ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಲಕ್ಷಾವಧಿ ಪದಾರ್ಥಗಳಿಂದ ೫ ರಪ್ರಕಾಶವುಳ್ಳ ಗ್ರಹಗಳನ್ನು ಗೊತ್ತು ಹಚ್ಚಬೇಕಾದರೆ ಎಷ್ಟು ಜನರು ಕಷ್ಟಬಟ್ಟಿರಬೇಕು ? ನೂರಾರು ಜನರು ಒಂದೇ ಸವನೆ ವರ್ಷಾನುವರ್ಷ ಆಕಾಶದ ಕಡೆಗೆ ದೃಷ್ಟಿಯಿಟ್ಟು ಕಣ್ಣು ಕಳೆದುಕೊಂಡಿರಲಿಕ್ಕೆ ಸಾಕು. ಸಾರಾಂಶ, ಇಂದು ಆ ಸಂಗತಿಗಳು ಸಾಮಾನ್ಯರಿಗೂ ಕೂಡ ತಿಳಿಯುವಂತಹವಾಗಿದ್ದರೂ ಅವು ಶ್ರಮಪಡದೆ ಮಾನವ ವರ್ಗಕ್ಕೆ ಸಿಕ್ಕಿಲ್ಲವೆಂಬುದನ್ನು ನಾವು ಮರೆಯಬಾರದು. - ಮನುಷ್ಯನ ಜೀವನದಲ್ಲಿ ಏರಿಳಿತಗಳು ಇರುವಂತೆ ರಾಷ್ಟ್ರದ ಜೀವನ ದಲ್ಲಿಯೂ ಏರಿಳಿತಗಳು ಇರುತ್ತವೆ. ಕೆಲವೊಮ್ಮೆ ಧಾರ್ಮಿಕ ಮೂಢ ಭಾವನೆಗಳ ಮಡುವಿನಲ್ಲಿ ಸಿಕ್ಕುವುದರಿಂದ, ಕೆಲವೊಮ್ಮೆ ಸರದಾಸ್ಯದ ಭಾರ ದಿಂದ ಜಿಬ್ಬಿಯಾಗುವ ಮೂಲಕ ಅನೇಕ ವಿಷಯಗಳಲ್ಲಿ ಕೆಲವು ಸಾರಿ ಪ್ರಗತಿಯು ನಿಂತುಹೋಗುತ್ತದೆ. ಏಕೆಂದರೆ ಜ್ಯೋತಿಶ್ಯಾಸ್ತ್ರ, ಸಂಗೀತ ಶಾಸ್ತ್ರ-ಇವೇ ಮುಂತಾದ ಶಾಸ್ತ್ರಗಳ ಪ್ರಗತಿಗೆ ಶಾಂತ ವಾತಾವರಣದ ಆವಶ್ಯಕತೆಯಿರುತ್ತದೆ. ಅದರ ಅಭಾವದಲ್ಲಿ ಇಂತಹ ವಿಷಯಗಳು ಎಂದೂ ಬೆಳೆಯಲಾರವು. ಹಿಂದುಸ್ಥಾನದಲ್ಲಿ ಈ ಶಾಸ್ತ್ರದಲ್ಲಿ ಏಳೆಂಟನೆಯ ಶತಮಾನದ ತರುವಾಯ ಬಹಳಮಟ್ಟಿಗೆ ಬೆಳೆವಣಿಗೆಯಾಗದಿರುವುದಕ್ಕೆ ಈ ತರಹದ ಶಾಂತ ವಾತಾವರಣದ ಅಭಾವವೂ ಒಂದು ಕಾರಣ. ಯುರೋಪಪಿಂಡ ದಲ್ಲಿ ಕ್ರಿಸ್ತ ಶಕದ ಎರಡನೆಯ ಶತಮಾನದಿಂದ ಈ ಶಾಸ್ತ್ರದ ಬೆಳೆವಣಿಗೆಯ ನಿಂತುಹೋಗಿತ್ತು. ಕ್ರಿಸ್ತಶಕದ ಪ್ರಾರಂಭದ ಸುಮಾರಕ್ಕೆ ಗ್ರೀಕ ಜನರು ಗೊತ್ತುಪಡಿಸಿದ ಸಿದ್ದಾಂತದ ಮುಂದೆ ಯುರೋಪಖಂಡವು ಹೆಚ್ಚಿಗೆ ಹೆಜ್ಜೆಯನ್ನಿಡಲಿಲ್ಲ. ೧೫-೧೬ನೆಯ ಶತಮಾನದ ಸುಮಾರಕ್ಕೆ ಯುರೋಪ ಖಂಡದಲ್ಲಿ ಹೊಸ ಜಾಗ್ರತಿಯು ಉಂಟಾದಾಗಿನಿಂದ ಈ ಶಾಸ್ತ್ರವೂ ಪುನಃ ಬೆಳೆಯಹತ್ತಿದೆ. ನಮ್ಮಲ್ಲಿ ೮-೯ನೆಯ ಶತಮಾನದಿಂದ ಈಚೆಗೆ ಜ್ಯೋತಿಶ್ಯಾಸ್ತ್ರದ ಜ್ಞಾನವು ಬಲುಮಟ್ಟಿಗೆ ಬೆಳೆಯದಿದ್ದರೂ ಭಾಸ್ಕರಾ ಚಾರ್ಯರೇ ಮೊದಲಾದ ಅನೇಕ ಜ್ಯೋತಿಶಾಸ್ತ್ರ ಪಂಡಿತರು ಆ ಶಾಸ್ತ್ರ ವನ್ನು ಜೀವದಿಂದ ಇಟ್ಟಿದ್ದರೆಂಬುದೊಂದು ನಮ್ಮ ವಿಶೇಷ. ಒಟ್ಟಿಗೆ ಹೇಳುವುದೇನೆಂದರೆ, ಹಿಂದುಸ್ತಾನವು ಎಚ್ಚತ್ತಾಗ ಎಂದರೆ ೧೫-೧೬ನೆಯ ಶತಮಾನದವರೆಗೆ ಯುರೋಪಖಂಡವು ಮಲಗಿಕೊಂಡಿತ್ತು. ಈಗ ಮೂರು