ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨L ಜ್ಯೋತಿಶ್ಯಾಸ್ತ್ರ ಮಣಿಗಳಂತೆ ಕಾಣುವವು. ಮತ್ತು ಇಡಿಯ ಮುಗಿಲೇ ದಿನಕ್ಕೊಮ್ಮೆ ತಿರುಗಿದಂತೆ ಕಾಣುವುದು. ಆದರೆ ಸೂರ್ಯ ಚಂದ್ರ ಗ್ರಹಗಳ ಮಾತು ಬೇರೆ. ಚಂದ್ರ ನಂತೂ ದಿನದಿನಕ್ಕೆ ತಡವಾಗಿ ಉದಯಿಸುವುದನ್ನು ಎಲ್ಲರೂ ನೋಡುವರು. ಮೂಡಿದ ಮೇಲೆ ಮುಳುಗುವುದೇನೋ ನಿಜ. ಆದರೆ ಮಡುವಾಗ ಯಾವುದೊಂದು ನಕ್ಷತ್ರದ ಹತ್ತಿರ ಇದ್ದರೆ, ಮುಳುಗುವಷ್ಟರಲ್ಲಿ ಅವನು ಆ ನಕ್ಷತ್ರದಿಂದ ಸ್ವಲ್ಪ ಸರಿದು ಮತ್ತೊಂದರ ಹತ್ತಿರ ಬಂದಿರುವನು. ಹೀಗೆಯೆ ದಿನಾಲು ನಾವು ಚಂದ್ರನನ್ನು ನಿರೀಕ್ಷಿಸುತ್ತ ಹೋದರೆ ೨೭ ದಿವಸ ಗಳಲ್ಲಿ ಅವನು ನಭೋಮಂಡಲದಲ್ಲಿ ಒಂದು ಮಾರ್ಗವಾಗಿ ಗಮಿಸಿ ಮತ್ತೆ ಮೊದಲಿನ ನಕ್ಷತ್ರದ ಹತ್ತಿರ ಬಂದಂತೆ ಕಾಣುವನು. ಬೇಕಾದಾಗ ನೋಡಿದರೂ ಚಂದ್ರನು ಇದೇ ಮಾರ್ಗವನ್ನು ಕ್ರಮಿಸುವಂತೆ ಕಾಣು ವನು. ಇದೇ ಅವಧಿಯಲ್ಲಿ ಕ್ರಮಿಸುವನು. ಬುಧ-ಶುಕ್ರ ಮೊದಲಾದ ಗ್ರಹಗಳೂ ಹೀಗೆಯೆ ವರ್ತಿಸುವವು. ದಿನಾಲು ಮಡುವವು ಮುಳುಗುವವು. ಆದರೆ ಈ ಹೊತ್ತು ಒಂದು ನಕ್ಷತ್ರದ ಹತ್ತಿರ ಇದ್ದರೆ, ನಾಳೆ ಇನ್ನೊಂದರ ಹತ್ತಿರ ಇರುವವು. ಹೀಗೆ ಬೇರೆ ಬೇರೆ ಅವಧಿಗಳಲ್ಲಿ ಹೆಚ್ಚು ಕಡಿಮೆಯಾಗಿ ಚಂದ್ರನ ಮಾರ್ಗವನ್ನೇ ಅನುಸರಿಸುವವು. ನಾವು ಉಗಿಬಂಡಿಯಲ್ಲಿ ಪ್ರವಾಸ ಮಾಡುವಾಗ ಕುಳಿತಿರುವಲ್ಲಿಯೆ ಕುಳಿತಿರುವೆವು. ಆದರೆ ಚಹಾ-ಕಾಫಿಗಳನ್ನು ಮಾರು ವವರೂ, ತಿಕೀಟುಗಳನ್ನು ತಪಾಸಿಸುವವರೂ, ಭಿಕ್ಷುಕರೂ ಡಬ್ಬಿಯಿಂದ ಡಬ್ಬಿಗೆ ಓಡಾಡುತ್ತಿರುವರು. ನಕ್ಷತ್ರಗಳು ಹೀಗೆ ಕುಳಿತಲ್ಲಿಯೇ ಕುಳಿತ ಪಾಂಧಸ್ಟರಂತಿರುವವು. ಗ್ರಹಗಳು ಡಬ್ಬಿಯಿಂದ ಡಬ್ಬಿಗೆ ಓಡಾಡುವವರ ಹಾಗೆ ಓಡಾಡಿದಂತೆ ಕಾಣುವುವು. ಸೂರ್ಯನ ಸ್ಥಿತಿಯೂ ಹೀಗೆಯೆ. ಹಗಲಿನಲ್ಲಿ ಯಾವ ನಕ್ಷತ್ರವೂ ಕಾಣುವುದಿಲ್ಲವಾದುದರಿಂದ ಸೂರ್ಯನು ಯಾವ ನಕ್ಷತ್ರದ ಹತ್ತಿರವಿರುವನೆಂಬುದನ್ನು ನಿರ್ಣಯಿಸುವುದು ಸ್ವಲ್ಪ ಕಠಿನವಾಗುತ್ತದೆ. ಆದರೆ ಸೂರ್ಯನು ಮುಳುಗಿದ ಕೂಡಲೆ ಮುಳುಗುವ ನಕ್ಷತ್ರಗಳನ್ನಾಗಲಿ, ಸೂರ್ಯೋದಯಕ್ಕಿಂತ ಸ್ವಲ್ಪ ಹೊತ್ತು ಮುಂಚೆ