________________
ಜ್ಯೋತಿಶ್ಯಾಸ್ತ್ರ ಭರಣಿ ಮುಂತಾದವುಗಳೊಳಗಿಂದ ಹಾಯ್ಕಂತೆ ಕಾಣಿಸಿ ಒಂದು ವರುಷದ ಮೇಲೆ ಪುನಃ ಮೊದಲಿದ್ದಲ್ಲಿಗೆ ಬರುವನು. ಅವನು ಹೀಗೆ ಚಲಿಸುವ ಮಾರ್ಗಕ್ಕೆ ಕ್ರಾಂತಿವೃತ್ತ (ಅಧವಾ ಸೂರ್ಯನ ರಥಬೀದಿ) ಎನ್ನುವರು. ಚಂದ್ರನು ಮಾತ್ರ ನಿಜವಾಗಿಯೆ ಭೂಮಿಯ ಸುತ್ತಲೂ ತಿರುಗು ವನು. ಆದುದರಿಂದ ಆಕಾಶದಲ್ಲಿಯೂ ಹೀಗೆ ತಿರುಗಿದಂತೆ ಕಾಣುವನು. ಅವನು ಹೆಚ್ಚು ಕಡಿಮೆ ಸೂರ್ಯನು ಚಲಿಸುವ ಕ್ರಾಂತಿವೃತ್ಯವನ್ನೇ ಅನುಸರಿಸುವನು. ಆದರೆ ಕೆಲವೊಮ್ಮೆ ಕ್ರಾಂತಿವೃತ್ತದಿಂದ ಸ್ವಲ್ಪ ದೂರದ ಇರುವನು. ಅವನ ಮಾರ್ಗಕ್ಕೆ ಚಂದ್ರನ ಬೀದಿಯೆನ್ನ ಬಹುದು. ಸೂರ್ಯನ ಬೀದಿಯ ಚಂದ್ರನ ಬೀದಿಯ ಒಂದನ್ನೊಂದು ಛೇದಿಸುವುದರಿಂದ ಎರಡು ಕಡೆಗೆ ಕೂಟಗಳುಂಟಾಗಿರುವವು. ಆ ಎರಡು ಕಡೆಯ ಬಿಂದುಗಳಿಗೆ ರಾಹು, ಕೇತು ಎನ್ನುವರು. ಚಂದ್ರನು ತನ್ನ ಬೀದಿಯನ್ನು ೨೭ ದಿವಸಗಳಿ ಗೊಮ್ಮೆ ಚಲಿಸುವನು. ಈ ಹೊತ್ತು ಅಶ್ವಿನಿಯಲ್ಲಿದ್ದರೆ ೨೭ ದಿವಸಗಳ ನಂತರ ಅಶ್ವಿನಿಯಲ್ಲಿಯೇ ಇರುವನು. ಆದರೆ ಈ ಹೊತ್ತು ಹುಣ್ಣಿವೆಯಿದ್ದರೆ, ೨೭ ದಿವಸಗಳ ನಂತರ ಹುಣ್ಣಿವೆಗೆ ಇನ್ನು ಸ್ವಲ್ಪ ಅವಕಾಶವಿರುವುದು. ಏಕೆಂದರೆ ಇದೇ ಅವಧಿಯಲ್ಲಿ ಭೂಮಿಯ ಸ್ವಲ್ಪ ಮುಂದೆ ಹೋಗಿರುವುದು. ಆದುದರಿಂದ ಮೊದಲಿನಂತೆ ಆ ದಿವಸ ಎಂದರೆ ೨೭ನೆಯ ದಿವಸವೇ ಸೂರ್ಯ ಚಂದ್ರರ ನಡುವೆ ಭೂಮಿಯು ಬರುವುದಿಲ್ಲ. ಹೀಗಾಗಲಿಕ್ಕೆ ಇನ್ನೂ ೨H ದಿವಸಗಳು ಹಿಡಿಯುವವು. ಆದುದರಿಂದಲೆ ಹುಣ್ಣಿವೆಯಿಂದ ಹುಣ್ಣಿವೆಯ ವರೆಗೆ ೨೯ | ದಿವಸಗಳಾಗುವವು. ಸೂರ್ಯಮಾಲೆಯ ಉಳಿದ ಎಲ್ಲ ಗ್ರಹಗಳು, ಭೂಮಿಯಂತೆಯೆ ತಮ್ಮ ಸುತ್ತಲೂ ತಿರುಗುತ್ತ, ಸೂರ್ಯನ ಸುತ್ತಲು ಪ್ರದಕ್ಷಿಣೆಹಾಕುವವು. ಇವೆಲ್ಲ ಗ್ರಹಗಳು ಒಂದೆ ಪಾತಳಿಯಲ್ಲಿ ತಿರುಗುತ್ತಿರುವುದರಿಂದ ಮುಗಿಲ ಮೇಲೆ ಕ್ರಾಂತಿವೃತ್ತದಲ್ಲಿಯೇ ಚಲಿಸುತ್ತಿರುವಂತೆ ಕಾಣುವವು. ಆಕಾಶವು ಸ್ವಚ್ಛವಿದ್ದು ಕಗ್ಗತ್ತಲೆಯಿರುವಾಗ ಒಂದು ಬೆಳ್ಳನ್ನ ಮಸುಕು ಪ್ರವಾಹವು ಮುಗಿಲಿನ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹಬ್ಬಿರುವುದನ್ನು ನೋಡಬಹುದು. ಇದಕ್ಕೆ ನಾವು