ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಪಶ್ಚರ್ಯ ನಾಲ್ಕುನೂರು ವರುಷಗಳಿಂದ ಅದು ಎಚ್ಚತ್ತಿರುವುದು ; ಮತ್ತು ಅದು ಎಚ್ಚತ ಕೂಡಲೆ ಒಲು ವೇಗದಿಂದ ಓಡುತ್ತಿರುವುದು. ಆದಕಾರಣ ಬೇಗನೆ ಎಚ್ಚತ್ತು ಯುರೋಪಖಂಡವನ್ನು ಕೂಡಿಕೊಳ್ಳಬೇಕು. ಈ ಶಾಸ್ತ್ರವನ್ನು ವಿಕಾಸಗೊಳಿಸಬೇಕು. ಇರಲಿ. ಈ ಮುನ್ನೂರು ನಾಲ್ಕೂರು ವರುಷಗಳಲ್ಲಿ ಜ್ಯೋತಿಶ್ಯಾಸ್ತ್ರದ ಬಗ್ಗೆ ಯುರೋಪಖಂಡವು ಎಷ್ಟು ಕಡುತರವಾದ ತಪಶ್ಚರ್ಯವನ್ನು ಮಾಡಿರುವು ದೆಂಬುದನ್ನು ಇಲ್ಲಿ ಹೇಳುವೆವು. ಹಿಂದುಸ್ಥಾನವು ಮಾಡಿದ ತಪಶ್ಚರ್ಯದ ವಿವರಗಳು ನಮಗೆ ಗೊತ್ತಿರದಿದ್ದರೂ ನಮ್ಮ ರಾಷ್ಟ್ರಕ್ಕೆ ಭೂಷಣವಾಗು ವಂತಹ ಒಂದು ಸಂಗತಿಯನ್ನು ಮಾತ್ರ ನಾವು ಇಲ್ಲಿ ಬರೆಯದೆ ಇರಲಾ ರೆವು. ಅದೇನೆಂದರೆ ನಮ್ಮ ಜನರ ಉದಾರಬುದ್ದಿಯು. ನಮ್ಮ ರಾಷ್ಟ್ರವು ಅತ್ಯಂತ ಪರಮತಸಹಿಷ್ಣುತೆಯ ರಾಷ್ಟ್ರವು ; ಜ್ಞಾನಪ್ರಿಯ ರಾಷ್ಟ್ರವ. ಆದುದರಿಂದ ಹೊಸ ಶೋಧವನ್ನು ಮಾಡಿದುದಕ್ಕಾಗಲಿ ಭಿನ್ನಾಭಿಪ್ರಾಯ ವನ್ನು ತಾಳಿದುದಕ್ಕಾಗಲಿ ಜನರು ಹಿಂಸೆಗೆ ಈಡುಮಾಡಲ್ಪಡಲಿಲ್ಲ. ಇದಕ್ಕೆ ವರಾಹಮಿಹಿರನು (ಸುಮಾರು ಕ್ರಿ. ಶ. ೫೦೦) ತನ್ನ ಬೃಹತ್ಸಂಹಿತೆಯಲ್ಲಿ ಕೊಟ್ಟಿರುವ ಗರ್ಗಮುನಿಗಳ ಈ ಶ್ಲೋಕವೇ ಉತ್ಕೃಷ್ಟ ಸಾಕ್ಷಿಯಾಗಿದೆ: ಮೇ೦ಛಾಹಿ ಯವನಾಸ್ರೇಷು ಸಮ್ಯಕ್ ಶಾಸ್ತಮಿದಂ ಸ್ಥಿತಂ || ಋಷಿವನ್ ತೇsಪಿ ಪೂಜ್ಯಂತ ಕಿಂಪುರ್ನವವಿದ್ದಿಜಃ | ೧೫ || “ ಯವನರು ಮೈ೦ಛರಾದರೂ ಅವರಲ್ಲಿ ಈ ಶಾಸ್ತ್ರವು ಒಳ್ಳೆ ಊರ್ಜಿತ ಸ್ಪತಿಯಲ್ಲಿರುವುದು. ಆದುದರಿಂದ ಅವರೂ ಋಷಿಗಳಂತೆ ಪೂಜ್ಯರೇ.” ಎಂಬುದಾಗಿ ಆಗಿನಕಾಲದ ಗ್ರೀಕಜನರನ್ನು ಕುರಿತು ಉದ್ಘಾರ ತೆಗೆದಿರು ವನು. ಆದರೆ ಯುರೋಪಖಂಡದ ಸ್ಪಿತಿಯು ಇದಕ್ಕೆ ವಿರುದ್ದವಾಗಿದೆ. ಜ್ಯೋತಿಶ್ಯಾಸ್ತ್ರದಲ್ಲಿ ಸುಧಾರಣೆಯನ್ನು ಮಾಡಲು ಯತ್ನಿಸಿದುದಕ್ಕಾಗಿ ಕೆಲವರು ಜೀವಕ್ಕೆ ಎರವಾದರು. ಕೆಲವರ ಜೀವಗಳು ಗಂಡಾಂತರಕ್ಕೊಳ ಗಾದವು ; ಕೆಲವರು ಹದ್ದು ಪಾರು ಮಾಡಲ್ಪಟ್ಟರು ; ಕೆಲವರಿಗೆ ಕಾರಾಗೃಹ ವಾಸವನ್ನನುಭವಿಸಬೇಕಾಯಿತು. ಈ ಪ್ರಕರಣದಲ್ಲಿ ಅಂಧವರ ಇತಿಹಾಸ ವನ್ನು ಕೊಡುವೆವು.