________________
ಜ್ಯೋತಿಶ್ಯಾಸ್ತ್ರ ಬೇಕಾಗುವವ, ಎಂದ ಬಳಿಕ ಅವು ಎಷ್ಟು ದೂರದಲ್ಲಿರಬೇಕೆಂಬುದನ್ನು ನೀವೇ ಊಹಿಸಿರಿ! ಗಣಿತದಲ್ಲಿರುವ ಸಂಖ್ಯೆಗಳಿಂದ ಅದನ್ನು ಹೇಳುವುದು ಶಕ್ಯವೇ ಇಲ್ಲ. ಗಣಿತದಲ್ಲಿ ಈಗ ಎಲ್ಲಕ್ಕೂ ಹೆಚ್ಚಿನ ಸಂಖ್ಯೆಯೆಂದರೆ ಪರಾರ್ಧ. ಇಂತಹ ೭೦೦ ಪರಾರ್ಧಗಳನ್ನು ಕೂಡಿಸಿದರೆ ಅಥವಾ ಏಳರ ಮುಂದೆ ಇಪ್ಪತ್ತು ಪೂಜೆಗಳನ್ನು ಇಟ್ಟರೆ ನಮ್ಮಿಂದ ಅತ್ಯಂತ ದೂರದಲ್ಲಿರುವ ನಕ್ಷತ್ರದ ಅಂತರವು ಗೊತ್ತಾಗುವುದು. ಎಲ್ಲಕ್ಕೂ ಹತ್ತರಿನ ನಕ್ಷತ್ರವನ್ನು ಹೇಳಬೇಕಾದರೆ ಎರಡರ ಮುಂದೆ ಹದಿಮೂರು ಪೂಜೆಗಳನ್ನಿಡಬೇಕಾಗು ವುದು. ಇವಲ್ಲದೆ ಇನ್ನೂ ಎಷ್ಟೋ ವಿಲಕ್ಷಣವಾದ ಸಂಗತಿಗಳು ಈಗ ನಮಗೆ ಗೊತ್ತಾಗಿವೆ. ಸೂರ್ಯನಮೇಲೆ ಚಂದ್ರನ ಮೇಲಿನಂತೆಯೆ ದೊಡ್ಡ ದೊಡ್ಡ ಕಲೆಗಳು ಕಾಣುತ್ತಿರುವವೆಂದು ನಿಮಗೆ ಹೇಳಿದರೆ ಆಶ್ಚರ್ಯವಾಗಬಹುದಲ್ಲವೆ? - ಹೀಗೆ ಹಳೆಯ ಜ್ಞಾನಕ್ಕೂ ಇಂದಿನ ಹೊಸ ಜ್ಞಾನಕ್ಕೂ ಅಜ ಗಜಾಂತರವಿದೆ. ಈ ಬಗೆಯಾಗಿ ಅತ್ಯದ್ಭುತವಾಗಿ ಬೆಳೆದಿರುವ ಜ್ಞಾನವನ್ನು ನಾವು ಅರಿತುಕೊಳ್ಳಬಾರದೋ? ಆ ತರಹದ ಕುತೂಹಲವು ನಮ್ಮಲ್ಲಿ ಹುಟ್ಟದಿದ್ದರೆ ನಮಗೆ ಮನುಷ್ಯರೆಂದು ಏಕೆ ಎನ್ನ ಬೇಕು ?