ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಂದಿನ ಸ್ಥಿತಿ ಎಷ್ಟೋ ನಕ್ಷತ್ರಗಳು ಸೂರ್ಯನಿಗಿಂತ ಲಕ್ಷಾವಧಿಪಟ್ಟು ದೊಡ್ಡ ವಿರ ಬೇಕೆಂದು ತಿಳಿದುಬಂದಿದೆ. ಅವು ನಮ್ಮಿಂದ ಅತರ್ಕವಾದ ಅಂತರದಮೇಲೆ ಇರುವವು. ನಮ್ಮಿಂದ ಸೂರ್ಯನ ಅಂತರವು ೧ ಎಂದು ತಿಳಿದರೆ, ಎಲ್ಲಕ್ಕೂ ಹತ್ತರದ ನಕ್ಷತ್ರದ ಅಂತರವು ೨ ಲಕ್ಷ ಆಗುವುದು. ಎಲ್ಲಕ್ಕೂ ದೂರದ ನಕ್ಷತ್ರದ ಅಂತರವು ಎಲ್ಲಕ್ಕೂ ಹತ್ತರದ ನಕ್ಷತ್ರದ ಅಂತರದ ೩ ಕೋಟಿ ಪಟ್ಟು ಆಗುವುದು. ಚಂದ್ರನು ಪ್ರಕಾಶಿಸುವುದು ತನ್ನ ಸ್ವಂತ ಬೆಳಕಿನಿಂದಲ್ಲ; ಸೂರ್ಯನ ಬಿಸಿಲು ಆತನಮೇಲೆ ಬೀಳುವುದರಿಂದ ಇಷ್ಟು ಕಾಂತಿಮಯ ನಾಗಿ ತೋರುತ್ತಾನೆಂದೂ, ಆತನು ಈ ಸೃದ್ಧಿಯಂತೆ ಕಠಿನವಾಗಿದ್ದು, ಆತನಮೇಲೆ ಹಿಮಾಲಯದಂತಹ ದೊಡ್ಡ ದೊಡ್ಡ ಪರ್ವತಗಳು ಕೂಡ ಇರುವವೆಂದೂ ಹೇಳಿದರೆ ನಿಮಗೆ ಸೋಜಿಗವೆನಿಸಲಿಕ್ಕಿಲ್ಲವೆ? ಹಿಂದಕ್ಕೆ ನಮ್ಮ ಕಣ್ಣಿಗೆ ಒಟ್ಟಿಗೆ ಸುಮಾರು ೬,೦೦೦ ನಕ್ಷತ್ರಗಳು ಮಾತ್ರ ಕಾಣು ತಿದ್ದವು. ದುರ್ಬಿನಯಂತ್ರದಿಂದ ನೋಡಿದರೆ ಅವುಗಳ ಸಂಖ್ಯೆಯು ೩೦ ಅಬ್ಬಗಳವರೆಗೆ ಏರಿರುವುದು ! ಸೂರ್ಯನು ಮೋಡದಾಚೆ ಇರುವ ಒಂದು ಜ್ಯೋತಿಯೆಂದಿಷ್ಟೆ ಆಗಿನ ಕಲ್ಪನೆ. ಆತನು ನಮ್ಮಿಂದ ೯ ಕೋಟಿ ಮೈಲು ದೂರದಲ್ಲಿದ್ದು ಪೃಥ್ವಿಗಿಂತ ೧೦ ಲಕ್ಷ ಪಟ್ಟು ದೊಡ್ಡದಾದ ಗುಂಡು ಆಗಿರುತ್ತಾನೆಂದು ಹೇಳಿದರೆ, ನೀವು ಒಮ್ಮೆಲೆ ನಂಬಲಿಕ್ಕೂ ಇಲ್ಲ. ಆದರೆ ನಿಜಸ್ಥಿತಿಯು ಹಾಗೆಯೇ ಇದೆ. ನಕ್ಷತ್ರಗಳನ್ನು ಅಳತೆಮಾಡಲಿಕ್ಕೆ ಅನೇಕರು ಪ್ರಯತ್ನಿ ಸಿರುವರು. ಆದರೆ ಯಾರಿಗೂ ಇನ್ನೂ ಅದು ಚೆನ್ನಾಗಿ ಸಾಧ್ಯವಾಗಿರುವು ದಿಲ್ಲ. ಅವುಗಳ ಬಗ್ಗೆ ನಿಮಗೆ ಕಿಂಚಿತ್ ಕಲ್ಪನೆಯನ್ನು ಕೊಡುವುದಾದರೆ ಹೀಗೆ ಹೇಳಬಹುದು :-ಬೆಳಕು ಒಂದು ನಿಮಿಷಕ್ಕೆ ೧೮೬ ಸಾವಿರ ಮೈಲು ಹೋಗುತ್ತದೆ. ಇಂಧ ಬೆಳಕು ಎಲ್ಲಕ್ಕೂ ತೀರ ಸಮೀಪದಲ್ಲಿದ್ದ ನಕ್ಷತ್ರ ದಿಂದ ಹೊರಟು ನಮಗೆ ಬಂದು ತಲುಪುವುದಕ್ಕೆ ಸುಮಾರು ನಾಲ್ಕು ವರ್ಷ ಗಳು ಹಿಡಿಯುತ್ತವೆ. ಕೆಲಕೆಲವು ನಕ್ಷತ್ರಗಳ ಪ್ರಕಾಶವು ನಮಗೆ ಬಂದು ತಲುಪುವುದಕ್ಕೆ ೧೦ ವರ್ಷ, ೫೦ ವರ್ಷ, ೧೦೦ ವರ್ಷ, ೪೦೦ ವರ್ಷ, ೨ ಸಾವಿರ ವರ್ಷಗಳು ಬೇಕಾಗುತ್ತವಂತೆ. ಎಲ್ಲಕ್ಕೂ ದೂರಿನ ನಕ್ಷತ್ರದಿಂದ ಬರಲಿಕ್ಕೆ ಪ್ರಕಾಶಕ್ಕೆ ೧೪೦,೦೦೦,೦೦೦ (೧೪ ಕೋಟಿ) ವರುಷಗಳು