________________
ಆಕಾಶರಾಜ ಪಟ್ಟಣ ಅಥವಾ ಖಗೋಳ ಆಕಾಶದ ಭಾಗದಲ್ಲಿ ನಕ್ಷತ್ರಗಳು ಮಂಜಿನಂತೆ ಕಾಣುವುದಕ್ಕೂ ಇದೆ ಕಾರಣ. ಇನ್ನು ಗಾಲಿಯ ಮೇಲ್ಮಯ ಮಧ್ಯಬಿಂದುವಿನ ಕಡೆಗೆ ಸ್ವಲ್ಪ ನಕ್ಷತ್ರಗಳು ಕಾಣುವವು, ಮತ್ತು ದೂರ ದೂರವಾಗಿಯೂ ಕಾಣುವವು. ಆಕಾದಲ್ಲಿಯ ನಕ್ಷತ್ರಗಳ ಬಹುಭಾಗವು ಹೀಗೆ ಆಕಾಶಗಂಗೆಯಲ್ಲಿಯೂ ಅದರ ಸವಿಾಪಕ್ಕೂ ಕಾಣುವವು. ಆಕಾಶಗಂಗೆಯಿಂದ ದೂರ ದೂರ ಹೋದಂತೆ ನಕ್ಷತ್ರಗಳ ಸಂಖ್ಯೆ ಕಡಿಮೆಯಾಗುವುದು. ಭೂಮಿಗೆ ದೈನಂದಿನ ಎಂದರೆ ಪ್ರತಿದಿನದ ಗತಿಯೊಂದೇ ಇದ್ದರೆ, ಎಲ್ಲ ನಕ್ಷತ್ರಗಳೂ ಸೂರ್ಯ ಚಂದ್ರರೂ ಗ್ರಹಗಳೂ ಮೂಡಿ ಮುಳುಗಿದಂತೆ ಮಾತ್ರ ಕಾಣುತ್ತಿದ್ದರು. ಆದರೆ ಭೂಮಿಯು ಸೂರ್ಯನ ಸುತ್ತಲು ವರ್ಷ ಕ್ಕೊಮ್ಮೆ ತಿರುಗುವುದು ; ಎಂದರೆ ವಿಶ್ವದಲ್ಲಿ ೧೮ ಕೋಟಿ ಮೈಲು ವ್ಯಾಸವುಳ್ಳ ವರ್ತುಲದಲ್ಲಿ ಚಲಿಸುವುದು. ಈ ೧೮ ಕೋಟಿ ಮೈಲುಗಳು ಸಹ ನಕ್ಷತ್ರಗಳ ಅಂತರದ ಮಾನದಿಂದ ಏನೂ ಅಲ್ಲ. ಆದುದರಿಂದ ಸೃದ್ಧಿಯು ತನ್ನ ಮಾರ್ಗದ ಯಾವ ಭಾಗದಲ್ಲಿದ್ದರೂ ನಕ್ಷತ್ರಗಳ ಸ್ಥಾನದಲ್ಲಿ ಕಾಣು ವಷ್ಟು ಅದಲು ಬದಲು ಆಗುವುದಿಲ್ಲ. ಅವುಗಳ ಪರಸ್ಪರ ಸ್ನಾನಗಳು ಎಲ್ಲ ಋತುಗಳಲ್ಲಿಯೂ ಇದ್ದಂತೆಯೇ ಇರುತ್ತವೆ. ಕುದುರೆ ಮುಖದಂತೆ ಕಾಣುವ ನಕ್ಷತ್ರ ಪುಂಜವು ಯಾವಾಗಲು ಕುದುರೆ ಮುಖದಂತೆಯೇ ಕಾಣು ವುದು. ಮೃಗಪುಂಜದ ಆಕಾರವೂ ಹಾಗೆಯೆ ಉಳಿಯುವುದು. ಆದರೆ ಸೂರ್ಯ ಚಂದ್ರ ಗ್ರಹಗಳ ಮಾತು ಹಾಗಲ್ಲ. ಸೂರ್ಯನೆಂದು ಮೂರ್ತಿಯೆಂದೂ ಭೂಮಿಯು ಅವನ ಸುತ್ತಲು ತಿರುಗುತ್ತಿರುವ ಭಕ್ತ ನೆಂದೂ ತಿಳಿದರೆ ಒಮ್ಮೊಮ್ಮೆ ಸೂರ್ಯನು ಅವನ ಬಲಕ್ಕೆ ಬಂದರೆ, ಒಮ್ಮೆ ಎಡಕ್ಕೆ ಬರುವನು. ಒಮ್ಮೆ ಗುಡಿಯ ಮಹಾದ್ವಾರಕ್ಕೂ ಭಕ್ತನಿಗೂ ನಡುವೆ ಆಗುವನು ; ಒಮ್ಮೆ ಗೋಮುಖಕ್ಕೂ ಭಕ್ತನಿಗೂ ನಡುವೆ ಆಗುವನು. ಹೀಗೆಯೆ ಸೂರ್ಯನ ಸುತ್ತಲು ಭೂಮಿಯು ತಿರುಗು ತಿರುವುದರಿಂದ ಒಮ್ಮೊಮ್ಮೆ ಸೂರ್ಯನು ನಮಗೂ ಅಶ್ವಿನೀ ನಕ್ಷತ್ರಗಳ ಗುಂಪಿಗೂ ನಡುವೆ ಬರುವನು. ಆಗ ನಾವು ಸೂರ್ಯನು ಅಶ್ವಿನಿಯಲ್ಲಿ ಇರುವನೆಂದು ಎನ್ನು ವೆವು. ಮುಂದೆ ನಮಗೂ ಭರಣಿಗೂ ನಡುವೆ ಆಗಲು ಸೂರ್ಯನು ಭರಣಿಗೆ ಹೋದನೆನ್ನು ವೆವು. ಇದರಂತೆ ಸೂರ್ಯನು ಅಶ್ವಿನಿ