋದ ಪ್ರಕರಣದಲ್ಲಿ ಮನುಷ್ಯನಲ್ಲಿ ಸಹಜವಾಗಿ ಇರುವ ಕುತೂಹಲ ಬುದ್ದಿಯ ಮೂಲಕ, ಹಿಂದಿನ ಜನರು ಈ ವಿಷಯದಲ್ಲಿ ಎಷ್ಟರಮಟ್ಟಿಗೆ ಪ್ರಗತಿಯನ್ನು ಹೊಂದಿದ್ದರೆಂದು ಹೇಳಿದೆವು. ಮತ್ತು ಕೋಪರ್ನಿಕಸನ ಕಾಲದಿಂದೀಚೆಗೆ ಜ್ಯೋತಿಶ್ಯಾಸ್ತ್ರದ ಜ್ಞಾನವು ನೂರ್ಮಡಿ ಬೆಳೆದಿದೆಯೆಂದೂ ಹೇಳಿದೆವು. ಈಗಿನ ಅದರ ಸ್ಥಿತಿಯನ್ನು ನೀವು ಕೇಳಿದರೆ ಚಕಿತರಾಗದೆ ಇರಲಾರಿರಿ. ಹಿಂದುಸ್ಥಾನದಲ್ಲಿ ಮುಸಲ್ಮಾನರ ದಾಳಿಗಳು ಸುರುವಾದಂದಿನಿಂದ ಅದರ ಬಹುಶಃ ಯಾವತ್ತೂ ಪ್ರಗತಿಯು ಕುಂಠಿತ ವಾಯಿತೆಂದು ಹೇಳಬಹುದು. ಅದೇ ಸುಮಾರಕ್ಕೆ ಯುರೋಪಖಂಡವು ತಲೆಯೆತ್ತಿತು; ಜ್ಯೋತಿಶ್ಯಾಸ್ತ್ರದಲ್ಲಿ ನವಚೈತನ್ಯವುಂಟಾಯಿತು. ಟೋಲೆಮಿಯ ಸಿದ್ಧಾಂತಗಳನ್ನು ಯುರೋಪಖಂಡದ ಜನರು ಸುಮಾರು ೧೪೦೦ ವರುಷಗಳವರೆಗೆ ಕಣ್ಣು ಮುಚ್ಚಿಕೊಂಡು ನಂಬು ತ್ತಿದ್ದರೆಂದು ಹಿಂದೆ ಹೇಳಿದೆವಷ್ಟೆ. ಈ ವಿಷಯದಲ್ಲಿ ಕೆಲವರಿಗೆ ಆಗಾಗ ಸಂದೇಹಗಳು ಹುಟ್ಟಿದರೂ ಧರ್ಮಗುರುಗಳ ವಿರುದ್ದವಾಗಿ ಮಾತಾಡಲು ಯಾರೂ ಧೈರ್ಯಪಡಲಿಲ್ಲ. ವಿಚಾರವು ಮಲೆತುನಿಂತ ನೀರಿನಂತೆ ಕೊಳಚೆ ಯಾಗಿತ್ತು. ಆದರೆ ಅಂಧವಿಶ್ವಾಸವು ಎಷ್ಟು ದಿವಸ ಬಾಳೀತು ? ಜನರು ಸ್ವತಂತ್ರವಾಗಿ ವಿಚಾರಮಾಡತೊಡಗಿದರು. ಪ್ರತಿಯೊಂದು ವಿಷಯದಲ್ಲಿ ಹಳೆಯ ವಿಚಾರಗಳ ವಿರುದ್ದವಾಗಿ ಬಂಡುಯೆದ್ದಿತು. ಆಗ ಜ್ಯೋತಿ ಶ್ಯಾಸ್ತ್ರದಲ್ಲಿ ಪುನರುಜ್ಜಿವನವು ಕಳೆಗೊಂಡು, ಇಂದಿಗೆ ಆ ಶಾಸ್ತ್ರವು ಒಳ್ಳೆ ಉಚ್ಛಾಯ ಸ್ಥಿತಿಯನ್ನು ಹೊಂದಿದೆ. ಈ ಹೊಸ ಯುಗದಲ್ಲಿ ಯುರೋಪ ಖಂಡದಲ್ಲಿ ಎಲ್ಲ ದಿಶೆಯಲ್ಲಿಯ ಪ್ರಗತಿಯು ನಡೆದಿದೆ; ವಿಶೇಷತಃ ಯಂತ್ರಕಲೆ ಮತ್ತು ವಿಜ್ಞಾನಶಾಸ್ತ್ರಗಳು ಬೆಳೆದ ಮೂಲಕ ಜ್ಯೋತಿ ಶ್ಯಾಸ್ತ್ರದ ಪ್ರಗತಿಗೆ ಒಳ್ಳೆ ಸಹಾಯವಾಗಿದೆ. ಈ ಅವಧಿಯಲ್ಲಿ ಹೊರಟ ದುರ್ಬಿನು ಅಧವಾ ದೂರದರ್ಶಕಯಂತ್ರ (Telescope) ಎಂದರೆ ಅತ್ಯಂತ ದೂರದಲ್ಲಿದ್ದ ವಸ್ತುಗಳನ್ನು ಹತ್ತಿರದಲ್ಲಿದ್ದಂತೆ ತೋರಿಸುವ ಯಂತ್ರ,