________________
ಬೇಕಾದರೆ ಜನರಿಗೆ ಎಷ್ಟುದನ್ನು ಹೇಳಿದಾರು ವರುಷಗಳ ಜ್ಞಾನವು ಈಗ ೪ ನೆಯ ಪ್ರಕರಣ ತಪಶ್ಚರ್ಯ ಹಿಂದಿನ ಪ್ರಕರಣದಲ್ಲಿ ನಾವು ಜ್ಯೋತಿಶ್ಯಾಸ್ತ್ರದ ಜ್ಞಾನವು ಈಗ ಮೂರು ನೂರು ನಾಲ್ಕು ನೂರು ವರುಷಗಳಲ್ಲಿ ಎಷ್ಟು ವಿಲಕ್ಷಣ ವಾಗಿ ಬೆಳೆದಿದೆಯೆಂಬುದನ್ನು ಹೇಳಿದೆವು. ಆದರೆ ಇಷ್ಟು ಪ್ರಗತಿಯಾಗ ಬೇಕಾದರೆ ಜನರಿಗೆ ಎಷ್ಟು ಸ್ವಾರ್ಥತ್ಯಾಗವನ್ನೂ ತಪಶ್ಚರ್ಯವನ್ನೂ ಮಾಡ ಬೇಕಾಯಿತೆಂಬುದನ್ನು ನಾವು ತಿಳಿದುಕೊಳ್ಳುವುದು ಅವಶ್ಯವಿದೆ. ಹಿಂದಿನ ಕಾಲದ ಇತಿಹಾಸವು ನಮಗೆ ಉಪಲಬ್ದವಿರುವುದಿಲ್ಲ. ಆದರೆ ಯಂತ್ರ ಸಾಮಗ್ರಿಗಳು ಇಲ್ಲದ ಆ ಕಾಲದಲ್ಲಿ ಗ್ರಹ ನಕ್ಷತ್ರಾದಿಗಳನ್ನು ಗೊತ್ತು ಹಚ್ಚುವುದಕ್ಕೆ ಎಷ್ಟು ಶ್ರಮವಾಗಿರಬೇಕೆಂಬುದನ್ನು ನಾವು ಸಹಜವಾಗಿ ಊಹಿಸಬಹುದು. ಪ್ರತರನಾದ ಸೂರ್ಯನ ಕಡೆಗೆ ಕ್ಷಣಹೊತ್ತು ಕಣ್ಣು ಪಿಳಿಕಿಸುವುದೂ ಕೂಡ ಅಸಾಧ್ಯ, ತ್ವರಿತಗತಿಯುಳ್ಳ ವಾಹಕಗಳಿಲ್ಲದಿರುವ ಮೂಲಕ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋಗುವುದಕ್ಕೂ ಕಾಲಾವಧಿ ಬೇಕು. ಆಕಾಶದೊಳಗಿನ ಗ್ರಹನಕ್ಷತ್ರಗಳ ಸ್ಥಿತಿಗತಿಗಳಾದರೋ ಕ್ಷಣಕ್ಷಣಕ್ಕೆ ಬದಲಾಗುವಂತಹವು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗ್ರಹಗಳ ಗತಿಯನ್ನೂ ನಕ್ಷತ್ರಗಳ ಇರುವಿಕೆಯನ್ನೂ ಕಂಡುಹಿಡಿಯ ಬೇಕಾದರೆ ಎಷ್ಟು ಶ್ರಮವಾಗಿರಬೇಕು ? ಕಣ್ಣಿಗೆ ನೋಡಲಿಕ್ಕೆ ಪೃಥ್ವಿಯು ಬಯಲು ಪ್ರದೇಶವಾಗಿಯೂ ಅವಾರವಾಗಿಯೂ ಕಾಣುತ್ತದೆ. ಅದು ಬಯಲು ಪ್ರದೇಶವಲ್ಲ, ಕಿತ್ತಳೆಯ ಹಣ್ಣಿನಂತೆ ದುಂಡಗಿರುತ್ತದೆಂಬ, ಸಕೃದ್ದರ್ಶನಕ್ಕೆ ಪ್ರತ್ಯಕ್ಷಕ್ಕೆ ವಿರೋಧವಾಗಿ ತೋರುವ-ಸಿದ್ಧಾಂತವು ಹೊಳೆಯಬೇಕಾದರೆ ಎಷ್ಟು ತಲೆಗಳು ವೆಚ್ಚವಾಗಿರಬೇಕು ? ಪೃಥ್ವಿಯು ಚಿಕ್ಕ ದೊಂದು ಬಯಲು ಪ್ರದೇಶವಾಗಿರದೆ ೩,೩೦೦ ಯೋಜನ ವಿಸ್ತಾರವುಳ್ಳ ದ್ದೆಂಬುದನ್ನು ಆರ್ಯಭಟ್ಟನು ಕಂಡುಹಿಡಿಯಬೇಕಾದರೆ ಆತನ ಬುದ್ದಿ ಸಾಮರ್ಥ್ಯವು ಎಷ್ಟಿರಬೇಕು? ಅಷ್ಟೇಕೆ ? ಆಕಾಶದಲ್ಲಿ ಲಕ್ಷಾವಧಿ ಮೀನು ಗುವ ಪದಾರ್ಥಗಳಿರುತ್ತವೆ. ಅವುಗಳಲ್ಲಿ ೫ ಮಾತ್ರವೇ ಸ್ಥಿರಪಕಾಶವುಳ್ಳ ವಿರುತ್ತವೆ; ಮಿಕ್ಕವೆಲ್ಲವೂ ಚಕಚಕ ಹೊಳೆಯುತ್ತವೆ. ಹೀಗೆ ಹೊಳೆಯುವ