________________
ಜ್ಯೋತಿಶ್ಯಾಸ್ತ್ರ ಇವೆ. ಅದರಿಂದಲೇ ಅವೆಲ್ಲ ಮುಗಿಲಿನ ಒಳಮಗ್ಗಲಿಗೆ ಹತ್ತಿರುವಂತೆ ನಮಗೆ ತೋರುವವು. - ವಿಶ್ವದಲ್ಲಿ ನಕ್ಷತ್ರಗಳು ಒಣಗಹಾಕಿದ ಧಾನ್ಯದ ಕಾಳುಗಳಂತೆ ಪಸರಿ ಸಿರುವವು; ಅಧವಾ ಹೂಗಳ ಹಾಸಿಗೆಯಂತಿರುವವು. ಇಂಧ ಹಾಸಿಗೆಯ ನಡುಹೊಟ್ಟೆಯಲ್ಲಿಯ ಹೂವಿನಂತೆ ನಮ್ಮ ಸೂರ್ಯಮಾಲೆ ಇರುವುದು. ಮೇಲೆ ಕೆಳಗೆ ನೋಡಿದರೆ, ನಮಗೆ ಹೂಗಳು ಅಂಗಲಾಗಿ ತೋರುವವು. ಅದೇ ಅತ್ತಿತ್ತ ನೋಡಿದರೆ ದಟ್ಟವಾಗಿ ಒಂದಕ್ಕೊಂದು ಹತ್ತಿದಂತೆ ತೋರು ವವು. ವಿಶ್ವದಲ್ಲಿ ನಮಗೆ ಕಾಣುವ ನಕ್ಷತ್ರಗಳು ಗಾಲಿಯ ಆಕಾರದ ಸ್ಥಳ ವನ್ನು ವ್ಯಾಪಿಸಿರುವವು. ಈ ನಕ್ಷತ್ರಗಳ ಆಕಾರಗಳು ಬಹಳ ದೊಡ್ಡವು. ಗಾಲಿಯ ಆಕಾರದ ಸ್ಥಳದಲ್ಲಿ ಇವೆಲ್ಲ ನಕ್ಷತ್ರಗಳು ಸಮನಾಗಿ ಹರಡಿರುವವು. ಎರಡು ನಕ್ಷತ್ರಗಳ ಅಂತರವು, ಅವುಗಳ ಆಕಾರದ ಮಾನದಿಂದ ಬಲು ದೊಡ್ಡದು. ಎಂದರೆ ನಕ್ಷತ್ರಗಳು ಸರಾಸರಿಯಾಗಿ ಒಂದು ಮೊಳ ವ್ಯಾಸ ವುಳ್ಳ ಗೋಲಗಳೆಂದು ತಿಳಿದರೆ, ಅವುಗಳಲ್ಲಿ ಎರಡು ನಕ್ಷತ್ರಗಳ ನಡುವಿನ ಅಂತರವು ೫೦ ಸಾವಿರ ಮೈಲುಗಳು. ಒಂದು ದೊಡ್ಡ ಬಯಲಿನಲ್ಲಿ ೫೦ ಸಾವಿರ ಮೈಲಿಗೊಂದರಂತೆ ಒಂದೊಂದು ಕಲ್ಲಿನ ಗುಂಡನ್ನಿ ಟ್ಟರೆ, ಆ ಬಯಲಿಗೆ ತೆರವೆನ್ನ ಬಹುದೊ? ತುಂಬಿದೆಯೆನ್ನ ಬಹುದೊ? ಅದರಂತೆ ವಿಶ್ವ ದಲ್ಲಿ ಇಷ್ಟು ನಕ್ಷತ್ರಗಳು ಕಂಡರೂ ಅದು ತೆರವಾದುದೆಂದೇ ಹೇಳ ಬೇಕಾಗುವುದು. - ಸಾಧಾರಣವಾಗಿ ಈ ಗಾಲಿಯ ಮಧ್ಯಭಾಗದಲ್ಲಿ ಸೂರ್ಯನಿರುವನು. ಅವನ ಹತ್ತಿರವೇ, ಎಂದರೆ ಮೇಲಿನ ಪ್ರಮಾಣದಿಂದ ಸೂರ್ಯನಿಂದ ಎಂಬತ್ತು ಮೊಳದಮೇಲೆ ಭೂಮಿಯು ಇರುವುದು. ಗಾಲಿಯ ದಿಪ್ಪವು ಅದರ ವ್ಯಾಸದ ಮಾನದಿಂದ ತೀರ ಸಣ್ಣದಿರುವುದು. ಭೂಮಿಯ ಮೇಲಿಂದ ಗಾಲಿಯ ಅಂಚಿನ ಕಡೆಗೆ ನೋಡಿದರೆ ಕಣ್ಣು ಹರಿಯುವವರೆಗೆ ತಾರೆಗಳು ಕಾಣುವವು. ಒಂದೇ ದಿಕ್ಕಿನಲ್ಲಿಯ ತಾರೆಗಳು ಒಂದರ ಮೇಲೊ೦ದು ಇದ್ದಂತೆ ಕಾಣುವವು. ಆದುದರಿಂದ ಅಂಚಿನ ಕಡೆಗೆ ನೋಡಿದರೆ ತೀರ ಹತ್ತರದವಷ್ಟೆ ಬಿಡಿಬಿಡಿಯಾಗಿ ಕಾಣುವವು. ದೂರಿನವು ಒಂದರೊಳ ಗೊಂದು ಕೂಡಿಕೊಂಡಂತೆ ಕಾಣುವವು, ಆಕಾಶಗಂಗೆಯೆಂದು ಕರೆಯಲ್ಪಟ್ಟ