ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬ ಆಕಾಶರಾಜ ಪಟ್ಟಣ ಅಥವಾ ಖಗೋಲ ಉದಯಿಸುವ ನಕ್ಷತ್ರಗಳನ್ನಾಗಲಿ ನೋಡಿ ಸೂರ್ಯನ ಸ್ಥಾನವನ್ನು ನಿರ್ಣಯಿಸಬಹುದು. ಈ ಗತಿಗಳೆಲ್ಲ ನಿಜವಾಗಿದ್ದರೆ, ಆಕಾಶದಲ್ಲಿ ಎಷ್ಟು ಪ್ರಕಾರದ ಗತಿಗಳಿರ ಬೇಕಾಗುವುದು? ಅಸಂಖ್ಯ ತಾರೆಗಳೆಲ್ಲ ಒಂದೇ ಅವಧಿಯಲ್ಲಿ ಭೂಮಿಯ ಸುತ್ತಲೂ ತಿರುಗಬೇಕು. ಇವುಗಳೆಲ್ಲ ಒಂದು ಕೊಪ್ಪರಿಗೆಯಂಧ ಖಗೋ ಲದಮೇಲೆ ನಡಿಸಿದ್ದರೆ, ಈ ಕೊಪ್ಪರಿಗೆಯೇ ತಿರುಗುತ್ತಿರಬೇಕು. ಹೀಗಿರದೆ ಇವು ಬೇರೆ ಬೇರೆ ಅಂತರಗಳ ಮೇಲಿದ್ದರೆ ಹೆಚ್ಚು ದೂರಿನವು ಹೆಚ್ಚು ವೇಗ ದಿಂದ ತಿರುಗಬೇಕು. ಸೂರ್ಯ ಚಂದ್ರರೂ ಗ್ರಹಗಳೂ ಇದರಂತೆ ವರ್ತಿಸು ವುದಲ್ಲದೆ, ನಕ್ಷತ್ರಗಳೊಳಗಿಂದಲೂ ತಮ್ಮ ಸ್ನಾನವನ್ನು ಬದಲಿಸುತ್ತಿರ ಬೇಕು. ಇಷ್ಟೆಲ್ಲ ಏತರ ಸಲುವಾಗಿ? ಚಿಕ್ಕದೊಂದು ಭೂಮಿಯ ಸಲುವಾಗಿ, ಸಣ್ಣ ಮಕ್ಕಳಿಗೆ ಮನೆಯ ಶಹರವೂ ಎಲ್ಲವೂ ತಮ್ಮ ಸಲುವಾಗಿ ಕಟ್ಟಿದಂತೆ ಎನಿಸುತ್ತದೆ. ಆದರೆ ದೊಡ್ಡವರಾಗಲು, ಅವರಿಗೆ ತಮ್ಮ ನಿಜವಾದ ಸ್ಥಾನವು ತಿಳಿಯುವುದು. ೨೦೦೦ ವರುಷಗಳ ಹಿಂದಿನ ಜನರಿಗೆ ನಿಜವಾಗಿಯೆ ವಿಶ್ವವೆಲ್ಲವೂ ಭೂಮಿಯ ಸುತ್ತಲು ತಿರುಗುವು ದೆಂದು ಎನಿಸಿತು. ಈಗ ಅದು ಬದಲಾಗಿದೆ. ನಾವೊಂದು ವಿಶ್ವದೊಳಗಿನ ಕಣವೆಂಬ ಅರಿವು ನಮಗಾಗಿರುವುದು. ಈ ಗತಿಗಳೆಲ್ಲ ಕೇವಲ ಭಾಸವಾಗಿದ್ದರೆ ನಿಜಸ್ಥಿತಿಯು ಏನಿರಬಹುದು ? ಗಿಡ ಮನೆಗಳು ಸ್ಥಿರವಿದ್ದಂತೆ ನಕ್ಷತ್ರಗಳು ಸ್ಪಿರವಿರುವವು. ಅವು ನಿಜವಾಗಿ ನಮ್ಮಿಂದ ಅತಿಶಯ ದೂರದಲ್ಲಿ ಬೇರೆ ಬೇರೆ ಅಂತರದಲ್ಲಿರುವವು. ದೂರದ ಗಿಡಗಳು ನಮಗೆ ಸಣ್ಣವಾಗಿ ಕಾಣುವವು. ಹತ್ತರದವು ದೊಡ್ಡವಾಗಿ ಕಾಣುವವು. ಅದರಿಂದಲೆ ನಾವು ಇವು ದೂರದವು, ಇವು ಹತ್ತರದವು ಎಂಬುದನ್ನು ಗೊತ್ತುಮಾಡುವೆವು. ಆದರೆ ನಕ್ಷತ್ರಗಳ ಮಾತು ಬೇರೆ; ಅವೆಲ್ಲ ನಮಗೆ ಚಿಕ್ಕೆಗಳಂತೆಯೆ ಕಾಣುವವು. ಇವುಗಳಲ್ಲಿ ಕೆಲವು ಬಹಳ ಹೊಳೆಯು ವವು ; ಕೆಲವು ಕಡಿಮೆ ಹೊಳೆಯುವವೇನೋ ನಿಜ. ಆದರೆ ಸಣ್ಣವಾಗಿ ಕಾಣುವವು. ನಿಜವಾಗಿ ಸಣ್ಣವಾಗಿರುವವೋ ದೂರಿರುವುದರಿಂದ ಹೀಗೆ ಸಣ್ಣವಾಗಿ ಕಾಣುವವೋ ಎಂಬುದನ್ನು ಹೇಳಲಿಕ್ಕೆ ಬರುವಂತಿಲ್ಲ. ಸಕೃದ್ದರ್ಶನಕ್ಕೆ ಇವೆಲ್ಲ ಒಂದೇ ಅಂತರದ ಮೇಲೆ ಇರುವಂತೆಯೆ ತೋರು వవు ను నిజవ్యా వ్పాంబుదపులి గా